More

    ಇದು ಡಿವೋರ್ಸ್​ ಫೋಟೋಶೂಟ್​! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ

    ನವದೆಹಲಿ: ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡುವುದು, ಮದುವೆ ಸಮಯದಲ್ಲಿ ಮತ್ತು ಗರ್ಭಿಣಿಯಾದಾಗ ಫೋಟೋಶೂಟ್​ ಮಾಡಿಸುವುದು ಸಾಮಾನ್ಯ. ಇಲ್ಲಿಯವರೆಗೆ ನಾವು-ನೀವೆಲ್ಲ ಇದನ್ನೆ ನೋಡಿರುವುದು. ಆದರೆ, ಇದೀಗ ಇನ್ನೊಂದು ಟ್ರೆಂಡ್​ ಶುರುವಾಗಿದೆ. ಅದರ ಬಗ್ಗೆ ಕೇಳಿದರೆ ಸ್ವಲ್ಪ ವಿಚಿತ್ರ ಎನಿಸಿದೇ ಇರದು.

    ಹೌದು, ಇದೀಗ ಶುರುವಾಗಿರುವ ಟ್ರೆಂಡ್​​ ಯಾವುದು ಅಂದರೆ, ಡಿವೋರ್ಸ್​ ಫೋಟೋಶೂಟ್​ ಟ್ರೆಂಡ್​. ಮಹಿಳೆಯೊಬ್ಬಳು ತನ್ನ ಡಿವೋರ್ಸ್​ ಅನ್ನು ಫೋಟೋಶೂಟ್​ ಮೂಲಕ ಸಂಭ್ರಮಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಬೆಲೆಕಟ್ಟಲಾಗದ ಫೋಟೋಗಳು
    ಪುಬಿಟಿ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ. ಈ ಮಹಿಳೆಯ ವಿಚ್ಛೇದನ ಫೋಟೋಶೂಟ್‌ನಿಂದ ಸೆರೆಹಿಡಿಯಲಾದ ಈ ಬೆಲೆಕಟ್ಟಲಾಗದ ಫೋಟೋಗಳು ಎಂದು ಅಡಿಬರಹ ನೀಡಿದ್ದಾರೆ. ಸುಮಾರು 5 ಲಕ್ಷ ಕ್ಕೂ ಅಧಿಕ ಲೈಕ್​ ಪಡೆದುಕೊಂಡಿವೆ.

    ಇದನ್ನೂ ಓದಿ: ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದ; ಆರೋಪಿ ವಿರುದ್ಧ 30 ಪುಟಗಳ ಚಾರ್ಜ್ ಶೀಟ್!

    View this post on Instagram

    A post shared by Pubity (@pubity)

    ಸಂಭ್ರಮಾಚರಣೆ
    ಫೋಟೋಶೂಟ್ ಚಿತ್ರಗಳಲ್ಲಿ ಲಾರೆನ್ ಬ್ರೂಕ್ ಎಂಬ ಮಹಿಳೆ ಬೆರಗುಗೊಳಿಸುವ ಕೆಂಪು ಉಡುಪಿನಲ್ಲಿ ಪೋಸ್ ನೀಡಿದ್ದು, ‘ವಿಚ್ಛೇದಿತಳು’ ಎಂಬ ಫಲಕವನ್ನು ಹಿಡಿದಿದ್ದಾರೆ. ಫೋಟೋಶೂಟ್ 8 ಚಿತ್ರಗಳನ್ನು ಹೊಂದಿದೆ. ಬ್ರೂಕ್ ತನ್ನ ಮದುವೆಯ ವೇಲ್​ ಅನ್ನು ಬೆಂಕಿಗೆ ಹಾಕುವುದು, ಮದುವೆಯ ಫೋಟೋ ಫ್ರೇಮ್ ಅನ್ನು ತುಳಿಯುತ್ತಿರುವುದು, ತನ್ನ ಮಾಜಿ ಗಂಡನ ಚಿತ್ರವನ್ನು ಹರಿದು ಹಾಕುವುದು ಹಾಗೂ ಮದುವೆಯ ಡ್ರೆಸ್ ಮೇಲೆ ನಿಂತು ಶಾಂಪೇನ್ ಬಾಟಲಿಯ ತೆರೆಯುತ್ತಿರುವ ಫೋಟೋಗಳಿವೆ.

    ಈ ಹೊಸ ಟ್ರೆಂಡ್​ ಅನ್ನು ಕೆಲ ನೆಟ್ಟಿಗರು ಇಷ್ಟಪಟ್ಟಿದ್ದು, ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ಜೂಜಾಟಕ್ಕೆ ಕುಮ್ಮಕ್ಕು: ಗಂಗೂಲಿ, ರೋಹಿತ್​, ಹಾರ್ದಿಕ್, ಆಮೀರ್​ ಖಾನ್ ವಿರುದ್ಧ ಪಿಐಎಲ್​ ಸಲ್ಲಿಕೆ

    Success Story | ಈ ನಾಲ್ಕು ಮಂತ್ರವೇ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts