More

    ಖಾಂಡ್ಯ- ಬಾಳೆಗದ್ದೆ ತೂಗು ಸೇತುವೆ ಕಾಮಗಾರಿ ಆರಂಭ

    ಬಾಳೆಹೊನ್ನೂರು: ಕಳೆದ ವರ್ಷ ಭದ್ರಾ ನದಿ ಪ್ರವಾಹದಿಂದ ಕೊಚ್ಚಿಹೋಗಿದ್ದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಿಂದ ಬಾಳೆಗದ್ದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಈ ಹಿಂದೆ ಖಾಂಡ್ಯ- ಬಾಳೆಗದ್ದೆ ಸಂಪರ್ಕಕ್ಕೆ ಸೇತುವೆ ಇರಲಿಲ್ಲ. ಭದ್ರಾ ನದಿ ದಾಟುವಾಗ ಮೂವರು ಉಕ್ಕಡ ಮಗುಚಿ ನೀರುಪಾಲಾಗಿದ್ದರು. ಅಂದಿನ ಶಾಸಕ ಡಿ.ಎನ್.ಜೀವರಾಜ್ ಅವರ ಶಾಸಕರ ನಿಧಿ ಹಾಗೂ ಜಿಪಂ ನಬಾರ್ಡ್ ಯೋಜನೆಯಡಿ 43.5 ಲಕ್ಷ ರೂ. ವೆಚ್ಚದಲ್ಲಿ 2010ರಲ್ಲಿ ತೂಗು ಸೇತುವೆ ನಿರ್ವಿುಸಲಾಗಿತ್ತು.

    2019ರಲ್ಲಿ ಪ್ರವಾಹಕ್ಕೆ ಸಿಲುಕಿ ತೂಗು ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿತವಾಗಿತ್ತು. ಬಳಿಕ ಗ್ರಾಮಸ್ಥರಿಗೆ ಜಿಲ್ಲಾಡಳಿತದಿಂದ ಬೋಟ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವರು ಬೋಟ್ ಮೂಲಕ ಇನ್ನೂ ಕೆಲವರು 10-12 ಕಿಮೀ ದೂರ ಅರಣ್ಯದ ಮೂಲಕ ಸುತ್ತಿ ಬಳಸಿ ಸಂಚರಿಸುತ್ತಿದ್ದರು.

    ಗ್ರಾಮಸ್ಥರ ಸಮಸ್ಯೆ ಅರಿತ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ಮುಖ್ಯಮಂತ್ರಿ ಅವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಸ್ಪಂದಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ 3.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಕಳೆದ ಡಿ.25ರಂದು ಚಿಕ್ಕಮಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ತೂಗು ಸೇತುವೆ ಮರು ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಭಾರತ ಗ್ರಾಮ ಸಂಪರ್ಕ ನಿರ್ಮಾಣ ಸಂಸ್ಥೆಯ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಮಳೆಗಾಲ ಆರಂಭವಾಗುವಷ್ಟರಲ್ಲಿ ಕಾಮಗಾರಿ ಪೂರ್ಣವಾಗುವ ನಿರೀಕ್ಷೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts