More

    ಪೌರಕಾರ್ಮಿಕರಿಗೆ ಎಲ್ಲರೂ ಗೌರವ ನೀಡಿ

    ಗೋಕಾಕ: ನಗರವನ್ನು ಸ್ವಚ್ಛಗೊಳಿಸಿ ಜನತೆಗೆ ಸುಂದರ ಪರಿಸರ ನೀಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಅವರಿಗೆ ಗೌರವ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

    ನಗರದ ಹೊರ ವಲಯದ ನಾಕಾ ನಂ-1ರ ಅಡಿಬಟ್ಟಿ ಬಡಾವಣೆಯಲ್ಲಿ ನಗರಸಭೆ ಗೃಹಭಾಗ್ಯ ಯೋಜನೆಯಡಿ 1.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೌರ ಕಾರ್ಮಿಕರ ವಸತಿ ಸಮುಚ್ಚಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ಕಠಿಣ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜನತೆ ಹಾಗೂ ಸಂಘ-ಸಂಸ್ಥೆಗಳು ಅವರ ಕಾರ್ಯವನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

    ನಂತರ ಪೌರಕಾರ್ಮಿಕರ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ಪೌರಾಯುಕ್ತ ಶಿವಾನಂದ ಹಿರೇಮಠ, ಅಧಿಕಾರಿಗಳಾದ ಎಂ.ಎಚ್. ಗಜಾಕೋಶ, ವಿ.ಎಂ. ಸಾಲಿಮಠ, ವಿನೋದ ಪಾಟೀಲ, ಬಸವರಾಜ ಗಂಗರೆಡ್ಡಿ, ನಗರಸಭೆ ಸದಸ್ಯರಾದ ಅಬ್ದುಲ್ ರೆಹಮಾನ್ ದೇಸಾಯಿ, ಜಯಾನಂದ ಹುಣಶ್ಯಾಳ, ಬಸವರಾಜ ಅರೆಣ್ಣವರ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ದುರ್ಗಪ್ಪ, ಅಬ್ದುಲ್ ಜಮಾದರ, ಕಾಶಿಂ ಖಲೀಫ್, ವಿಶ್ವನಾಥ ಬಿಳ್ಳೂರ, ಶ್ರೀಶೈಲ ಪೂಜೇರಿ, ಶಫೀ ಜಮಾದರ್, ಲಕ್ಷ್ಮಣ ಖಡಕಬಾವಿ, ಪ್ರೇಮಾ ಭಂಡಾರಿ, ಜ್ಯೋತಿ ಕೋಲಾರ, ಕಿರಣ ಬೆಣಚಿನಮರಡಿ, ಜ್ಯೋತಿಬಾ ಸುಬಂಜಿ, ಎಸ್.ವಿ. ದೇಮಶೆಟ್ಟಿ, ಚಿದಾನಂದ ದೇಮಶೆಟ್ಟಿ, ಶಿವಾನಂದ ಚೌಕಾಶಿ, ಯಲ್ಲಪ್ಪ ಹಳ್ಳೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts