More

    ಫುಟ್‌ಪಾತ್‌ನಲ್ಲಿನ ಗೂಡಂಗಡಿ ತೆರವು

    ರಾಯಚೂರು: ಇತ್ತೀಚೆಗೆ ಜರುಗಿದ ಅಪಘಾತದಲ್ಲಿ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಜರುಗಿದ ನಂತರ ಎಚ್ಚೆತ್ತುಕೊಂಡಿರುವ ಪೊಲೀಸರು ಮತ್ತು ನಗರಸಭೆ ಅಕಾರಿಗಳು ನಗರದ ಸ್ಟೇಷನ್ ರಸ್ತೆಯಲ್ಲಿನ ಫುಟ್ ಪಾತ್ ಮೇಲಿನ ಗೂಡಂಗಡಿಗಳನ್ನು ಗುರುವಾರ ತೆರವುಗೊಳಿಸಲು ಆರಂಭಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ರಸ್ತೆಯಲ್ಲಿ ಹೆಚ್ಚಿನ ಓಡಾಟವಿರುತ್ತಿದ್ದು, ವ್ಯಾಪಾರಸ್ಥರು ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಪಾದಾಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ಓಡಾಡುವಂತಾಗಿತ್ತು.

    ಬಸವೇಶ್ವರ ವೃತ್ತದಿಂದ ಸ್ಟೇಷನ್ ವೃತ್ತದವರೆಗೆ ಫುಟ್‌ಪಾತ್‌ನಲ್ಲಿ ಹಣ್ಣಿನ ಅಂಗಡಿ ಸೇರಿದ ಇತರೆ ವಸ್ತುಗಳ ವ್ಯಾಪಾರ ನಡೆಸಲಾಗುತ್ತಿತ್ತು. ಕೆಲವರಂತು ಫುಟ್‌ಪಾತನ್ನೇ ಹೋಟೆಲ್ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದು, ಕೆಲವು ಅಂಗಡಿಗಳವರು ರಸ್ತೆವರೆಗೆ ಸಾಮಗ್ರಿಗಳನ್ನಿಟ್ಟು ಜನರು ಓಡಾಡದಂತೆ ಮಾಡಿದ್ದರು.

    ಇತ್ತೀಚೆಗೆ ಕಾರೊಂದು ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಘಟನೆ ನಂತರದಲ್ಲಿ ಪೊಲೀಸ್ ಉನ್ನತಾಕಾರಿಗಳು ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವಂತೆ ನೀಡಿದ ಸೂಚನೆ ಮೇರೆಗೆ ಅಕಾರಿಗಳು ಗುರುವಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

    ನಗರಸಭೆ ವಾಹನದಲ್ಲಿ ಫುಟ್‌ಪಾತ್‌ನಲ್ಲಿದ್ದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಕೆಲ ವ್ಯಾಪಾರಾಸ್ಥರು ವಿರೋಧ ವ್ಯಕ್ತಪಡಿಸಿ ನೋಟಿಸ್ ನೀಡಿಲ್ಲ ಎಂದು ವಾದ ನಡೆಸಿದರು. ನಿಮಗೆ ಯಾರು ಪರವಾನಗಿ ನೀಡಿಲ್ಲದ ಕಾರಣ ನೋಟಿಸ್ ನೀಡುವ ಅಗತ್ಯವಿಲ್ಲವೆಂದು ುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts