More

    ಆಧಾರ್‌ ಕಾರ್ಡ್​ ಬೇಕೋ, ಬೇಡವೋ: ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್​

    ನವದೆಹಲಿ: ಆಧಾರ್ ಯೋಜನೆಯು ಸಂವಿಧಾನಿಕವಾಗಿ ಬದ್ಧವಾಗಿದೆ ಎಂದು ಈ ಹಿಂದೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧವಾಗಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಾಳೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

    2018ರ ಸೆ.26ರಂದು ನೀಡಿರುವ ತೀರ್ಪಿನ ವಿರುದ್ಧ 9 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ , ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ, ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪಂಚ ಸದಸ್ಯರ ಪೀಠ ನಡೆಸಲಿದೆ.

    ಆಧಾರ್​ ಕಡ್ಡಾಯಗೊಳಿಸಿರುವುದು ಕಾನೂನು ಬಾಹಿರವಾಗಿದೆ. ನಾಗರಿಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಇಂಥ ಕಾಯ್ದೆಯನ್ನು ರಾಜ್ಯಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೂಪಿಸಲಾಗಿದೆ. ಇದು, ಸಂವಿಧಾನಕ್ಕೆ ಮಾಡಲಾದ ಮೋಸ ಎಂದು ಅರ್ಜಿಯಲ್ಲಿ ದೂರಲಾಗಿದೆ.

    ಇದನ್ನೂ ಓದಿ: ಅಮೆರಿಕ ಪ್ರತಿಭಟನೆಯಿಂದ ಹೊತ್ತಿ ಉರಿದ ಬಳಿಕ ಈ ಯುವಕನಿಗೆ ಗಿಫ್ಟ್​​ಗಳ ಸುರಿಮಳೆ!

    2018ರ ಸೆಪ್ಟೆಂಬರ್ 26ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಪೀಠವು, ಆಧಾರ್ ಯೋಜನೆಯು ಖಾಸಗಿತನದ ಹಕ್ಕನ್ನು ಕಸಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಆಧಾರ್ ಯೋಜನೆಯು ಸಂವಿಧಾನಿಕವಾಗಿ ಬದ್ಧವಾಗಿದೆ ಎಂದು ಹೇಳಿತ್ತು. ಜತೆಗೆ ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಮತ್ತು ಶಾಲಾ ದಾಖಲಾತಿಗೆ ಇದರ ಜೋಡಣೆ ಕಡ್ಡಾಯವಲ್ಲ ಆದರೆ, ಆದಾಯ ತೆರಿಗೆ ವಿವರ ದಾಖಲಿಸಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಕಡ್ಡಾಯ ಎಂದು ಹೇಳಿತ್ತು.

    ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರು ಮಾತ್ರ ಇದಕ್ಕೆ ವಿರುದ್ಧವಾದ ತೀರ್ಪು ನೀಡಿದ್ದರು. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಂತೆ ಅಂಗೀಕರಿಸಲಾಗದು. ಇದು, ಸಂವಿಧಾನದ ದೃಷ್ಟಿಯಿಂದ ವಂಚನೆಯಾಗಲಿದೆ ಎಂದಿದ್ದರು. ಆದರೆ ನಾಲ್ವರು ನ್ಯಾಯಮೂರ್ತಿಗಳು ಒಂದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಬಹುಮತದ ಆಧಾರದ ಮೇಲೆ ಅವರ ತೀರ್ಪು ಮಾನ್ಯತೆ ಪಡೆದಿತ್ತು. ಇದೀಗ ಅದರ ವಿರುದ್ಧ ಪುನರ್​ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. (ಏಜೆನ್ಸೀಸ್​)

    ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts