More

    ಮಂಗಳೂರಿಗೆ 50 ದಿನ ಮಾತ್ರ ತುಂಬೆ ನೀರು!, ಶುಕ್ರವಾರ ಮತ್ತೆ ತುಂಬೆ, ಎಎಂಆರ್ ನೀರಿನ ಮಟ್ಟ ಕುಸಿತ

    ಮಂಗಳೂರು: ತುಂಬೆ ಡ್ಯಾಂಗೆ ಹರೆಕಲ ಡ್ಯಾಂ ನೀರು ಪಂಪಿಂಗ್‌ನ ಹೊರತಾಗಿಯೂ ಶುಕ್ರವಾರ ಮತ್ತೆ ತುಂಬೆ ಡ್ಯಾಂ ನೀರಿನ ಮಟ್ಟ ಕುಸಿದಿದೆ. ಪ್ರಸ್ತುತ ತುಂಬೆಯಲ್ಲಿ 5.69ಮಿ. ನೀರಿದ್ದು, ಈ ನೀರು ಮಂದಿನ 50 ದಿನಗಳ ವರೆಗೆ ಮಾತ್ರ ಲಿಪ್ಟ್ ಮಾಡಲು ಸಾಧ್ಯ!

    ತುಂಬೆ ನೀರಿನ ಮಟ್ಟ ಏರಿಕೆಗೆ ಕಳೆದ 1 ವಾರದಿಂದ ಡ್ಯಾಂನ ಕೆಳಭಾಗದಿಂದ ಪಂಪಿಂಗ್ ಮಾಡಲಾಗುತ್ತಿದೆ. ಪ್ರತೀ ದಿನ 155-160 ಎಂ.ಎಲ್.ಡಿ. ನೀರು ನಗರಕ್ಕೆ ಪಂಪಿಂಗ್ ಮಾಡಲಾಗಿದೆ. ಆದರೆ ಬುಧವಾರ ಸಂಜೆ ವೇಳೆ ಡ್ಯಾಂನಲ್ಲಿ 5.76ಮೀ. ನೀರು ಶೇಖರಣೆಯಾಗಿದ್ದು, ಗುರುವಾರ ವೇಳೆ 0.04 ಮಿ ನೀರು ಕುಸಿತವಾಗಿ 5.72ಮೀ.ಗೆ ತಲುಪಿದೆ. ಶುಕ್ರವಾರ ಮತ್ತೆ 0.04ಮೀ. ಕುಸಿತವಾಗಿ 5.69ಮಿ.ಗೆ ತಲುಪಿದೆ. ಪ್ರಸ್ತುತ ಡ್ಯಾಂನಲ್ಲಿ ದಾಸ್ತಾನು ಆಗಿರುವ ನೀರು ಮುಂದಿನ 48-50 ದಿನಗಳಿಗೆ ಸಾಕಾಗಬಹುದು ಎಂಬುವುದು ನಗರ ಪಾಲಿಕೆ ಅಧಿಕಾರಿಗಳ ಮಾಹಿತಿ. ಆದರೆ ಬಿಸಿಲ ಪ್ರಖರತೆಗೆ ಈ ನೀರು ಸ್ವಲ್ಪ ಆವಿಯಾಗಿ, ತುಂಬೆ ಸ್ಥಳೀಯರ ತೋಟಗಳಿಗೆ ಅನಧಿಕೃತವಾಗಿಯೂ ಬಳಕೆಯಾಗುತ್ತಿದೆ. ಜತೆಗೆ ಡ್ಯಾಂನಲ್ಲಿ ಕೆಸರು ಹಾಗೂ ಮರಳೂ ಕೂಡ ತುಂಬಿದೆ.ಈ ಹಿನ್ನೆಲೆಯಲ್ಲಿ ತುಂಬೆಯಲ್ಲಿರುವ 5.69ಮೀ. ನೀರು ಮುಂದಿನ 35-40 ದಿನಗಳ ವರೆಗೆ ಮಾತ್ರ ಲಭ್ಯವಾಗಲಿದೆ.

    ಎಎಂಆರ್ ಡ್ಯಾಂನಲ್ಲೂ ಕುಸಿತ

    ಎಎಂಆರ್‌ನಲ್ಲಿ ಪ್ರಸ್ತುತ 17.90 (ಸಮುದ್ರ ಮಟ್ಟಕ್ಕಿಂತ ಮೇಲೆ) ಮೀ. ನೀರು ಇದ್ದು, ಪ್ರತೀ ದಿನ ಸರಾಸರಿ 0.05 ಮೀ.ನೀರು ಇಳಿಕೆಯಾಗುತ್ತಿದೆ. ಮಾ.20 ರಂದು ಎಎಂಆರ್ ಮಟ್ಟ 17.98, ಮಾ.21 ರಂದು 17.95ಮೀ. ಇದ್ದು, ಶುಕ್ರವಾರ 0.05ಮೀ ಇಳಿಕೆಯಾಗಿ 17.90ಮೀಗೆ ತಲುಪಿದೆ. ಪ್ರತೀ ವರ್ಷ ತುಂಬೆಯಲ್ಲಿ ನೀರು ಕುಸಿತವಾದರೆ ಎಎಂಆರ್ ನೀರೇ ಗತಿ. ಕಳೆದ ವರ್ಷ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.45 ಮಿ.ಗಿಂತ ಕೆಳಗಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ 14.5 ಮೀ. ನೀರನ್ನು ತುಂಬೆ ವೆಂಟೆಡ್ ಡ್ಯಾಂಗೆ ಹರಿದು ಬಿಡಲು ಎಎಂಆರ್ ನಿಯಂತ್ರಣ ಸಂಸ್ಥೆ ನಿರ್ಧರಿಸಿತ್ತು.

    —————–

    ರೇಷನಿಂಗ್ ಆಧಾರದಲ್ಲಿ ನೀರು ಪೂರೈಕೆಗೆ ಚಿಂತನೆ

    ಮಂಗಳೂರು ನಗರಕ್ಕೆ ತುಂಬೆಯಿಂದ 1959ರಲ್ಲಿ 2.25 ಎಂಜಿಡಿ (12.27 ಎಂಎಲ್‌ಡಿ) ಮಂಗಳೂರು ನಗರಕ್ಕೆ ನೀರು ಪೂರೈಸುವ ಯೋಜನೆ ಪ್ರಾರಂಭಿಸಿತ್ತು. ನಂತರ ಕೆಯುಡಬ್ಲ್ಯೂಎಸ್ ಹಾಗೂ ಒಳಚರಂಡಿ ಮಂಡಲಿಯವರು 1974ರಲ್ಲಿ 18 ಎಂಜಿಡಿ ನೀರು ಪೂರೈಕೆಯ (80 ಎಂಎಲ್‌ಡಿ)ಯೋಜನೆ ಅನುಷ್ಠಾನಿಸಿತ್ತು. ಈ ಯೋಜನೆಯನ್ನು 1997ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. 2007ರಲ್ಲಿ ಕುಡ್ಸೆಂಪ್‌ನವರು ಎಡಿಬಿ ಸಹಾಯದಿಂದ 80 ಎಂಎಲ್‌ಡಿ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಪ್ರಸ್ಥುತ ಯಥಾ ಸ್ಥಿತಿಯಲ್ಲಿ ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದು, ಅನಿವಾರ್ಯವಾದರೆ ರೇಷನಿಂಗ್ ವ್ಯವಸ್ಥೆ ಆಧಾರದಲ್ಲಿ ನೀರು ಪೂರೈಕೆಗೆ ಪಾಳಿಕೆ ಚಿಂತನೆ ನಡೆಸಿದೆ. ನೀರು ರೇಷನಿಂಗ್ ತಡೆಯಲು ಹರೆಕಲ ಡ್ಯಾಂ ನೀರು ಪಂಪಿಂಗ್ ನಿರಂತರ ನಡೆಯುತ್ತಿದೆ. ಲಭ್ಯವಿರುವ ಹರೆಕಲ ಡ್ಯಾಂ ನೀರು ಹಾಗೂ ಎಆರ್‌ಎಂ ನೀರಿನ ದೈರ್ಯದಲ್ಲೇ ಪ್ರಸ್ತುತ ತುಂಬೆಯಿಂದ ಮಂಗಳೂರಿಗೆ ನಿರಂತರ ನೀರು ಪೂರೈಕೆಯಾಗುತ್ತಿದೆ.

    —————–

    ತುಂಬೆ ಡ್ಯಾಂ ರೀಫಿಲ್‌ನ ಹೊರತಾಗಿಯೂ ಪ್ರತೀ ಡ್ಯಾಂ ನೀರು ಕುಸಿಯುತ್ತಿದೆ. ಆದರೂ ಕುಡಿಯುವ ನೀರು ಕೊರತೆಯಾಗದಂತೆ ತಡೆಯಲು ನಗರಕ್ಕೆ ನಿರಂತರ ನೀರು ಪೂರೈಕೆಯಾಗುತ್ತಿದೆ. ನೀರಿನ ಕುಸಿತ ಪ್ರಮಾಣ ಜಾಸ್ತಿಯಾದರೆ ರೇಷನಿಂಗ್ ಆಧಾರದಲ್ಲಿ ನೀರು ಪೂರೈಕೆಗೆ ಚಿಂತನೆಯಿದೆ. ಆದರೂ ಜಿಲ್ಲೆಯಲ್ಲಿ ಒಂದೆರಡು ದಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಡ್ಯಾಂ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ.

    ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts