More

    ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಪಟ್ಟು

    ಕೋಲಾರ: ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಗುರುವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

    ಸಾರಿಗೆ ನಿಗಮದ ಕಚೇರಿ, ಗ್ಯಾರೇಜ್​ ಸೇರಿದಂತೆ ವಿವಿಧ ವಿಭಾಗಗಳ ನೌಕರರು, ಕಾರ್ಮಿಕರು ಕರ್ತವ್ಯವನ್ನು ಬಹಿಷ್ಕರಿಸಿ ನಗರದ ಕೆಎಸ್​ಆರ್​ಟಿಸಿ ಡಿಪೋ ಎದುರು ಗುರುವಾರ ಬೆಳಗ್ಗೆಯಿಂದ ಸಂಜೆಯ ತನಕ ಸತ್ಯಾಗ್ರಹ ನಡೆಸಿದರು.
    ಪ್ರಸಕ್ತ ಸಾಲಿನಿಂದ ಮೂಲ ವೇತನದಲ್ಲಿ ಶೇ.25 ಹೆಚ್ಚಳ ಮಾಡಲು ವೇತನ ಶ್ರೇಣಿ ಸಿದ್ಧಪಡಿಸಬೇಕು. ಜನವರಿಯಿಂದ ಶೇ.15 ವೇತನ ಹೆಚ್ಚಳದ 38 ತಿಂಗಳ ಬಾಕಿ ವೇತನ ಪಾವತಿ ಮಾಡಬೇಕು. ೆಬ್ರವರಿಯಲ್ಲಿ ನಿವೃತ್ತಿ, ಮೃತಪಟ್ಟವರು, ವಜಾಗೊಂಡವರು ಹಾಗೂ ಇತರ ಕಾರಣಗಳಿಂದ ಸೇವೆಯಿಂದ ನಿರ್ಗಮಿಸಿರುವ ನೌಕರರಿಗೂ ಜ.1ರಿಂದ ಜಾರಿ ಮಾಡಿರುವ ವೇತನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
    ಆಯ್ಕೆ ಶ್ರೇಣಿ ಮತ್ತು ಉನ್ನತ ವೇತನ ಶ್ರೇಣಿಗಳನ್ನು ಸಿದ್ಧಪಡಿಸಬೇಕು. ಪ್ರತಿ 10 ವರ್ಷಕ್ಕೊಮ್ಮೆ ಬಡ್ತಿ ನೀಡಬೇಕು. ಸಾಮಾನ್ಯ ಶ್ರೇಣಿಯ ಬಡ್ತಿ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು. ಕಳೆದ 2023ರ ಆಗಸ್ಟ್​ನಲ್ಲಿ ಸಮಿತಿ ಸಲ್ಲಿಸಿರುವ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು ಎಂದು ಪಟ್ಟು ಹಿಡಿದರು.
    ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರಿಗೂ ವಿವಿಧ ಭತ್ತೆಗಳನ್ನು ಹೆಚ್ಚಳ ಮಾಡಬೇಕು. ವೈದ್ಯಕಿಯ ಸೌಲಭ್ಯಕ್ಕಾಗಿ ಪ್ರತಿ ತಿಂಗಳು 2 ಸಾವಿರ ರೂ. ನೀಡಬೇಕು, ಉಚಿತ ಔಷಧ ವಿತರಿಸಬೇಕು. ಇಎಸ್​ಐ ಮಾದರಿಯಲ್ಲಿ ಮೂಲ ವೇತನದ ಶೇ.4.5 ಹಾಗೂ ನೌಕರರದಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್​ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನೌಕರರ ಕುಟುಂಬದವರಿಗೂ ಉಚಿತ ಚಿಕಿತ್ಸೆ ನೀಡುವ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
    2023ರಲ್ಲಿ ಕಡಿತಗೊಳಿಸಿದ್ದ ಹಾಗೂ 2024ರ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಪಾವತಿಸಬೇಕು. ಅಪಘಾತ ಮತ್ತು ಸಹಜವಾಗಿ ಮೃತಪಟ್ಟ ನೌಕರರಿಗೆ ಕನಿಷ್ಠ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಪರಿಹಾರ ಸೌಲಭ್ಯ ಜಾರಿಗೊಳಿಸಬೇಕು. ಹೆಚ್ಚುವರಿ ಕೆಲಸಗಳಿಗೆ ಓವರ್​ ಟೈಮ್​ ಭತ್ತೆ ನೀಡಬೇಕು. ಏಕಪಕ್ಷಿಯ ನಿರ್ಧಾರಗಳಿಗೆ ಆಡಳಿತ ವರ್ಗ ಕಡಿವಾಣ ಹಾಕಬೇಕು. ಆಂಧ್ರ ಸಂಸ್ಥೆ ಮಾದರಿಯಲ್ಲಿ ಶಿಸ್ತು ಕ್ರಮಗಳಿಗೆ ಸರಳಿಕರಣಗೊಳಿಸಬೇಕು, ಮಹಿಳಾ ನೌಕರರಿಗೆ ವಿಶ್ರಾಂತಿ ಕೊಠಡಿಗಳನ್ನು ಘಟಕಗಳಲ್ಲಿ ಶಿಶುಪಾಲನಾ ಕೇಂದ್ರ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts