More

    ಐದು ತಿಂಗಳಿಗೆ 501 ಕೆ.ಜಿ ಚಿನ್ನ ಉತ್ಪಾದನ

    ಹಟ್ಟಿಚಿನ್ನದಗಣಿ: 2023-24 ನೇ ಆರ್ಥಿಕ ವರ್ಷಕ್ಕೆ ಹಟ್ಟಿಚಿನ್ನದಗಣಿ ಕಂಪನಿ 1,800 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು 501.865 ಕೆ.ಜಿಯನ್ನು ಆರ್ಥಿಕ ವರ್ಷದ ಮೊದಲ ಐದು ತಿಂಗಳಿಗೆ ಉತ್ಪಾದಿಸಿದ್ದು, ಉಳಿದ 7 ತಿಂಗಳಿಗೆ ಬಾಕಿ ಇರುವ 1,298 ಕೆ.ಜಿ ಹಳದಿ ಲೋಹ ಉತ್ಪಾದಿಸಬೇಕಿದೆ.

    ಇದನ್ನೂ ಓದಿ: ಲಿಕ್ವಿಡ್ ಚಿನ್ನ ಕದ್ದಿದ್ದ ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

    ಪ್ರತಿ ಟನ್ ಅದಿರಿನಲ್ಲಿ 2.81 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದು, ಟನ್ನಿಗೆ 2.63 ಗ್ರಾಂ. ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ. ಏಪ್ರಿಲ್ 98, ಮೇ 94, ಜೂನ್ 98, ಜುಲೈ 99, ಕೆ.ಜಿ ಚಿನ್ನ ಕ್ರಮವಾಗಿ ಉತ್ಪಾದಿಸಲಾಗಿತ್ತು. 4 ತಿಂಗಳಲ್ಲಿ ನೂರು ಕೆ.ಜಿ ಉತ್ಪಾದನೆ ದಾಟಿರಲಿಲ್ಲ.

    ಅಗಸ್ಟ್ ತಿಂಗಳವೊಂದರಲ್ಲಿ 110 ಕೆ.ಜಿ ಚಿನ್ನ ಉತ್ಪಾದಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲೆ ಹೆಚ್ಚು ಚಿನ್ನ ಉತ್ಪಾದಿಸಿದೆ. ಆರ್ಥಿಕ ವರ್ಷದ ಪ್ರಾರಂಭದಲ್ಲಿ 1800 ಕೆ.ಜಿ ಗುರಿ ಹೊಂದಲಾಗಿತ್ತು. ಹಟ್ಟಿಚಿನ್ನದಗಣಿ ಕಂಪನಿ ಉತ್ಪಾದಿಸುವ 24 ಕ್ಯಾರೇಟ್ ಚಿನ್ನದ ದರ ಇಂದಿನ ಮಾರುಕಟ್ಟೆಯಲ್ಲಿ 55 ಸಾವಿರ ಆಸು-ಪಾಸಿನಲ್ಲಿದೆ.

    ಅಲ್ಪ ಸ್ವಲ್ಪ ಬೆಲೆಯಲ್ಲಿ ಏರಿಳಿಕೆ ಕಂಡರೂ ಸಹಿತ ಇಂದಿನ ದರಕ್ಕೆ ಹೋಲಿಸಿದರೆ ತಿಂಗಳಿಗೆ ಸರಾಸರಿ 75 ರಿಂದ 80 ಕೆ.ಜಿ ಚಿನ್ನ ಉತ್ಪಾದಿಸಿದರೆ ಗಣಿಯ ಕಾರ್ಯ ಕ್ಷಮತೆ ಉಳಿಸಿಕೊಂಡು ಅಧಿಕ ಲಾಭ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿ ಕಳೆದ ವರ್ಷದ ಲಾಭಕ್ಕೆ ಕಡಿಮೆಯಾಗದಂತೆ ಸರಿದೂಗಿಸಿ,

    ಗಣಿಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಕಂಪನಿ 2021-22 ನೇ ಆರ್ಥೀಕ ಸಾಲಿಗೆ 180 ಕೋಟಿ ಲಾಭಗಳಿಸಿದ್ದು, ವೆಚ್ಚವೆಲ್ಲವನ್ನು ತೆಗೆದರೆ 130 ಕೋಟಿ ರೂ. ನಿವ್ವಳ ಲಾಭಗಳಿಸಿತ್ತು.

    ಇಂದಿನ ಚಿನ್ನದ ದರ ಹೀಗೆ ಮುಂದುವರಿದರೆ ಕಳೆದ ಬಾರಿ ಲಾಭಕ್ಕಿಂತ ಹೆಚ್ಚಿನ ಲಾಭ ಗಳಿಕೆಯ ನಿರೀಕ್ಷೆ ಕಂಪನಿಗಿದೆ. ಅಧಿಕ ಉತ್ಪಾದನೆ ವೆಚ್ಚ ಗಣಿ ಕಂಪನಿ ಆಧೀನದ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತಾ ಸಾಗಿದೆ.

    ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತದೆ. 5 ಕಿ.ಮೀ ಅಂತರದಿಂದ ಅದಿರನ್ನು ಹಟ್ಟಿ ಲೋಹವಿಭಾಗಕ್ಕೆ ತಂದು ಸಂಸ್ಕರಿಸುವಲ್ಲಿ ಉತ್ಪಾದನಾ ವೆಚ್ಚವೂ ಕೂಡಾ ಅಧಿಕವಾಗಿದೆ.

    ಊಟಿ, ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಕಡಿಮೆ ಚಿನ್ನದ ಪ್ರಮಾಣ ಸಿಗುವ ಸ್ಥಳಗಳಿಂದ ಉಂಟಾಗುವ ನಷ್ಟವನ್ನು ಹಟ್ಟಿಗಣಿಯಲ್ಲಿ ಹೆಚ್ಚು ಚಿನ್ನ ತೆಗೆದು ಸರಾಸರಿಯಲ್ಲಿ ಸರಿದೂಗಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts