More

    ಮಧುಮೇಹ ಕಡಿವಾಣಕ್ಕೆ ನಿಮ್ಮ ಮನೆಯಲ್ಲೇ ಸಿಗುವ 7 ಆಹಾರ ಪದಾರ್ಥಗಳು ಇವು…

    ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ಕೆಲವು ಗಂಭೀರ ಕಾಯಿಲೆಗಳನ್ನು ಉಂಟುಮಾಡಬಹುದು. ಇದು ಕೆಟ್ಟ ಆಹಾರ ಪದ್ಧತಿಯ ಪರಿಣಾಮ ಅಥವಾ ಅನುವಂಶಿಕವಾಗಿ ಸೇರಿಂದತೆ ಈ ಕಾಯಿಲೆ ಉಂಟಾಗಲು ಇಂತಹದ್ದೇ ಕಾರಣ ಎಂದು ಹೇಳಲಾಗುವುದಿಲ್ಲ. ಆದರೆ ಇದು ಆರಂಭದಲ್ಲಿ ಅಷ್ಟೊಂದು ಗಂಭೀರ ಅನಿಸದಿದ್ದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವಕ್ಕೆ ಮಾರಕವಾಗಬಹುದು.

    ಇತ್ತೀಚೆಗಂತೂ ಗರ್ಭದಲ್ಲಿನ ಶಿಶುವಿನಿಂದ ಹಿಡಿದು ವಯೋವೃದ್ಧರನ್ನೂ ಆವರಿಸಿಕೊಂಡಿರುವ ಸಾಮಾನ್ಯ ಆದರೆ ಗಂಭೀರ ಕಾಯಿಲೆ ಮಧುಮೇಹ. ಈ ಅಧಿಕ ರಕ್ತದ ಸಕ್ಕರೆ ಮಟ್ಟವು ನಿಮ್ಮ ಮೂತ್ರಪಿಂಡಗಳು, ಹೃದಯ ಸೇರಿದಂತೆ ಇತರ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ವೈದ್ಯರ ಸೂಚನೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಜೀವನಶೈಲಿ, ನಿಯಮಿತ ವ್ಯಾಯಾಮ ಹಾಗೂ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ರೂಢಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿರ್ವಹಿಸಬಹುದು. ಹಾಗಾದರೆ ನಾವಿಂದು ಡಯಾಬಿಟಿಸ್ ನಿಯಂತ್ರಿಸಲು ನಮ್ಮ ಮನೆಯಲ್ಲೇ ಇರುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

    1. ಚಿಯಾ ಮತ್ತು ಅಗಸೆ ಬೀಜಗಳು: ಮಧುಮೇಹಿಗಳಿಗೆ ಚಿಯಾ ಮತ್ತು ಅಗಸೆ ಬೀಜಗಳು ಅದ್ಬುತ ಪರಿಣಾಮ ಬೀರುತ್ತದೆ. ಅತ್ಯಧಿಕ ಫೈಬರ್ ಅಂಶಗಳಿಂದ ಮತ್ತು ಕಡಿಮೆ ಜೀರ್ಣಕಾರಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಚಿಯಾ ಬೀಜಗಳು ದೇಹದ ತೂಕ ನಿರ್ವಹಿಸಲು ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಅಗಸೆ ಬೀಜಗಳನ್ನು ಪುಡಿ ಮಾಡುವ ಅಗತ್ಯವಿಲ್ಲ. ಇವುಗಳನ್ನು ಸ್ವಲ್ಪ ಉಪ್ಪು ಹಾಕಿ, ಬೇಕಿದ್ದರೆ ಕಾಲು ಚಮಚ ಮೆಣಸುಪುಡಿ ಹಾಕಿ ಉರಿದು ಹಾಗೇ ತಿನ್ನಬಹದು. ಇದು ಕೂಡ ಡಯಾಬಿಟಿಸ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

    2. ಆಪಲ್ ಸೈಡರ್ ವಿನೆಗರ್: ಡಯಾಬಿಟಿಸ್ ನಿಯಂತ್ರಣದಲ್ಲಿ ಆಪಲ್ ಸೈಡರ್ ವಿನೆಗರ್(ಎಸಿವಿ) ಪಾತ್ರ ಮಹತ್ವದ್ದಾಗಿದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ವೈದ್ಯಕೀಯ ಅಧ್ಯಯನದ ಪ್ರಕಾರ ಎಸಿವಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಇದರ ಅತಿಯಾದ ಬಳಕೆಯು ಅಡ್ಡಪರಿಣಾಮ ಉಂಟುಮಾಡಬಹುದು. ಏಕೆಂದರೆ ಎಸಿವಿ ಹುದುಗಿಸಿದ ಅಸಿಟಿಕ್ ಆಮ್ಲ ಮತ್ತು ಹೆಚ್ಚಿನ ಆಮ್ಲೀಯತೆ ಹೊಂದಿರುವುದರಿಂದ ಸಣ್ಣ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಕುಡಿಯುವುದು ಒಳಿತು.

    3. ಬೆಂಡೆಕಾಯಿ(ಭಿಂಡಿ): ಫ್ಲೇವನಾಯ್ಡ್​ಗಳು ಮತ್ತು ಪಾಲಿಸ್ಯಾಕರೈಡ್‌ಗಳಂತಹ ರಕ್ತದ ಸಕ್ಕರೆ ಕಡಿಮೆಗೊಳಿಸುವ ಸಂಯುಕ್ತಗಳಿಂದ ಬೆಂಡೆಕಾಯಿ ಸಮೃದ್ಧವಾಗಿದೆ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎನ್ನುತ್ತಾರೆ ವೈದ್ಯರು.

    4. ಬ್ರೊಕೊಲಿ: ಬ್ರೊಕೊಲಿಯನ್ನು ಅಗಿಯುವಾಗ ಅಥವಾ ಕತ್ತರಿಸುವಾಗ ಸಲ್ಫೋರಾಫೇನ್ ಎಂಬ ಸಸ್ಯದ ಸಂಯುಕ್ತ ಉತ್ಪತ್ತಿಯಾಗುತ್ತದೆ. ಇದು ಬ್ಲಡ್ ಶುಗರ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಇದು ಗಮನಾರ್ಹವಾದ ಮಧುಮೇಹ-ವಿರೋಧಿ ಪರಿಣಾಮ ಹೊಂದಿದೆ. ಬ್ರೊಕೊಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ.

    5. ಬೀಜಗಳು ಮತ್ತು ಕಾಯಿಬೆಣ್ಣೆ: ಬಾದಾಮಿ ಮತ್ತು ಕಡಲೆಕಾಯಿಯಂತಹ ಬೀಜಗಳು ಮತ್ತು ಅದರೊಂದಿಗೆ ತಯಾರಿಸಿದ ನಟ್ ಬೆಣ್ಣೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಟೈಪ್ 2 ಮಧುಮೇಹ ಹೊಂದಿರುವವರಿಗೆ ತುಂಬಾ ಅನುಕೂಲಕಾರಿಯಾಗಿದೆ. ಚಿಯಾ ಬೀಜಗಳಂತೆ ಇವುಗಳೂ ನಾರಿನಂಶದಿಂದ ಸಂಪದ್ಭರಿತವಾಗಿವೆ. ಅಲ್ಲದೆ ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದೆ.

    6. ಮೊಟ್ಟೆಗಳು: ನೀವು ಮೊಟ್ಟೆ ಪ್ರಿಯರಾಗಿದ್ದರೆ, ಎರಡನೇ ಯೋಚನೆಯಿಲ್ಲದೆ ಅದನ್ನು ಮುಂದುವರಿಸಬಹುದು. ಮೊಟ್ಟೆಗಳು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುವುದಲ್ಲದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗವು ಹೆಚ್ಚಿನ ಪೋಷಕಾಂಶಗಳ ಭಂಡಾರವೇ ಆಗಿದೆ.

    7. ಬೀನ್ಸ್ ಮತ್ತು ಮಸೂರ: ಇವುಗಳು ಪೋಷಕಾಂಶಗಳಿಂದ ಮಾತ್ರ ಸಮೃದ್ಧವಾಗಿಲ್ಲ. ಇವುಗಳೊಂದಿಗೆ ಬೀನ್ಸ್ ನಿರೋಧಕ ಪಿಷ್ಟ ಮತ್ತು ಕರಗುವ ಫೈಬರ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಏರಿಳಿತವನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ. ಇದಲ್ಲದೆ ಬೀನ್ಸ್ ಮತ್ತು ಮಸೂರಗಳ ನಿಯಮಿತ ಸೇವನೆಯು ಮಧುಮೇಹ ಬೆಳವಣಿಗೆಯಿಂದ ರಕ್ಷಿಸುತ್ತದೆ ಎನ್ನುತ್ತಾರೆ ವೈದ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts