More

    ಲಿಕ್ವಿಡ್ ಚಿನ್ನ ಕದ್ದಿದ್ದ ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

    ಹುಬ್ಬಳ್ಳಿ: ನಗರದ ಮರಾಠಗಲ್ಲಿಯ ಕೋಳಿಪೇಟೆಯ ಬಂಗಾರ ಕರಗಿಸುವ ಅಂಗಡಿಯ ಶೆಟರ್ಸ್‌ ಮುರಿದು ಲಿಕ್ವಿಡ್ ಚಿನ್ನ ಕದ್ದು ಪರಾರಿಯಾಗಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಮಹಾರಾಷ್ಟ್ರ ಮೂಲದ ಅಜಯ ಕದಂ, ಆದಿನಾಥ ಬೋಸ್ಲೆ, ಅಜಯ ಬೋಸ್ಲೆ, ಅಲ್ಫಾಕ್ ಅಲಿಯಾಸ್ ಸಿದ್ಧಾರ್ಥ ಕಾಂಬಳೆ ಬಂಧಿತರು. ಇನೊಬ್ಬ ಕಳ್ಳ ಪರಾರಿಯಾಗಿದ್ದಾನೆ. ಬಂಧಿತರಿಂದ 20 ತೊಲ ಗಟ್ಟಿ ಬಂಗಾರ ಹಾಗೂ ಆರೂವರೆ ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ಒಟ್ಟು 18.5 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿಯಾಗಿದೆ.
    ಘಟನೆ ಏನಾಗಿತ್ತು?: ಮರಾಠಗಲ್ಲಿಯ ಕೋಳಿಪೇಟೆಯಲ್ಲಿ ಬಂಗಾರ ಕರಗಿಸುವ ಅಂಗಡಿಯಿಂದ 61.80 ಲಕ್ಷ ರೂ. ಮೌಲ್ಯದ 1025 ಗ್ರಾಂ ತೂಕದ 24 ಕ್ಯಾರೆಟ್ ಬಂಗಾರದ ದ್ರಾವಣ (ಲಿಕ್ವಿಡ್) ಕಳುವಾಗಿದೆ ಎಂದು ಅಂಗಡಿ ಮಾಲೀಕ ಕೈಲಾಶ ಜಾಧವ ದೂರು ದಾಖಲಿಸಿದ್ದ. ಪ್ರಕರಣ ಬೆನ್ನತ್ತಿದ್ದ ಎಸಿಪಿ ವಿಜಯಕುಮಾರ ತಳವಾರ, ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್ ರಫಿಕ್ ತಹಸೀಲ್ದಾರ್, ಪಿಎಸ್‌ಐ ವಿನೋದ ಹಾಗೂ ಕ್ರೈಂ ವಿಭಾಗದ ತಂಡ, ಮಹಾರಾಷ್ಟ್ರದ ವೀಟಾದಲ್ಲಿ ನಾಲ್ವರು ಕಳ್ಳರ ಹೆಡೆಮುರಿಕಟ್ಟಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts