More

    ಇಂದಿನಿಂದ ವಿಮಾನ ನಿಲ್ದಾಣ ಸಕ್ರಿಯ

    ಮಂಗಳೂರು: ಲಾಕ್‌ಡೌನ್‌ನಿಂದಾಗಿ ದೇಶೀಯ, ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಸ್ಥಗಿತಗೊಂಡ ಬಳಿಕ ಮೇ 25ರಿಂದ ಮಂಗಳೂರು ವಿಮಾನ ನಿಲ್ದಾಣ ಮತ್ತೆ ದೇಶೀಯ ವಿಮಾನಗಳ ಸಾಮಾನ್ಯ ಹಾರಾಟಕ್ಕೆ ಸಾಕ್ಷಿಯಾಗುತ್ತಿದೆ.ದೇಶೀಯ ವಿಮಾನ ಹಾರಾಟ ಮಂಗಳೂರು ವಿಮಾನ ನಿಲ್ದಾಣದಲ್ಲೂ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಸ್ಪೈಸ್‌ಜೆಟ್ ಹಾಗೂ ಏರ್ ಇಂಡಿಗೊ ಈಗಾಗಲೇ ತಮ್ಮ ವಿಮಾನ ಹಾರಾಟದ ವಿವರಗಳನ್ನು ನೀಡಿವೆ.

    ಸ್ಪೈಸ್ ಜೆಟ್‌ನ ವಿಮಾನಗಳು ಮುಂಬೈ-ಮಂಗಳೂರು ಹಾಗೂ ಬೆಂಗಳೂರು-ಮಂಗಳೂರು ಮಧ್ಯೆ ಮೇ.25ರಿಂದಲೇ ಹಾರಾಟ ಪ್ರಾರಂಭಿಸಲಿವೆ. ಅದೇ ರೀತಿ ಇಂಡಿಗೊ ವಿಮಾನಗಳು ಮಂಗಳೂರು-ಬೆಂಗಳೂರು, ಮುಂಬೈ-ಮಂಗಳೂರು, ಚೆನ್ನೈ-ಮಂಗಳೂರು ಮಧ್ಯೆ ಹಾರಾಟ ನಡೆಸಲಿವೆ. ವಿಮಾನ ಸಂಸ್ಥೆಗಳು ಈಗಾಗಲೇ ಪ್ರಕಟಣೆ ನೀಡಿದಂತೆಯೇ ಕಾರ್ಯನಿರ್ವಹಿಸುವುದು ಬಹುತೇಕ ನಿಶ್ಚಿತ. ಆದರೆ ಮುಂಬೈ ಏರ್‌ಪೋರ್ಟ್ ಇನ್ನೂ ಕಾರ್ಯಾಚರಣೆಗೆ ಸಿದ್ಧಗೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಅಲ್ಲಿಂದ ವಿಮಾನ ಬರುವುದು ಸಂಶಯ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕ್ವಾರಂಟೈನ್ ಕಡ್ಡಾಯ: ದೇಶೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೂ ಸಾಂಸ್ಥಿಕ ಕ್ವಾರಂಟೈನ್ 7 ದಿನ ಹಾಗೂ ಮತ್ತೆ 7 ದಿನ ಮನೆಯಲ್ಲಿ ಕ್ವಾರಂಟೈನ್ ಕಡ್ಡಾಯವಾಗಿರಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

    ಆಗಮಿಸುವ ಪ್ರಯಾಣಿಕರಿಗೆ ನೆರವು ನೀಡುವುದಕ್ಕೆ ವಿಮಾನ ನಿಲ್ದಾಣ ಟರ್ಮಿನಲ್‌ನಲ್ಲಿ ಡೆಸ್ಕ್ ಪ್ರಾರಂಭಿಸಲಾಗಿದೆ, ಬರುವ ಪ್ರಯಾಣಿಕರನ್ನು ಅಲ್ಲಿ ಗುರುತಿಸಿ, ಅವರನ್ನು ಆಯಾ ತಾಲೂಕುಗಳಿಗೆ ಕಳುಹಿಸಿ ಕ್ವಾರಂಟೈನ್ ಮಾಡಲಾಗುವುದು. ರೈಲಿನಲ್ಲಿ ಬರುವವರಿಗೂ ಇದೇ ವಿಧಾನ ಅನುಸರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ವೃದ್ಧರು, ಮಕ್ಕಳು, ಗರ್ಭಿಣಿಯರಿಗೆ ಪರೀಕ್ಷೆ ನಡೆಸಿ ಎರಡು ದಿನಗಳಲ್ಲಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಿ ಅಲ್ಲಿ ನಿಗಾವಣೆಯಲ್ಲಿ ಇರಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts