ಅಹಮದಾಬಾದ್: ಗುಜರಾತಿನ ಕಚ್ ಜಿಲ್ಲೆಯ ರಾಪರ್ನಲ್ಲಿ ನಡೆದ ರಾತ್ರಿಯ ಸಂಗೀತ ಕಛೇರಿ ಸಮಯದಲ್ಲಿ ಗಾಯಕಿ ಗೀತಾ ಬೆನ್ ರಾಬರಿ ಮೇಲೆ ನೋಟಿನ ಸುರಿ ಮಳೆಯಾಗಿದೆ.
ಮೂಲಗಳ ಪ್ರಕಾರ ಗಾಯಕಿ ಮೇಲೆ ಸುರಿದ ನೋಟುಗಳ ಒಟ್ಟು ಮೊತ್ತ 4 ಕೋಟಿ ರೂ. ಅಂದಾಜಿಸಲಾಗಿದೆ.
ಗೋವುಗಳ ರಕ್ಷಣೆಗೆ ಹಣ
ಸಂಗೀತ ಕೇಳಲು ಬಂದವರು ಹಾಡಿನಲ್ಲಿ ಮಗ್ನರಾಗಿ ವೇದಿಕೆ ಮೇಲೆ ಹಣ ಎಸೆದರು. ಗೀತಾ ಹಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೀತಾ ಅವರು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಗೋವುಗಳ ರಕ್ಷಣೆಗಾಗಿ ಇಷ್ಟು ಹಣವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಮಹಿಳೆಗೆ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು!
ಅಮೆರಿಕದಲ್ಲಿ ಡಾಲರ್ ಮಳೆ
ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಆಕೆಗೆ ಡಾಲರ್‌ಗಳ ಸುರಿಮಳೆಯಾಯಿತು. ಯೂಕ್ರೇನ್ ಜನರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಲು ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು. ಆ ದಿನ ಗೀತಾ ಅವರು ಸುಮಾರು 2. 25 ಕೋಟಿ ರೂ. ಸಂಗ್ರಹ ಮಾಡಿದ್ದರು.
ಜಾನಪದ ಖ್ಯಾತಿ
ಕಚ್‌ನ ಹಳ್ಳಿಯಲ್ಲಿ ಜನಿಸಿದ ಗೀತಾ ಐದನೇ ತರಗತಿಯಲ್ಲಿದ್ದಾಗ ಹಾಡಲು ಪ್ರಾರಂಭಿಸಿದರು. ಆಕೆಯ ಗಾಯನ ಕೌಶಲ್ಯ ಮತ್ತು ಭಜನೆ ಮತ್ತು ಜಾನಪದ ಹಾಡುಗಳಲ್ಲಿನ ಅವರ ಪ್ರತಿಭೆಯು ಗಾಯಕಿಯನ್ನು ಗುಜರಾತಿನಲ್ಲಿ ಜನಪ್ರಿಯ ಕಲಾವಿದೆಯನ್ನಾಗಿ ಮಾಡಿದೆ. (ಏಜೆನ್ಸೀಸ್)
ಇದು ಡಿವೋರ್ಸ್ ಫೋಟೋಶೂಟ್! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ