More

    ಬಿಜೆಪಿಗೆ ಮಂಗಲ ಅಂಗಡಿ ಸದ್ಯ ಅನಿವಾರ್ಯ

    ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಬಿಜೆಪಿಗೆ ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಅನಿವಾರ್ಯ ಎಂಬ ಸ್ಥಳೀಯ ಕಾರ್ಯಕರ್ತರ, ಮುಖಂಡರ ಅಭಿಪ್ರಾಯಕ್ಕೆ ಹೈಕಮಾಂಡ್ ಮನ್ನಣೆ ನೀಡಿದೆ.

    2020ರ ಸೆಪ್ಟೆಂಬರ್ 23ರಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಅಕಾಲಿಕ ನಿಧನರಾದರು. ಬಳಿಕ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಪಕ್ಷದಲ್ಲಿ ಗುಂಪುಗಾರಿಕೆ, ಸ್ಪರ್ಧೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಅಲ್ಲದೆ, ಯಾರೇ ಸ್ಪರ್ಧಿಸಿದರೂ ಒಬ್ಬರನ್ನು ಸೋಲಿಸಲು ಮತ್ತೊಬ್ಬರು ಪರೋಕ್ಷವಾಗಿ ಪ್ರಯತ್ನಿ ಸುವ ಸಾಧ್ಯತೆಯಿದೆ ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೈಕಮಾಂಡ್ ಗಮನ ಸೆಳೆದಿದ್ದರು.

    ಅಸ್ತು ಎಂದ ಹೈಕಮಾಂಡ್: ಮತ್ತೊಂದೆಡೆ, ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಥವಾ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇವರಿಬ್ಬರಲ್ಲಿ ಒಬ್ಬರು ಸ್ಪರ್ಧಿಸುವುದು ಖಚಿತವಾಗಿತ್ತು. ಹಾಗಾಗಿ, ಬಿಜೆಪಿಯಿಂದಲೂ ಅಷ್ಟೇ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕು.

    ಜತೆಗೆ ದಿ.ಸುರೇಶ ಅಂಗಡಿ ಅವರ ಅನುಕಂಪದ ಅಲೆಯನ್ನೂ ಮತವನ್ನಾಗಿಸಿಕೊಳ್ಳಬೇಕು. ಅಲ್ಲದೆ, ಪಕ್ಷದಲ್ಲಿ ಉಂಟಾಗಿರುವ ಕಂದಕ ಮುಚ್ಚಲು ಸದ್ಯ ದಿ.ಸುರೇಶ ಅಂಗಡಿ ಪತ್ನಿ ಮಂಗಲ ಅವರೇ ಅನಿವಾರ್ಯವಾಗಿದ್ದಾರೆ. ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದು ಜಿಲ್ಲೆಯ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಲ್ಲಿಸಿದ ಆಂತರಿಕ ಸಮೀಕ್ಷಾ ವರದಿಗೆ ಬಿಜೆಪಿ ಹೈಕಮಾಂಡ್ ‘ಅಸ್ತು’ ಎಂದಿದೆ.

    ಒಂದು ವೇಳೆ ಮಂಗಲಾ ಅಂಗಡಿ ಅವರ ಬದಲಾಗಿ ಹೊಸ ಮುಖಕ್ಕೆ ಅವಕಾಶ ನೀಡಿದರೆ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲ್ಲಲು ಶತ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್‌ಗೆ ನಾವೇ ಕ್ಷೇತ್ರ ಬಿಟ್ಟುಕೊಟ್ಟಂತಾಗುತ್ತದೆ. ಲಿಂಗಾಯತ, ಮರಾಠಿ ಮತಗಳೂ ವಿಭಜನೆಗೊಂಡು ಪಕ್ಷಕ್ಕೆ ಅಪಾರ ನಷ್ಟವಾಗಲಿದೆ ಎಂದು ಕಾರ್ಯಕರ್ತರೇ ಬೆಳಗಾವಿ ಕ್ಷೇತ್ರದ ಸಮಗ್ರ ಮಾಹಿತಿಯಿರುವ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts