More

    ಕರೊನಾ ಸೋಂಕಿತರಿಗೆ ಪ್ರಾಣಿಗಳ ರಕ್ತದಲ್ಲಿದೆ ಪರಿಹಾರ.. ಆ್ಯಂಟಿಸೀರಂ ಚಿಕಿತ್ಸೆ…

    ನವದೆಹಲಿ: ಕರೊನಾ ಸೋಂಕಿನಿಂದ ಪಾರಾಗಲು ಜಗತ್ತಿನಾದ್ಯಂತ ಔಷಧ ಸಂಶೋಧನೆ, ನಾನಾ ಲಸಿಕೆಗಳ ಟ್ರಯಲ್​ಗಳು ನಡೆಯುತ್ತಲೇ ಇದೆ. ಮತ್ತೊಂದೆಡೆ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಪ್ರಾಣಿಗಳ ರಕ್ತದಲ್ಲಿ ಪರಿಹಾರವಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ.

    ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ (ಐಸಿಎಂಆರ್​) ಹಾಗೂ ಹೈದರಾಬಾದ್ ಮೂಲದ ಔಷಧ ಕಂಪನಿ ಬಯಲಾಜಿಕಲ್ ಇ. ಲಿಮಿಟೆಡ್​ ಜತೆಯಾಗಿ ಇಂಥದ್ದೊಂದು ಪರಿಹಾರವನ್ನು ಕಂಡುಕೊಂಡಿವೆ.

    ಪ್ರಾಣಿಗಳ ರಕ್ತದಲ್ಲಿನ ಆ್ಯಂಟಿಸೀರಂ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ದೇಹಕ್ಕೆ ಇಂಜೆಕ್ಟ್​ ಮಾಡುವ ಮೂಲಕ ಕೋವಿಡ್​-19ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂಬುದನ್ನು ಐಸಿಎಂಆರ್ ಹಾಗೂ ಬಯಾಲಜಿಕಲ್ ಇ. ಲಿಮಿಟೆಡ್ ಸಂಶೋಧನೆ ನಡೆಸಿವೆ.

    ಪ್ಲಾಸ್ಮಾ ಚಿಕಿತ್ಸೆ ಬಳಿಕ ಇದು ಇನ್ನೊಂದು ಮಹತ್ವದ ಚಿಕಿತ್ಸಾ ವಿಧಾನವಾಗಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಅಂಥ ಫಲಿತಾಂಶ ಸಿಗದಿದ್ದರೂ ಇದೀಗ ಆ್ಯಂಟಿಸೀರಂ​ ಥೆರಪಿ ಬಗ್ಗೆ ಐಸಿಎಂಆರ್​ ವಿಶ್ವಾಸ ಇರಿಸಿಕೊಂಡಿದೆ ಎನ್ನಲಾಗಿದೆ.

    464 ಮಂದಿಯನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದ್ದು, ಏಪ್ರಿಲ್​ 22ರಿಂದ ಜುಲೈ 14ರ ಅವಧಿಯಲ್ಲಿ ಟ್ರಯಲ್​ ಕೈಗೊಳ್ಳಲಾಗಿದೆ. ಅದಾಗ್ಯೂ ಐಸಿಎಂಆರ್​ ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts