More

    ಜೀವನದಲ್ಲಿ ವಚನಗಳ ಮೌಲ್ಯ ಅಳವಡಿಸಿಕೊಳ್ಳಿ

    ಧಾರವಾಡ: ಮನಸನ್ನು ಶುದ್ಧಗೊಳಿಸುವ ಶಕ್ತಿ ಪ್ರವಚನಕ್ಕಿದೆ. ಆದರೆ, ಕೇವಲ ಆಲಿಸುವಿಕೆ ಹಾಗೂ ವಚನ ಪಠಣ ಮಾಡಿದರೆ ಸಾಲದು. ಅವುಗಳ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಮಖಂಡಿ ಓಲೆಮಠದ ಡಾ. ಚನ್ನಬಸವ ಸ್ವಾಮೀಜಿ ಹೇಳಿದರು.

    ನಗರದ ಮುರುಘಾ ಮಠದ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶರಣರ ಜೀವನ ದರ್ಶನ ಪ್ರವಚನಕ್ಕೆ ಶ್ರೀಮಠದಲ್ಲಿ ಭಾನುವಾರ ಸಂಜೆ ಅವರು ಚಾಲನೆ ನೀಡಿ ಆಶೀರ್ವಚನ ನೀಡಿದರು.

    ವಚನಗಳು ನಮ್ಮ ಬದುಕಿನ ಮೌಲ್ಯ ಹೆಚ್ಚಿಸುತ್ತವೆ. ವಚನಗಳನ್ನು ಪೂಜಿಸಿ, ಗೌರವಿಸಿ ಅವುಗಳ ಮೌಲ್ಯ ಅಳವಡಿಸಿಕೊಂಡವರು ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾರೆ. ಜ್ಞಾನ ದಾಸೋಹ, ಅನ್ನ ದಾಸೋಹ, ಆನುಭಾವ ದಾಸೋಹ ಇದ್ದಲ್ಲಿ ಪ್ರತಿಯೊಬ್ಬರ ಜೀವನ ಸಾತ್ವಿಕ ಮಾರ್ಗದತ್ತ ಸಾಗುತ್ತದೆ. ನಾವು ಮಾತ್ರ ಪ್ರವಚನದ ಶಿವಾನುಭವ ಅಳವಡಿಸಿಕೊಂಡರೆ ಸಾಲದು. ಮುಂದಿನ ಪೀಳಿಗೆಗೆ ತಲುಪಿಸಬೇಕು. ಆ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದರು.

    ಪ್ರವಚನ ನೀಡಿದ ಬೆಳವಿಗಿ ಚರಂತೇಶ್ವರ ಮಠದ ಶ್ರೀ ಶರಣಬಸವ ದೇವರು, ಮನುಷ್ಯನಲ್ಲಿ ಆಧ್ಯಾತ್ಮಿಕ ಮನೋಭಾವನೆ ಮೂಡಿಸಿ ಸಮಾಜದ ಉದ್ಧಾರದ ಕಾರ್ಯಗಳಿಗೆ ನೆರವಾಗಲು ಪ್ರವಚನಗಳು ಅವಶ್ಯಕ. ಪ್ರವಚನ ಆಲಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಂಡು, ಪಾಲನೆ ಮಾಡುತ್ತಾರೆ. ಇದರಿಂದ ಅವರ ಜೀವನವೂ ಪಾವನವಾಗುತ್ತದೆ ಎಂದರು.

    ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಎಸ್. ಪಾಟೀಲ, ಬಸವೇಶ್ವರ ರೂರಲ್ ಸಂಸ್ಥೆ ಅಧ್ಯಕ್ಷ ಶರಣಪ್ಪ ಕೊಟಗಿ, ಪ್ರಮುಖರಾದ ನಾಗರಾಜ ಪಟ್ಟಣಶೆಟ್ಟಿ, ಶಿವಶಂಕರ ಹಂಪಣ್ಣವರ, ಡಿ.ಬಿ. ಲಕಮನಹಳ್ಳಿ, ಇತರರು ಇದ್ದರು.

    ಮಾರ್ಗ ಹಾಗೂ ಸನ್ಮಾರ್ಗದ ನಡುವಿನ ಅಂತರ ಅರಿತು ಸಾಗಿದರೆ ಸಂಸ್ಕೃತಿ, ಪರಂಪರೆಗಳನ್ನು ಮುನ್ನಡೆಸಬಹುದು. ಪ್ರವಚನ ಆಲಿಸಿ, ಸನ್ಮಾರ್ಗದತ್ತ ಸಾಗಿದಾಗ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ.
    | ಸಿ.ಎಂ. ನಿಂಬಣ್ಣವರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts