More

    ಅವನು ನನ್ನ ಮುಖಕ್ಕೆ ಪಂಚ್ ಮಾಡುತ್ತಿದ್ದ!; ಮಾಜಿ ಪ್ರಿಯಕರನ ಕ್ರೌರ್ಯದ ಬಗ್ಗೆ ಮೌನ ಮುರಿದ ಫ್ಲೋರಾ

    ಕನ್ನಡದಲ್ಲಿ ‘ಕೋದಂಡರಾಮ’, ‘ಗಿರಿ’, ‘ನಮ್ಮಣ್ಣ’, ‘ಧಿಮಾಕು’, ‘ಸಿಐಡಿ ಈಶ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಫ್ಲೋರಾ ಸೈನಿ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ಫ್ಲೋರಾ ಮಾಜಿ ಬಾಯ್ಫ್ರೆಂಡ್ ಒಬ್ಬನ ಕ್ರೌರ್ಯದ ಬಗ್ಗೆ ಮೌನ ಮುರಿದಿದ್ದಾರೆ.

    ‘20ನೇ ವಯಸ್ಸಿಗಾಗಲೇ ಹತ್ತು ಸಿನಿಮಾಗಳಲ್ಲಿ ನಟಿಸಿದ್ದ ನಾನು ಕರಿಯರ್​ನ ಎತ್ತರದಲ್ಲಿದ್ದೆ. ಅದೇ ಸಮಯದಲ್ಲಿ ನಿರ್ವಪಕನೊಬ್ಬನನ್ನು ಪ್ರೀತಿಸಿದೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ, ಆತನ ಜತೆ ವಾಸಿಸಲು ಪ್ರಾರಂಭಿಸಿದಾಗ ಸಮಸ್ಯೆಗಳು ಎದುರಾದವು. ನನ್ನ ಮೊಬೈಲ್ ಕಿತ್ತುಕೊಂಡು, ನಟನೆ ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದ. ಮುಖಕ್ಕೆ ಪಂಚ್ ಮಾಡುತ್ತಿದ್ದ, 14 ತಿಂಗಳ ಕಾಲ ಮನೆಯಿಂದ ಹೊರಗೆ ಬರಲು ಬಿಟ್ಟಿರಲಿಲ್ಲ. ಪ್ರತಿದಿನ ಹಿಂಸಿಸುತ್ತಿದ್ದ. ಒಂದು ದಿನ ನನ್ನ ಮೇಲೆ ಹಲ್ಲೆ ಮಾಡಿದ ತಕ್ಷಣ ಮನೆಯಿಂದ ಹೊರಗೆ ಓಡಿಬಂದೆ. ತಂದೆ, ತಾಯಿ ಮನೆ ಸೇರಿದೆ. ಮತ್ತೆ ನಟನೆಗೆ ಮರಳಲು ಸಾಕಷ್ಟು ಪ್ರಯತ್ನ ಮಾಡಬೇಕಾಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ ಏಟು ತಿಂದು, ಮುಖ ಊದಿಕೊಂಡಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಫ್ಲೋರಾ ಸೈನಿ ಜೀವನದಲ್ಲಿ ಆದ ಈ ಕಹಿ ಘಟನೆಯನ್ನು ಹಂಚಿಕೊಂಡಿದ್ದರು. ಆಗ ನಿರ್ವಪಕ ಗೌರಂಗ್ ದೋಷಿ ವೆುೕಲೆ ಆರೋಪಗಳನ್ನು ಮಾಡಿದ್ದರು.

    ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts