More

    ಸಾಹಿತ್ಯಕ್ಕೆ ಜಾನಪದ ಕೊಡುಗೆ ಅಪಾರ

    ಎನ್.ಆರ್.ಪುರ: ಸಾಹಿತ್ಯಕ್ಕೆ ಜಾನಪದ ಕೊಡುಗೆ ಅಪಾರ ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್.ರಾಜಕುಮಾರ್ ಹೇಳಿದರು.

    ಖಂಡೋಜಿ ಗಣಪತಿ ಮತ್ತು ಸಹೋದರರ ದತ್ತಿ ಉಪನ್ಯಾಸದಲ್ಲಿ ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಎಂಬ ವಿಷಯದ ಕುರಿತು ಮಾತನಾಡಿ, ಹಿರಿಯರು ಸಂಬಂಧಗಳಿಗೆ ಗೌರವ ಕೊಡುತ್ತಿದ್ದರು. ಅಣ್ಣ-ತಂಗಿ, ತಾಯಿ-ತಂದೆ ಸಂಬಂಧಕ್ಕೆ ಬಹಳ ಗೌರವವಿತ್ತು. ಕನ್ನಡ ಜಾನಪದ ಸಾಹಿತ್ಯದಲ್ಲಿ ಇಂಥ ಸಂಬಂಧಗಳ ಕುರಿತು ಸುಂದರವಾಗಿ ವರ್ಣನೆ ಮಾಡಲಾಗಿದೆ. ಜಾನಪದ ಸಾಹಿತ್ಯ ಲೋಕಕ್ಕೆ ವರದಾನವಾಗಿದೆ. ಜಾನಪದದಿಂದ ಸಾಹಿತ್ಯ ಲೋಕಕ್ಕೆ ಹೆಚ್ಚು ಮೆರುಗು ಬಂದಿದೆ. ಗಂಡನಿಲ್ಲದ ಹೆಣ್ಣಿನ ಬಾಳು, ತಾಯಿ ಇಲ್ಲದ ತವರಿನ ಬಗ್ಗೆ ಜಾನಪದದಲ್ಲಿ ಮಾಡಿರುವ ವರ್ಣನೆ ಅದ್ಭುತವಾದೆ ಎಂದರು.
    ಆಡು ಭಾಷೆಯಲ್ಲಿ, ಬಾಯಿಂದ ಬಾಯಿಗೆ ಸುಲಭವಾಗಿ ಜಾನಪದ ಹರಡುತ್ತದೆ. ಆಡಿ ಬಾ ಎನ ಕಂದ ಅಂಗಾಲ ತೊಳೆದೇನಾ, ತೆಂಗಿನ ಕಾಯಿ ತಿಳಿ ನೀರ ತಕ್ಕಂಡು ಬಂಗಾರ ಮಾರೆ ತೊಳೆದೇನಾ…ಹೀಗೆ ತಾಯಿ ತನ್ನ ಕಂದನನ್ನು ಬಣ್ಣಿಸುವ ರೀತಿ ಯಾವ ಸಾಹಿತ್ಯದಲ್ಲೂ ವರ್ಣನೆ ಮಾಡಲು ಅಸಾಧ್ಯ ಎಂದು ಹೇಳಿದರು.
    ತಾಲೂಕು ಕಸಪಾ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ದತ್ತಿ ದಾನಿಗಳು ಹೆಚ್ಚೆಚ್ಚು ದತ್ತಿಗಳನ್ನು ನೀಡಲು ಮುಂದಾಗಬೇಕು. ದತ್ತಿ ಉಪನ್ಯಾಸ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.
    ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ದತ್ತಿ ಉಪನ್ಯಾಸಗಳಲ್ಲಿ ನೀಡಿರುವ ವಿಷಯಗಳು ಅರ್ಥಗರ್ಭಿತ ಹಾಗೂ ಕಾಲಕ್ಕೆ ತಕ್ಕಂತಿವೆ. ತಾಲೂಕು ಕಸಾಪ ನಮ್ಮ ಜಿಲ್ಲೆಯಲ್ಲಿಯೇ ಮಾದರಿ ಘಟಕವಾಗಿ ಹೊರಹೊಮ್ಮುತ್ತಿದೆ. ನನ್ನ ಮಕ್ಕಳೂ ಇಂಥ ಕಸಾಪಕ್ಕೆ ದತ್ತಿ ನೀಡುವಂತಾಗಬೇಕು ಎಂದರು.
    ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕಸಾಪಕ್ಕೆ ಬಹಳಷ್ಟು ಮಂದಿ ಕೈ ಜೋಡಿಸಿದ್ದಾರೆ. ಎಲ್ಲರ ಸಹಕಾರದಿಂದ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡ ಬೆಳೆಸಲಾಗುವುದು ಎಂದರು.
    ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಯಾಸೀನ್ ಅಹಮ್ಮದ್, ಬಿಂದುಸಾರ ಹಾಗೂ ಬಿಆರ್‌ಸಿಗಳಾದ ವಿಜಯಕುಮಾರ್, ಎಂ.ಜಯಣ್ಣ, ಎಸ್.ಜಿ.ರಾಜಾನಾಯ್ಕ ಹಾಗೂ ದತ್ತಿ ದಾನಿ ಕೆ.ಗಣಪತಿ ಅವರನ್ನು ಗೌರವಿಸಲಾಯಿತು.
    ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್, ನಿವತ್ತ ಆರೋಗ್ಯಾಧಿಕಾರಿ ಪಿ.ಪ್ರಭಾಕರ್, ಪ್ರೇಮಾ ಶ್ರೀನಿವಾಸ್, ಸುಚಿತ್ರಾ, ಎಸ್.ಡಿ.ಶ್ರುತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts