More

    ತುಮಕೂರು ಜಿಲ್ಲೆಯಲ್ಲಿ ಕರೊನಾಗೆ ಐವರು ಬಲಿ

    ತುಮಕೂರು: ಗುರುವಾರ ಜಿಲ್ಲೆಯಲ್ಲಿ 217 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17604ಕ್ಕೇರಿದೆ. 281 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 14960 ಜನರು ಗುಣಮುಖರಾಗಿದ್ದಾರೆ.

    ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 2271 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿದ್ದು, ತುರ್ತು ಘಟಕದಲ್ಲಿ 104 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 8925, ದ್ವಿತೀಯ ಸಂಪರ್ಕದಲ್ಲಿ 13510 ಜನರಿದ್ದು ಇವರೆಲ್ಲರ ಮೇಲೆ ನಿಗಾವಹಿಸಲಾಗಿದೆ. ಗುರುವಾರ ಕರೊನಾ 5 ಜನರನ್ನು ಬಲಿ ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 373ಕ್ಕೇರಿದೆ.
    ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 10, ಗುಬ್ಬಿ 21, ಕೊರಟಗೆರೆ 5, ಕುಣಿಗಲ್ 9, ಮಧುಗಿರಿ 8, ಪಾವಗಡ 10, ಶಿರಾ 26, ತಿಪಟೂರು 27, ತುರುವೇಕೆರೆ 5 ಹಾಗೂ ತುಮಕೂರು ತಾಲೂಕಿನಲ್ಲಿ 96 ಜನರಿಗೆ ಸೋಂಕು ತಗುಲಿದೆ.

    ಸೋಂಕಿತರಲ್ಲಿ 137 ಪುರುಷರು, 80 ಮಹಿಳೆಯರಿದ್ದು, 6 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 42 ಜನರಿದ್ದಾರೆ. ಬಹುತೇಕರಿಗೆ ಸೋಂಕಿತರ ಸಂಪರ್ಕದಿಂದ ವೈರಸ್ ತಗುಲಿದ್ದು ರೋಗಲಕ್ಷಣವಿಲ್ಲದೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಗುರುವಾರ ಕೊರಟಗೆರೆ ತಾಲೂಕು ಇರಕಸಂದ್ರದ 37 ವರ್ಷದ ಯುವತಿ, ಪಾವಗಡ ತಾಲೂಕು ಪತಂಜಲಿ ನಗರದ 80 ವರ್ಷದ ವೃದ್ಧ, ತಿಪಟೂರು ಶಾರದ ನಗರದ 89 ವರ್ಷದ ವೃದ್ಧ, ತುಮಕೂರಿನ 81 ವರ್ಷದ ವೃದ್ಧ, ಶಾಂತಿನಗರದ 71 ವರ್ಷದ ವೃದ್ಧ ಬಲಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts