More

    2 ಸಾವಿರಕ್ಕೂ ಅಧಿಕ ಗಣ್ಯರ ಉಪಸ್ಥಿತಿಯಲ್ಲಿ ರಾಣಿ ಎಲಿಜಬೆತ್​ ಅಂತ್ಯಸಂಸ್ಕಾರ!

    ಲಂಡನ್​: ಯುನೈಟೆಡ್​ ಕಿಂಗ್​ಡಮ್​​ನ ರಾಣಿ ಎಲಿಜಬೆತ್ II ಅವರ ಅಂತಿಮಸಂಸ್ಕಾರ ಲಂಡನ್​ನ ವೆಸ್ಟ್​​ಮಿನಿಸ್ಟರ್​ ಅಬೆನಲ್ಲಿ ಇಂದು ನಡೆಯುತ್ತಿದ್ದು, ಇದರಲ್ಲಿ ದೇಶ-ವಿದೇಶದ 2000ಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದಾರೆ.

    ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಸೇರಿ ದೇಶ-ವಿದೇಶದ 2 ಸಾವಿರಕ್ಕೂ ಅಧಿಕ ಗಣ್ಯರು ಇದಕ್ಕೆ ಸಾಕ್ಷಿಯಾಗಿದ್ದು, ಈ ಮೂಲಕ 11 ದಿನಗಳ ಶೋಕಾಚರಣೆ ಇದರೊಂದಿಗೆ ಅಂತ್ಯಗೊಳ್ಳಲಿದೆ. ಬ್ರಿಟನ್​ನ ಪ್ರಥಮ ಪ್ರಧಾನಿ ವಿನ್​ಸ್ಟನ್ ಚರ್ಚಿಲ್​ ಅವರ ಅಂತ್ಯಸಂಸ್ಕಾರ 1965ರಲ್ಲಿ ಜಾಗತಿಕ ಗಮನ ಸೆಳೆದು ಅದ್ಧೂರಿಯಾಗಿ ನಡೆದಿತ್ತು. ಆ ಬಳಿಕ ನಡೆಯುತ್ತಿರುವ ಮತ್ತೊಂದು ಅದ್ಧೂರಿ ಅಂತಿಮಸಂಸ್ಕಾರ ಇದಾಗಿದೆ.

    ರಾಣಿಯ ಹಿರಿಯ ಪುತ್ರ, ಉತ್ತರಾಧಿಕಾರಿ ಕಿಂಗ್ ಚಾರ್ಲ್ಸ್​ III ಸಂಪ್ರದಾಯದಂತೆ ಉಡುಪು ತೊಟ್ಟು ಇದರಲ್ಲಿ ಭಾಗವಹಿಸಿದ್ದು, ಬಕಿಂಗ್​ಹ್ಯಾಂ ಅರಮನೆಯಿಂದ ಬೆಳಗ್ಗೆಯೇ ಪಾರ್ಥಿವ ಶರೀರದ ಮೆರವಣಿಗೆ ಸಾಗಿದ್ದು, 1953ರಲ್ಲಿ ರಾಣಿ ಕಿರೀಟ ತೊಟ್ಟ ವೆಸ್ಟ್​ಮಿನಿಸ್ಟರ್​ ಅಬೆನಲ್ಲಿ ಈ ಅಂತಿಮ ಸಂಸ್ಕಾರ ನಡೆಯುತ್ತಿದೆ.

    ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts