More

    ಕುಕ್ಕೆ ದೇವಳಕ್ಕೆ ಪುಷ್ಪಾಲಂಕಾರ ಸೇವೆ: ಐದು ಲಕ್ಷ ರೂ.ವೆಚ್ಚದಲ್ಲಿ ಭಕ್ತರಿಂದ ಅಲಂಕಾರ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ ಐದು ಲಕ್ಷ ರೂ.ಮೌಲ್ಯದ ಹೂವಿನಿಂದ ಪುಷ್ಪಾಲಂಕಾರ ಸೇವೆ ಶನಿವಾರ ರಾತ್ರಿ ನೆರವೇರಿತು.

    ಬೆಂಗಳೂರಿನ ಶ್ರೀ ಸ್ಕಂದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೇವೆ ನೆರವೇರಿತು. ನಾಲ್ಕು ವರ್ಷಗಳಿಂದ ಕುಕ್ಕೆ ದೇವಸ್ಥಾನದಲ್ಲಿ ಹೊಸ ವರ್ಷದಂದು ಈ ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನ ಉಮೇಶ್, ಮಂಜುನಾಥ್, ಬಾಲಾಜಿ, ರಂಜನ್, ವಿಜಿ ಕುಮಾರ್, ಸಿ.ದರ್ಶನ್, ಕೃಷ್ಣಮೂರ್ತಿ, ರಾಜು ಸೇವಾ ಕಾರ್ಯದಲ್ಲಿ ಭಾಗಿಯಾದರು. ದೇವಳದ ನಾಗೇಶ್ ಎ.ವಿ. ಮತ್ತು ಜಗದೀಶ್ ಸಹಕಾರ ನೀಡಿದರು.

    ಹಣ್ಣುಗಳಿಂದ ಶೃಂಗಾರ: ದೇವಳದ ಹೊರಾಂಗಣ, ಸುತ್ತುಗೋಪುರ, ಒಳಾಂಗಣಗಳಲ್ಲಿ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಒಳಾಂಗಣದಲ್ಲಿ ವಿಶೇಷವಾಗಿ ತರಕಾರಿ ಮತ್ತು ಹಣ್ಣು ಹಂಪಲುಗಳಿಂದ ಅಲಂಕಾರ ಮಾಡಲಾಗಿತ್ತು. ಜೋಳದ ತೆನೆ, ಭತ್ತದ ತೆನೆ, ಅನನಾಸು, ಕಬ್ಬು, ಕಿತ್ತಳೆ, ಬಾಳೆಕಾಯಿ, ಬಾಳೆಹಣ್ಣು, ಮೂಸಂಬಿ ಮೊದಲಾದವುಗಳಿಂದ ಶೃಂಗಾರ ಮಾಡಲಾಗಿತ್ತು. ಗುಲಾಬಿ ಹೂವಿನ ಚೆಂಡು ಅಳವಡಿಸಲಾಗಿತ್ತು. ವಿವಿಧ ವರ್ಣದ ಆಸ್ಟ್ರೇಲಿಯಾ ಹೂ, ಚೆಂಡು ಹೂ, ಸೇವಂತಿಕೆ ಸೇರಿದಂತೆ ಇತರ ಬಗೆಯ ಪುಷ್ಪಗಳನ್ನು ಬಳಸಲಾಗಿದೆ. ದೇವರಿಗೆ ಅಲಂಕಾರಕ್ಕೆ ವಿಶೇಷವಾಗಿ ಬಾಳೆದಿಂಡಿನ ತಿರುಳಿನಿಂದ ತಯಾರಿಸಿದ ಹಾರ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts