More

    ಮೇವು ಬ್ಯಾಂಕ್‌ನಲ್ಲಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ: ಗ್ರಾಮ ಲೆಕ್ಕಾಧಿಕಾರಿ ಘಂಟಿ ಅಮಾನತು

    ವಿಜಯಪುರ: ಮೇವು ಮಾರಾಟದಿಂದ ಬಂದ ಲಕ್ಷಾಂತರ ರೂ.ಗಳನ್ನು ಗ್ರಾಮಲೆಕ್ಕಾಧಿಕಾರಿಯೋರ್ವ ಗುಳುಂ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ ! ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಸಾಜಾದ ಗ್ರಾಮಲೆಕ್ಕಾಧಿಕಾರಿ ಎ.ಆರ್. ಘಂಟಿ ಎಂಬಾತನೇ ಹಣ ಲಪಟಾಯಿಸಿದ್ದು ಬುಧವಾರ ಚಡಚಣ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 409, 420, 465, 471 ಕಲಂ ಅಡಿ ದೂರು ದಾಖಲಿಸಲಾಗಿದೆ.

    ಪ್ರಕರಣದ ವಿವರ: ಕಳೆದ ಬರಗಾಲದ ಸಮಯದಲ್ಲಿ ಕಂದಾಯ ಇಲಾಖೆಯಿಂದ ಇಂಚಗೇರಿ, ಶಿರಾಡೋಣ ಮತ್ತು ರೇವತಗಾಂವ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿತ್ತು. ಪ್ರತೀ ಕೆಜಿ ಮೇವಿಗೆ 2 ರೂ.ಗಳಂತೆ ಮಾರಾಟ ಮಾಡಲಾಗಿತ್ತು. ಮೇವು ಮಾರಾಟದಿಂದ ಬಂದ 14,14,970 ರೂ.ಗಳನ್ನು ಈತ ಸಿಂಡಿಕೇಟ್ ಬ್ಯಾಂಕ್‌ಗೆ ಭರಣಾ ಮಾಡಬೇಕಿತ್ತು. ಆದರೆ, ಹಾಗೆ ಭರಣಾ ಮಾಡದೇ ಖೊಟ್ಟಿ ಚಲನ್‌ಗಳನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ್ದಾನೆ. ಆ ಮೂಲಕ ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡಿದ್ದಾನೆ.

    ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?: ಸದರಿ ಹಣದ ಕುರಿತು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಮಗ್ರ ತನಿಖೆ ನಡೆಸಿದ್ದಾರೆ. ಸದರಿ ದಾಖಲೆಗಳನ್ನು ಸಿಂಡಿಕೇಟ್ ಬ್ಯಾಂಕ್‌ನ ಅಧಿಕಾರಿ ಮೂಲಕ ಪರಿಶೀಲಿಸಲಾಗಿ ಎಲ್ಲ ದಾಖಲೆಗಳು ಖೊಟ್ಟಿ ಇರುವುದು ಬೆಳಕಿಗೆ ಬಂದಿದೆ. ಚಲನ್‌ಗಳಲ್ಲಿ ನಕಲಿ ಶೀಲ್ ಹಾಗೂ ಸಹಿ ಬಳಸಲಾಗಿದೆ. ಈ ಬಗ್ಗೆ ಗ್ರಾಮಲೆಕ್ಕಾಧಿಕಾರಿಯ ವಿಚಾರಣೆ ನಡೆಸಲಾಗಿ ವಂಚನೆ ಬಯಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಚಡಚಣ ತಹಸೀಲ್ದಾರ್ ನೇಮಿನಾಥ ಗೆಜ್ಜಿ ಎಫ್‌ಐಆರ್ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts