More

    ಮಳೆಗಾಗಿ ಗುಡ್ಡೆಕಲ್ಲಿಗೆ 101 ಕೊಡ ನೀರೆರೆದ ಜನರು

    ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣದ ಕೋಟೆ ಮಾರುತೇಶ್ವರ ದೇವಸ್ಥಾನ ಬಳಿಯ ಗುಡ್ಡೆಕಲ್ಲಿಗೆ ಜನರು 101 ಕೊಡ ನೀರು ಹಾಕುವ ಮೂಲಕ ಸೋಮವಾರ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಪಟ್ಟಣದಲ್ಲಿ ಮಾರುತೇಶ್ವರ ಭಜನಾ ಮಂಡಳಿಯಿಂದ ಭಜನೆ ಮಾಡಿ ನಂತರ ಗುಡ್ಡೆಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆರಾಯನ ಆಗಮನವಾಗಲೆಂದು ಕೋರಿಕೊಂಡರು.

    ಇದನ್ನೂ ಓದಿ: ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ

    ಗ್ರಾಮದ ವಕೀಲ ಚಂದ್ರಶೇಖರ ತುರ್ವಿಹಾಳ ಮಾತನಾಡಿ, ತುರ್ವಿಹಾಳ ಪಟ್ಟಣದ ಹಿರಿಯರು, ಯುವಕರು ಶಿವಲಿಂಗಕ್ಕೆ 101 ಕೊಡ ನೀರು ಸುರಿದು, ಭಜನೆ, ದೇವರ ನಾಮಸ್ಮರಣೆ ಮೂಲಕ ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಳೆ ಬಾರದಿದ್ದಾಗ ಕಪ್ಪೆಗೆ ಮದುವೆ ಮಾಡುವುದು, ಕೊಡಗಳ ಮೂಲಕ ಶಿವಲಿಂಗಕ್ಕೆ ನೀರು ಹಾಕುವುದು, ಶಿವನಾಮಸ್ಮರಣೆ ಮಾಡುವುದು ಭಾರತೀಯ ಸಂಸ್ಕೃತಿಯಾಗಿದೆ ಎಂದರು.

    ಪಟ್ಟಣದ ಸುಂಕಲಮ್ಮ ದೇವಸ್ಥಾನದ ಬೋರ್‌ವೆಲ್‌ನಿಂದ ಕೋಟೆ ಮಾರುತೇಶ್ವರ ದೇವಸ್ಥಾನ ಬಳಿಯ ಗುಡ್ಡೇಕಲ್ಲಿಗೆ ಯಮನೂರಪ್ಪ ನಾಗರಬೆಂಚಿ ಎನ್ನುವವರು 101 ಕೊಡ ನೀರು ಹಾಕಿದರು. ಪ್ರಮುಖರಾದ ಶರಣಪ್ಪಗೌಡ, ಮಂಟೆಪ್ಪ ಎಲೆಕೂಡ್ಗಿ, ಚಂದ್ರಪ್ಪ, ಶಿವರಾಯಪ್ಪ, ಗುಂಡಪ್ಪ, ನಿಂಗಪ್ಪ ಜಾನೇಕಲ್, ಯಂಕಣ್ಣ, ಬಸವ ಎಲೆಕೂಡ್ಗಿ, ಬಸಪ್ಪ ನಾಗರಬೆಂಚಿ, ಶಿವರೆಡ್ಡೆಪ್ಪ ಬೇರ್ಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts