More

    ಊಟ ವೇಸ್ಟ್ ಮಾಡುವುದರಿಂದಲೂ ತಾಪಮಾನ ಏರಿಕೆಯಾಗುತ್ತೆ! ಹೇಗೆ? ಏನು? ಇಲ್ಲಿದೆ ಮಾಹಿತಿ..

    ಊಟ ವೇಸ್ಟ್ ಮಾಡುವುದರಿಂದಲೂ ತಾಪಮಾನ ಏರಿಕೆಯಾಗುತ್ತೆ! ಹೇಗೆ? ಏನು? ಇಲ್ಲಿದೆ ಮಾಹಿತಿ..ಖಾಸಗಿ ಸಂಸ್ಥೆಯೊಂದರಲ್ಲಿ, ಒಂದು ದಿವಸಕ್ಕೆ ಎಷ್ಟು ಬಕೆಟ್ ಊಟ ವೇಸ್ಟ್ ಆಗಬಹುದು? ಪ್ರತಿ ದಿವಸ ಅಂದಾಜು ನಾಲ್ಕರಿಂದ ಐದು ಬಕೆಟ್ ವೇಸ್ಟ್ ಆಗುತ್ತದೆ. ಒಂದೇ ಕಂಪನಿಯಲ್ಲಿ ಇಷ್ಟಾದರೆ ಸಾವಿರಾರು ಕಂಪನಿಗಳಿವೆಯಲ್ಲ? ಒಟ್ಟಿಗೆ ಎಷ್ಟಾಗಬಹುದು ಎಂದು ಯೋಚಿಸಿ ಆಶ್ಚರ್ಯವಾಯಿತು. ಇಂತಹ ಬಿಟ್ಟ ಆಹಾರ ಪದಾರ್ಥಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇದ್ದರೆ, ಅದರಿಂದ ಸಾಕಷ್ಟು ಮೀಥೇನ್ ಉತ್ಪತ್ತಿಯಾಗಿ ಜಾಗತಿಕ ತಾಪ ಏರಿಕೆಗೆ ಕಾರಣವಾಗುತ್ತದೆ.

    ವ್ಯರ್ಥವಾಗುತ್ತಿರುವ ಊಟದ ಬಗ್ಗೆ, ಅದರ ಹಿಂದೆ ರೈತ ಬೆವರು ಸುರಿಸಿರುವ ಬಗ್ಗೆ, ಏರುತ್ತಿರುವ ಇಂಗಾಲದ ಡೈಆಕ್ಸೈಡ್ ಬಗ್ಗೆ, ರಾಸಾಯನಿಕ ಗೊಬ್ಬರಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ವ್ಯವದಾನ ಇಲ್ಲ. ಆದರೆ, ಪ್ರಕೃತಿ ನೀಡಿದ ಊಟ ವ್ಯರ್ಥವಾಗುತ್ತಿದೆ. ಆ ಸಂದರ್ಭದಲ್ಲಿ ಊಟವಿಲ್ಲದೆ ಲಕ್ಷಾಂತರ ಜನ ಅಸುನೀಗುತ್ತಿದ್ದಾರೆ ಎನ್ನುವುದು ಅವರಿಗೆ ಜ್ಞಾಪಕಕ್ಕೆ ಬಾರದೆ ಮರೆತುಹೋಗುತ್ತದೆ. ಆದ್ದರಿಂದ ಇದರ ಬಗ್ಗೆ ಪ್ರತಿನಿತ್ಯ ಪದೇಪದೆ ಹೇಳುತ್ತಲೇ ಇರಬೇಕಾಗುತ್ತದೆ.

    ಗಮನದಲ್ಲಿರಲಿ:
    * ಪ್ರತಿ ದಿನ 20,000ಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಬಳಲಿ ಅಸುನೀಗುತ್ತಿದ್ದಾರೆ.
    * 20 ಕೋಟಿಗಿಂತಲೂ ಹೆಚ್ಚು ಜನ ಊಟವಿಲ್ಲದೆ ಮಲಗುತ್ತಿದ್ದಾರೆ.
    * ವಿಶ್ವಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಪ್ರತಿವರ್ಷ 1,300 ಕೋಟಿ ಟನ್‌ನಷ್ಟು ಆಹಾರ ಪದಾರ್ಥ ಬಳಕೆಯಾಗದೆ ವ್ಯರ್ಥವಾಗುತ್ತಿದೆ.
    * 100 ಕೋಟಿಗಿಂತಲೂ ಹೆಚ್ಚು ಮಕ್ಕಳು ಅಥವಾ ಪ್ರತಿ 7 ಜನರಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
    *ನಮ್ಮ ದೇಶದಲ್ಲಿ ಪ್ರತಿವರ್ಷ 58,000 ಕೋಟಿ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳು ಮತ್ತು ತರಕಾರಿಗಳು ಜನಸಾಮಾನ್ಯರ ಬಳಕೆಗೆ ಬಾರದೆ ಹಾಳಾಗುತ್ತಿವೆ, ರೈತ ಕಷ್ಟಪಟ್ಟ ದುಡಿಮೆ ವ್ಯರ್ಥವಾಗುತ್ತಿದೆ.
    * ಆಹಾರ ಪದಾರ್ಥಗಳನ್ನು ಬೇಕಾದ ಪ್ರಮಾಣದಲ್ಲಿ ಉಪಯೋಗಿಸದೆ ವ್ಯರ್ಥ ಮಾಡುವುದರಲ್ಲಿ ಆರ್ಥಿಕವಾಗಲಿ, ಪರಿಸರಕ್ಕಾಗಲಿ, ನಮ್ಮತನಕ್ಕಾಗಲಿ ಲಾಭವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts