More

    ಹೂವಿನಲ್ಲೂ ಇತ್ತು ಗಂಡು ಹೆಣ್ಣೆಂಬ ಲಿಂಗ! ಹೂವು ಹುಟ್ಟೋದರ ಹಿಂದಿನ ಕಥೆಯಿದು..


    ಮುಂದುವರಿದ ಭಾಗ..


    ಹೂವಿನಲ್ಲೂ ಇತ್ತು ಗಂಡು ಹೆಣ್ಣೆಂಬ ಲಿಂಗ! ಹೂವು ಹುಟ್ಟೋದರ ಹಿಂದಿನ ಕಥೆಯಿದು..ಸಸ್ಯ ಪ್ರಪಂಚದ ವಿಕಾಸದಲ್ಲಿ ಬೀಜದ ತೊಗಟೆಯ ಅಭಿವೃದ್ಧಿಯಾಗಿದ್ದು ಪ್ರಪಂಚದ ಜೈವಿಕ ವಿಜ್ಞಾನದಲ್ಲಿ ಘಟಿಸಿದ ಅತಿ ದೊಡ್ಡ ಆವಿಷ್ಕಾರ, ದೊಡ್ಡ ಕ್ರಾಂತಿ ಮತ್ತು ವಿಕಾಸದ ಮೈಲಿಗಲ್ಲು. ಸರೀಸೃಪಗಳು ಗಟ್ಟಿಯಾದ ಮೊಟ್ಟೆ ಇಡುವುದರ ಮೂಲಕ ಉಭಯಚರಗಳಿಂದ ಬೇರ್ಪಟ್ಟು ವಿಕಾಸಗೊಂಡು ಅತಿ ವೇಗವಾಗಿ ವಿಕಾಸಗೊಂಡು ಈ ಭೂಮಿಯನ್ನು ಕೋಟ್ಯಾನು ವರ್ಷ ಆಳಿದವು. ಅದೇ ರೀತಿ ಬೀಜದಲ್ಲಿ ತೊಗಟೆಯನ್ನು ಸೃಷ್ಟಿಮಾಡಿಕೊಂಡ ಸಸ್ಯಗಳ ಸಂತತಿಯು ಬಹಳ ವೇಗವಾಗಿ ವಿಕಾಸಗೊಂಡಿತು.

    ಇವುಗಳ ವಿಕಾಸವನ್ನು ತಡೆಯಲು ಅಂದು ಯಾವುದೇ ಸಸ್ಯಹಾರಿ ಸ್ತನಿ ಪ್ರಾಣಿ ವಿಕಾಸವಾಗಿರಲಿಲ್ಲ. ಆದ್ದರಿಂದ ನಂತರದ ಇಪ್ಪತ್ತು ಕೋಟಿ ವರ್ಷಗಳಲ್ಲಿ ನೂರಿನ್ನೂರು ಅಡಿ ಎತ್ತರಕ್ಕೂ ಬೆಳೆದು ನಿಂತವು. ಬಲಿತವನು ಬಾಳಿಯಾನು ಎನ್ನುವ ಹಾಗೆ ಬೀಜದ ಕವಚವನ್ನು ಸೃಷ್ಟಿಮಾಡಿಕೊಳ್ಳದ ಸಸ್ಯಜಾತಿಗಳು ಕೆಲವು ಚಿಕ್ಕ ಗಿಡಗಳಾಗಿ ಉಳಿದವು, ಇನ್ನೂ ಕೆಲವು ಜಾತಿಯ ಸಸ್ಯಗಳು ನಿಧಾನವಾಗಿ ನಶಿಸಿಹೋದವು. ಆದರೆ ಸಸ್ಯಗಳು ನಿಂತ ಜಾಗದಲ್ಲಿಯೇ ಬೀಜಗಳು ಬಿದ್ದು ಬೆಳೆಯುತ್ತಿದ್ದವು. ತಮ್ಮ ವಂಶಾಭಿವೃದ್ಧಿ ಮಾಡಲು ಬೇರೆ ಸ್ಥಳಗಳಿಗೆ ಈ ಬೀಜಗಳನ್ನು ಪ್ರಸಾರ ಮಾಡಲು ಬೇರೆ ಜೀವಿಗಳ ಸಹಾಯದ ಅಗತ್ಯವಿತ್ತು.

    ಆದ್ದರಿಂದ ಮುಂದಿನ ತಲೆಮಾರಿನ ಸಂತತಿಗಳು, ಅಂದಾಜು ಹದಿನೈದು ಕೋಟಿ ವರ್ಷಗಳ ಹಿಂದೆ ತಮ್ಮ ದೇಹದ ಹಾರ್ಮೋನ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಹೂವುಗಳನ್ನು ಸೃಷ್ಟಿಸಿಕೊಂಡವು. ತನ್ನ ಸಂತಾನಾಭಿವೃದ್ಧಿ ಮಾಡಲು ಹೂವುಗಳ ಮುಖಾಂತರ ಬೀಜಗಳನ್ನು ವೃದ್ಧಿಮಾಡಲು ಆರಂಭಿಸಿದವು. ಗಂಡು ಹೂವು ಮತ್ತು ಹೆಣ್ಣು ಹೂವು ಬೇರೆ ಬೇರೆ ಜಾಗದಲ್ಲಿದ್ದಾಗ ಗಾಳಿ, ನೀರು ಮತ್ತು ಕೆಲವು ಕೀಟಗಳಿಂದ ಪರಾಗಣ ಕಷ್ಟವಾಗುತ್ತಿತ್ತು. ಆದ್ದರಿಂದ, ಈ ಕಷ್ಟವನ್ನು ಅರಿತು ಕಾಲಾನಂತರ ಒಂದೇ ಹೂವಿನಲ್ಲಿ ಗಂಡು ಮತ್ತು ಹೆಣ್ಣು ಎರಡೂ ಜಾತಿಯನ್ನು ಒಟ್ಟಿಗೇ ಸೃಷ್ಟಿಸಲಾರಂಭಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts