ಬಲಿಗಾಗಿ ಕಾಯುತ್ತಿವೆ ಟಿಸಿ!

ಅಥಣಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ ಮತ್ತು ವೃತ್ತಗಳಲ್ಲಿರುವ ವಿದ್ಯುತ್ ಪರಿವರ್ತಕಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇವುಗಳ ಬಗ್ಗೆ ಹೆಸ್ಕಾಂ ನಿರ್ಲಕ್ಷ್ಯ ವಹಿಸಿದ್ದು, ಜನರು ಅಪಾಯದ ಆತಂಕದಲ್ಲಿಯೇ ಸಂಚರಿಸುವಂತಾಗಿದೆ.

ಪಟ್ಟಣದ ವಿವಿಧೆಡೆ ಜನ ಸಂಚರಿಸುವ ರಸ್ತೆ ಸಮೀಪ ಮತ್ತು ಕೈಗೆ ನಿಲುಕುವಂತೆ ಟಿಸಿ ಅಳವಡಿಸಲಾಗಿದೆ. ಅವುಗಳನ್ನು ಯಾರಿಗೂ ಅಪಾಯವಾಗದ ಸ್ಥಳದಲ್ಲಿ ಅಳವಡಿಸಬೇಕು. ಆದರೆ, ರಸ್ತೆ ಪಕ್ಕದ ಜನನಿಬಿಡ ಪ್ರದೇಶದಲ್ಲಿ ಅಳವಡಿಸಲಾಗಿದೆ. ಅಲ್ಲದೆ, ವಿದ್ಯುತ್
ಬಾಕ್ಸ್‌ಗಳನ್ನು ಮುಚ್ಚದೆ ಹಾಗೇ ಬಿಡಲಾಗಿದೆ. ಮುಚ್ಚಳಗಳು ತೆರೆದುಕೊಂಡು ಪಕ್ಕದಲ್ಲಿ ಸಂಚರಿಸುವವರಿಗೆ ತಾಗುವಂತೆ ಅತ್ಯಂತ ಸಮೀಪದಲ್ಲಿವೆ. ಅಪ್ಪಿತಪ್ಪಿ ಯಾರಿಗಾದರೂ ತಗುಲಿದರೆ ಅವರ ಪ್ರಾಣಕ್ಕೆ ಕುತ್ತು ಖಚಿತ. ಚಿಕ್ಕ ಮಕ್ಕಳು, ಬಿಡಾಡಿ ದನಗಳಿಗೆ ಅಪಾಯವಾಗುವ ಆತಂಕವಿದೆ. ಆದರೆ, ಈ ಸಮಸ್ಯೆ ಕಂಡರೂ ಕಾಣದಂತೆ ಹೆಸ್ಕಾಂ ಮೌನ ವಹಿಸಿದೆ.

ಪಟ್ಟಣದ ಶಂಕರ ನಗರ, ಪಾಂಗಿ ಆಸ್ಪತ್ರೆ, ತಹಸೀಲ್ದಾರ್ ನಿವಾಸದ ಎದುರು, ಐ.ಬಿ. ರಸ್ತೆ, ಮುಖ್ಯ ಬಜಾರ್ ಸೇರಿ ವಿವಿಧೆಡೆ ಬೃಹತ್ ಟಿಸಿಗಳಿವೆ. ಇವುಗಳು ಅಧಿಕ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಅದರಲ್ಲೂ ಹಳೇ ಪುರಸಭೆ ಸಮೀಪ ಇರುವ ಮುಖ್ಯ ರಸ್ತೆಯಲ್ಲಿರುವ ನಾಲ್ಕು ರಸ್ತೆಗಳ ತಿರುವಿಗೆ ಬೃಹತ್ ಎರಡು ಟಿಸಿಗಳಿದ್ದು, ಬಾಕ್ಸ್‌ಗಳನ್ನು ಮುಚ್ಚಿಲ್ಲ. ಟಿಸಿಯಲ್ಲಿನ ಬಾಕ್ಸ್ ಮುಚ್ಚಲು ಹಾಗೂ ಟಿಸಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಅಳವಡಿಸಬೇಕು. ಕೆಲವೆಡೆ ಸ್ವಲ್ಪ ಎತ್ತರಕ್ಕೆ ಏರಿಸಬೇಕು ಅಥವಾ ಕಾಂಪೌಂಡ್ ರೀತಿಯಲ್ಲಿ ಜನರಿಗೆ ತಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಟಿಸಿಗಳಿಗೆ ಕಾಂಪೌಂಡ್ ಮತ್ತು ಗ್ರಿಲ್ ಅಳವಡಿಸಲು ಸ್ಥಳದ ಅವಶ್ಯಕತೆ ಕೂಡ ಇರುತ್ತದೆ. ಹೀಗಾಗಿ ಪುರಸಭೆಯ ಸಹಕಾರ ನಮಗೆ ಅಗತ್ಯವಿದೆ. ವಿದ್ಯುತ್ ಪರಿವರ್ತಕಗಳಿಂದಾಗುವ ಸಮಸ್ಯೆ ಸರಿಪಡಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಯಾವುದೇ ಅಪಾಯವಾಗದಂತೆ ಕ್ರಮ ವಹಿಸಲಾಗುವುದು.
| ಎ.ಎಸ್. ಮಲಕಪ್ಪ ಸಹಾಯಕ ಅಭಿಯಂತ, ಅಥಣಿ ಹೆಸ್ಕಾಂ

ಅಥಣಿ ಪಟ್ಟಣದ ವಿವಿಧ ಬಡಾವಣೆಯಲ್ಲಿರುವ ಟಿಸಿಗಳು ಯಾವುದೇ ಸುರಕ್ಷತಾ ಪೆಟ್ಟಿಗೆ ಇಲ್ಲದೇ ವಿದ್ಯುತ್ ವೈರ್‌ಗಳು ಹೊರಗಡೆ ನೇತಾಡುತ್ತಿವೆ. ಇವುಗಳ ಪಕ್ಕ ಶಿಕ್ಷಣ ಸಂಸ್ಥೆಗಳಿವೆ. ಆಟೋಸ್ಟಾೃಂಡ್ ಇವೆ. ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಇವುಗಳ ಪಕ್ಕ ಸಂಚರಿಸುತ್ತಾರೆ. ಟಿಸಿ ಅವ್ಯವಸ್ಥೆ ಸರಿಪಡಿಸಲು ಹೆಸ್ಕಾಂನವರು ಶೀಘ್ರ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ.
| ಆನಂದ ಟೋನಪಿ ಸಮಾಜ ಸೇವಕ, ಅಥಣಿ

| ರಾಜು ಎಸ್.ಗಾಲಿ ಅಥಣಿ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…