More

    ಪ್ರವಾಹ ಸಂತ್ರಸ್ತನಿಗೆ ನಕಲಿ ಐಟಿ ಶಾಕ್​; ಬೆಳ್ಳಂಬೆಳಗ್ಗೆ ಬಂದು ವಂಚನೆ ಮಾಡಿದ ಏಳು ಮಂದಿ ವಿರುದ್ಧ ದೂರು

    ಬಾಗಲಕೋಟೆ: ಪ್ರವಾಹ ಸಂತ್ರಸ್ತನೋರ್ವನ ಮನೆಗೆ ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಕೆಲವರು 12,500 ರೂಪಾಯಿ ಹಾಗೂ ಮೂರು ಮೊಬೈಲ್​ಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ.
    ಈ ವಂಚನೆ ಪ್ರಕರಣ ಡಿಸೆಂಬರ್​ 23ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಲಕ್ಷ್ಮಣ ಅಲಗೂರು ಎಂಬುವರ ಮನೆ ಮೇಲೆ ಈ ನಕಲಿ ಐಟಿ ದಾಳಿ ನಡೆದಿದೆ.

    ಲಕ್ಷ್ಮಣ ಅಲಗೂರು ಆಟೋಚಾಲಕ. ಇವರ ಮನೆಗೆ ಕೋಟಿ ಕೋಟಿ ರೂಪಾಯಿ ಹಣ ಬಂದಿದೆ. ಅದು ಪ್ರವಾಹದ ವೇಳೆ ತೇಲಿಸಿಕೊಂಡು ಬಂದ ದುಡ್ಡು ಎಂದು ಇತ್ತೀಚೆಗೆ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂಬಿಕೊಂಡು ಡಿ.23ರಂದು ಮುಂಜಾನೆ 4 ಗಂಟೆಗೆ ಓರ್ವ ಮಹಿಳೆ ಸೇರಿ ಒಟ್ಟು ಏಳು ಮಂದಿ ಲಕ್ಷ್ಮಣ್​ ಅವರ ಮನೆಗೆ ಕಾರಿನಲ್ಲಿ ಬಂದಿದ್ದಾರೆ. ನಾವು ಐಟಿ ಅಧಿಕಾರಿಗಳು ಎಂದು ಹೇಳಿ ಮನೆಯಲ್ಲಿದ್ದ ಹಾಸುಕಲ್ಲು ಕಿತ್ತೆಸೆದಿದ್ದಾರೆ. ಅಲ್ಲದೆ ಬ್ಯಾಗ್, ಪೆಟ್ಟಿಗೆಗಳನ್ನೆಲ್ಲ ಕಿತ್ತು ಜಾಲಾಡಿದ್ದಾರೆ. 12,500 ರೂಪಾಯಿ ಹಾಗೂ ಮೂರು ಮೊಬೈಲ್​ಗಳೊಂದಿಗೆ ಹೋಗುವಾಗ ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು, ಅಲ್ಲಿಗೆ ಬಂದು ಭೇಟಿಯಾಗಿ ಎಂದು ತಿಳಿಸಿ ಹೋಗಿದ್ದರು.

    ಅದನ್ನು ನಂಬಿ ತೆರಿಗೆ ಇಲಾಖೆ ಕಚೇರಿಗೆ ಹೋದ ಲಕ್ಷ್ಮಣ್​ ಅವರಿಗೆ ಶಾಕ್ ಕಾದಿತ್ತು. ನಾವ್ಯಾರೂ ಅಂತದ್ದೊಂದು ದಾಳಿ ನಡೆಸಲೇ ಇಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಆಗಲೇ ಇದೊಂದು ವಂಚನೆ ಪ್ರಕರಣ ನಡೆದಿದ್ದು ಬೆಳಕಿಗೆ ಬಂದಿದೆ.

    ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts