More

    ಹೂವು ಮಾರಾಟಗಾರರಿಗೆ ಮಳಿಗೆ ಒದಗಿಸಿ

    ಬೆಳಗಾವಿ: ಅಶೋಕ ನಗರದಲ್ಲಿ ತೋಟಗಾರಿಕಾ ಇಲಾಖೆ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರದಲ್ಲಿನ ಮಳಿಗೆಗಳನ್ನು ಹೂ ಮಾರಾಟಗಾರರಿಗೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಸಗಟು ಮಾರಾಟಗಾರರು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

    ಬೆಳಗಾವಿ ನಗರದಲ್ಲಿ 35 ವರ್ಷಗಳಿಂದ ಸಗಟು ಹೂವು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ, ಹೊಸದಾಗಿ ಆಶೋಕ ನಗರದಲ್ಲಿ ತೋಟಗಾರಿಕಾ ಇಲಾಖೆಯು 1.10 ಎಕರೆ ಪ್ರದೇಶದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರದಲ್ಲಿ 16 ಮಳಿಗೆ ನಿರ್ಮಿಸಿದೆ. ಇದೀಗ ಅ. 23ರಂದು ಆ ಮಳಿಗೆಗಳ ಹರಾಜು ಮಾಡಲಾಗುತ್ತಿದೆ. ಅದರಲ್ಲಿ ಹೂ ಮಾರಾಟಗಾರರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

    ಕಳೆದ ಹಲವು ವರ್ಷಗಳಿಂದ ಹೂ ಮಾರಾಟಗಾರರು ಮತ್ತು ಹೂ ಬೆಳೆಗಾರರು ಅನೇಕ ಸಮಸ್ಯೆ ಎದುರಿಸಿಕೊಂಡು ಬರುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಾರಾಟ ಮಳಿಗೆಗಳಲ್ಲಿ ಸಗಟು ಹೂ ಮಾರಾಟಗಾರರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮಾರಾಟಗಾರರು ಅಲ್ಲದವರೂ ಮಳಿಗೆಗಳನ್ನು ಬಾಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಸಹಾಯಕತೆ ತೋಡಿಕೊಂಡರು.

    ತೋಟಗಾರಿಕಾ ಇಲಾಖೆಯು ಈಗಾಗಲೇ ನಿಯಮದಂತೆ ಪ.ಜಾ., ಪ.ಪಂ.ನವರಿಗೆ 3 ಮಳಿಗೆ, ಹೂ ಬೆಳೆಯುವ ರೈತರಿಗೆ 4 ಮಳಿಗೆ, 9 ಹೂ ಮಾರಾಟಗಾರರಿಗೆ ಮಳಿಗೆ ನೀಡಲು ನಿಗದಿ ಮಾಡಿದ್ದಾರೆ. ಆದರೆ, ಹೂ ಮಾರಾಟಗಾರರು 13 ಜನರಿದ್ದು, 9 ಮಳಿಗೆ ಸಾಕಾಗುವುದಿಲ್ಲ. ಹೀಗಾಗಿ ಮೂಲ ಹೂ ಮಾರಾಟಗಾರರಿಗೆ ಮೊದಲು ಅವಕಾಶ ಮಾಡಿಕೊಡಬೇಕು.

    ಇಲ್ಲದಿದ್ದರೆ ನಮ್ಮ ಜೀವನ ಅಯೋಮಯವಾಗುತ್ತದೆ ಎಂದು ವಿನಂತಿಸಿದರು. ಎಂ.ಜಿ. ಸುಬ್ರಹ್ಮಣ್ಯಂ, ಬದ್ರುದ್ದೀನ್ ಮುಲ್ಲಾ, ಸಲೀಂ ಘೋಡೆವಾಲೆ, ಸಂಜಯ ಬಂಡಿ, ವಿನಾಯಕ ದೇಶಮುಖ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts