More

    ಭಕ್ತರಿಗೆ ಮೂಲಸೌಕರ್ಯ ಒದಗಿಸಿ

    ಹೂವಿನಹಡಗಲಿ: ತಾಲೂಕಿನ ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಶ್ರೀಗಳ ಮಠದ ಜಂಗಮೋತ್ಸವ, ಬಣಜಿಗ ಸಮಾಜದ ಮೈಲಾರ ಬಸವಲಿಂಗ ಶರಣರ ಸ್ಮರಣೋತ್ಸವಕ್ಕೆ ಆಗಮಿಸುವ ಭಕ್ತರಗೆ ಯಾವುದೇ ಸಮಸ್ಯೆಯಾಗದಂತೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ತಹಸೀಲ್ದಾರ್ ಕೆ.ಶರಣಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇದನ್ನೂ ಓದಿ: ಒಡಿಒಪಿ ಮೂಲಕ ಮಂಡ್ಯದ ಆಲೆಮನೆಗಳಿಗೆ ಆನೆಬಲ

    ತಾಲೂಕಿನ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಗಳಮಠದಲ್ಲಿ ಶನಿವಾರ ನಡೆದ ಡಿ.18ರಿಂದ ಮೂರು ದಿನಗಳು ನಡೆಯುವ ಚನ್ನವೀರ ಶ್ರೀಗಳ ಮಠದ ಜಂಗಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಪ್ರತಿವರ್ಷ ಜರುಗುವ ಕಾರ್ಯಕ್ರಮಕ್ಕೆ ನಾಡಿನ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಯಾರಗೂ ತೊಂದರೆಯಾಗದಂತೆ ಗ್ರಾಮವನ್ನು ಸ್ವಚ್ಚಗೊಳಿಸಿ ನೈರ್ಮಲ್ಯ ಕಾಪಾಡಬೇಕು. ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ರಸ್ತೆ ಕಾಮಗಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು.

    ಪ್ರತಿವರ್ಷದಂತೆ ಈ ಬಾರಿಯೂ ಶ್ರೀಗಳು ಕೃಷಿಮೇಳ ಏರ್ಪಡಿಸಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ನೂತನ ಕೃಷಿ ಯಂತ್ರೋಪಕರಣಗಳ ಪರಿಚಯ ಹಾಗೂ ಅವುಗಳ ಬಳಕೆ ಸೇರಿ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.

    ಶ್ರೀಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಸಮಾಜದ ವಿವಿಧ ಸಮುದಾಯಗಳ ಒಬ್ಬೊಬ್ಬ ಶರಣರ ಸ್ಮರಣೋತ್ಸವ ನಡೆಸಿಕೊಂಡು ಬಂದಂತೆ ಈ ಬಾರಿ ತ್ರಿಪದಿಗಳ ಮೂಲಕ ವೀರಶೈವ ಸಮಾಜಕ್ಕೆ ಸಂವಿಧಾನದಂತಿರುವ ಗುರುಕರಣ ತ್ರಿಪದಿಗಳನ್ನು ನೀಡಿರುವ ಬಣಜಿಗ ಕುಲದ ಮೈಲಾರದ ಶ್ರೀಬಸವಲಿಂಗ ಶರಣರ ಸ್ಮರಣೋತ್ಸವ ಮಾಡಲಾಗುತ್ತಿದೆ. ನಾಡಿನ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

    ತಾ.ಪಂ.ಇಒ ಅಧಿಕಾರಿ ಜಯರಾಮ್ ಚವ್ಹಾಣ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಮ್ಮದ ಅಶ್ರಫ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ ಆರ್, ಕುರುವತ್ತಿ ಗ್ರಾ.ಪಂ ಅಧ್ಯಕ್ಷ ಭರಮಪ್ಪ ಕುಂಚೂರು, ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಉಮೇಶ ಮುಂಡವಾಡ, ಉಪಾಧ್ಯಕ್ಷ ಮುರುಗೇಶ ತುರುಕಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts