More

    ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ ಜಾನಪದ ಕಲೆ

    ಶಿರಹಟ್ಟಿ: ತಲೆತಲಾಂತರದಿಂದ ಬಂದ ಜಾನಪದ ಕಲೆ, ಸಂಪ್ರದಾಯಗಳನ್ನು ಹಿರಿಯರು ಉಳಿಸಿ, ಬೆಳೆಸಿಕೊಂಡು ಬಂದಿದ್ದು, ಅಂಥ ಅಸ್ತಿತ್ವ ಹೊಂದಿರುವ ಜಾನಪದ ಕಲೆ ನಮ್ಮ ಜೀವನದಲ್ಲೂ ಹಾಸುಹೊಕ್ಕಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.


    ಪಟ್ಟಣದ ಶ್ರೀ ಭರಮದೇವರ ಸೇವಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ತಿಕೋತ್ಸವ ಹಾಗೂ ಸವಾಲ್-ಜವಾಬ್ ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ದೇಶಿ ಸೊಗಡಿನ ಜಾನಪದ ಸಾಹಿತ್ಯವನ್ನೊಳಗೊಂಡ ಜನಪದ ಕಲೆ ನಶಿಸಿ ಹೋಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪಟ್ಟಣ ಪ್ರದೇಶದ ಯುವಕರು ಭರಮದೇವರ ಕಾರ್ತಿಕೋತ್ಸವ ಆಚರಣೆಯೊಂದಿಗೆ ಭಜನಾ ಸ್ಪರ್ಧೆಯ ಹಾಡುಗಾರಿಕೆ ಕೇಳಿ ಆನಂದಿಸುವ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.


    ಸಾನ್ನಿಧ್ಯ ವಹಿಸಿದ್ದ ಹಾಲುಮತ ಸಮಾಜದ ಗುರು ಶ್ರೀ ಸಿದ್ದಯ್ಯ ಅಮೋಘಿಮಠ ಮಾತನಾಡಿ, ಕಾರ್ತಿಕೋತ್ಸವ ಆಚರಣೆಗಳಂಥ ಧಾರ್ವಿುಕ ಕಾರ್ಯಗಳಿಂದ ಮನಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ದೀಪಾರಾಧನೆಯಿಂದ ಮನಸ್ಸಿನ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನಬೆಳಕು ಪಡೆಯುವ ಉದ್ದೇಶ ಕಾರ್ತಿಕೋತ್ಸವದ್ದಾಗಿದೆ ಎಂದರು.


    ಪಪಂ ಮಾಜಿ ಅಧ್ಯಕ್ಷ ಪರಮೇಶ ಪರಬ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪಗೌಡ ಅಣ್ಣಿಗೇರಿ, ಸೋಮನಗೌಡ ಮರಿಗೌಡ್ರ, ಮಹಾಂತೇಶ ದಶಮನಿ, ಪಪಂ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ, ಜಗದೀಶ ಇಟ್ಟೇಕಾರ, ಬಸವರಾಜ ತುಳಿ, ಯಲ್ಲಪ್ಪ ಹಾಲಪ್ಪನವರ, ನಾಗರಾಜ ಇಂಗಳಗಿ, ಕಲ್ಲಪ್ಪ ಮುಶ್ಯಪ್ಪನವರ, ಕರಿಯಪ್ಪ ಬಳೂಟಗಿ, ಮಂಜುನಾಥ ಗಾರವಾಡ, ಶರಣಪ್ಪ ಬಳೂಟಗಿ, ಚಂದ್ರು ಹಮ್ಮಿಗಿ, ಮಲ್ಲಪ್ಪ ಗೊರವರ, ಲಕ್ಷ್ಮಣ ವಾಲಿಕಾರ, ಪರಶುರಾಮ ಹಾಲಪ್ಪನವರ ಇತರರಿದ್ದರು. ಸಂತೋಷ ಕುರಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕನಕೂರದ ರಾಮಲಿಂಗೇಶ್ವರ ಭಜನಾ ಸಂಘ ಹಾಗೂ ಬಸವನಕೊಪ್ಪದ ಬಸವೇಶ್ವರ ಭಜನಾ ಸಂಘದಿಂದ ನಡೆದ ಸವಾಲ್- ಜವಾಬ್ ಭಜನಾ ಸ್ಪರ್ಧೆ ಜನಮನಸೊರೆಗೊಂಡಿತು.

    Folk art is a part of everyone’s life

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts