More

    ಬಡವರಿಗೆ ನರೇಗಾ ಅನುಕೂಲ

    ಚಿಕ್ಕೋಡಿ: ಮಹಾತ್ಮಗಾಂಧಿ ನರೇಗಾ ಯೋಜನೆ ಬಡವರಿಗೆ ಅನುಕೂಲವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಹೇಳಿದರು.

    ತಾಲೂಕಿನ ನೇಜ ಗ್ರಾಪಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು. ಗ್ರಾಪಂನಲ್ಲಿ ಕೂಲಿ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಕೆಲಸ ನೀಡಲಾಗುವುದು. 7 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ಪ್ರಾರಂಭಿಸಲಾಗಿದೆ. ರೈತರು ಸ್ವಂತ ಜಮೀನಿನಲ್ಲಿ ವೈಯಕ್ತಿಕ ಕೆಲಸ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.

    ಕಳೆದ ವರ್ಷ 100 ದಿನ ಕೂಲಿ ಕೆಲಸ ಮಾಡಿದ ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಕೂಲಿ ಕಾರ್ಮಿಕರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

    ರಾಜುಗೌಡ ಪಾಟೀಲ, ಮೋಹನ ಕಾಂಬಳೆ, ಚಂದ್ರಕಾಂತ ಕಿಲಾರೆ, ಮೋಹನ ನರುಮಾಳೆ, ಪಿಡಿಒ ಕುಮಾರ ಢಂಗ, ಗ್ರಾಪಂ ಕಾರ್ಯದರ್ಶಿ ಬಾಬುರಾವ ವಂಟಗುಡೆ, ತಾಂತ್ರಿಕ ಸಿಬ್ಬಂದಿ ಪ್ರಕಾಶ ನಾವಿ, ಐಇಸಿ ಸಂಯೋಜಕ ರಂಜೀತ ಕಾಂಬಳೆ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಅಜ್ಜಪ್ಪ ತಳವಾರ, ಹೇಮಾ ಅಮಾತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts