More

    ಸಂಸದ ಅನಂತ ಕುಮಾರ್ ವಿರುದ್ಧ ಎಫ್ಐಆರ್

    ಮುಂಡಗೋಡ: ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಮತ್ತೊಂದು ಸ್ವಮೊಟೊ ಎಫ್ಐಆರ್ ದಾಖಲಾಗಿದೆ.
    ಮುಂಡಗೋಡಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದರು. ರಾತ್ರಿಯೇ ಮುಂಡಗೋಡ ಠಾಣೆಯಲ್ಲಿ ಪ್ರಕರಣ ಸಾಮಾಜಿಕ ಶಾಂತಿ ಕದಡುವ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಕೆಲ ದಿನಗಳ ಹಿಂದೆ ಅನಂತ ಕುಮಾರ ಹೆಗಡೆ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಎಂ ಸಿದ್ದರಾಮಯ್ಯರನ್ನು ಏಕವಚನದಲ್ಲಿ‌ ನಿಂದಿಸಿದ ಬಗ್ಗೆ ಹೈಕೋರ್ಟ್ ಅನಂತ‌ ಕುಮಾರ‌ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೂ ಅವರು ತಮ್ಮ ನಿಂದನಾ ಭಾಷಣ ಮುಂದುವರಿಸಿದ್ದಾರೆ.

    ಹೇಳಿದ್ದೇನು..?
    ಅಭಿವೃದ್ಧಿ ಎನ್ನುವುದು ಭಾಷಣದ ಚರ್ಚೆ ವಿಷಯ.ನಾವು ಅಷ್ಟು ಅನುದಾನ ತಂದೆವು ಇಷ್ಟು ಅನುದಾನ ತಂದೆವು ,ಅಷ್ಟು ಕಡಿದೆವು ಇಷ್ಟು ಕಡಿದು ರಾಶಿ ಹಾಕಿದೆವು ಅನ್ನೋದು ಭಾಷಣದಲ್ಲಿ ಚಂದ.ಮೋದಿಗೆ ಓಟು ಕೊಡುವರು ಧರ್ಮಕ್ಕೋಸ್ಕರ ಕೊಡುತ್ತಾರೆ. ಒಂದು ಸಾವಿರ ವರ್ಷದಿಂದ ನಮ್ಮ
    ಮೇಲೆ ಯಾರು ದಬ್ಬಾಳಿಕೆ ನಡೆಸುತ್ತಿದ್ರೋ ಅದಕ್ಕೆ ಪ್ರತಿಯಾಗಿ ರಾಮಮಂದಿರ ಕಟ್ಟಿ ನಿಲ್ಲಿಸಿದ್ದೇವೆ. ನಮ್ಮ ರಕ್ತ ಸತ್ತಿಲ್ಲ.ಮೋದಿ ಪ್ರಚಾರ ಬಯಸದೇ ಸಾಕಷ್ಟು ಯೋಜನೆಗಳನ್ನು ಕೊಟ್ರುಈ ಯೋಜನೆಗಳಿಂದ ದೇಶ ದಿವಾಳಿಯಾಗಿಲ್ಲ, ಬದಲಾಗಿ ಇನ್ನಷ್ಟು ಸಶಕ್ತವಾಗಿದೆ. ಸಿದ್ದರಾಮುಲ್ಲ ಖಾನ್ ಬಳಿ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ.ಅಭಿವೃದ್ಧಿ ಗೆ, ಶಾಸಕರಿಗೆ ಕೊಡಲು ಪಗಾರ ಇಲ್ಲ ಅಂತಾರೆ..ಹಿಂದುಳಿದವರಿಗೆ ಹಾಗೂ ಎಸ್ಸಿ- ಎಸ್ಟಿಗಳಿಗೆ ನೀಡಿದ‌ 11 ಸಾವಿರ ಕೋಟಿ ರೂ. ನಾಪತ್ತೆಯಾಗಿಬಿಟ್ಟಿದೆ.ರಾಜ್ಯ ಸರ್ಕಾರ ದಿವಾಳಿಯಾಗಿಬಿಟ್ಟಿದ್ದು,
    ಸಿದ್ಧರಾಮಯ್ಯನ ಸರ್ಕಾರದ ತರ ಮೋದಿ ಸರ್ಕಾರ ದಿವಾಳಿ ಆಗಿಲ್ಲ.ರಾಜ್ಯವನ್ನು ಲೂಡಿ ಹೊಡೆದು ದಿವಾಳಿ ಮಾಡಿ ಓಟು ತಗೋಬೇಕು ಎಂದು ಹೊರಟಿದ್ದಾರೆ.ಇಷ್ಟು ಹೇಸಿಗೆ ಸರ್ಕಾರ ನಾನೆಲ್ಲೂ ನೋಡಿಲ್ಲ.. ಇಷ್ಟು ದರಿದ್ರ ಸರ್ಕಾರ ನೋಡಿಲ್ಲ.ನಮಗೆ ಕೇಂದ್ರ ಸರ್ಕಾರ ಟ್ಯಾಕ್ಸ್ ಹಣ ಕೊಟ್ಟಿಲ್ಲ ಅಂತಾರೇ.ತಮಿಳುನಾಡಿಗೆ ಇಲ್ಲದ ವೇದನೆ, ಆಂಧ್ರದವರಿಗೆ ಇಲ್ಲದ ವೇದನೆ, ಕೇರಳಕ್ಕೆ ಇರದ ವೇದನೆ ಇವರಿಗೇಕೆ? ಅವರು ಕೇಳಬಹುದಿತ್ತಲ್ಲ..?ಅನ್ಯಾಯ ಮಾಡಿದ್ರೆ ಅವರಿಗೂ ಬಿಜೆಪಿಯವರಲ್ಲ ಎಂದು ಮೋದಿಯವರು ಅವರಿಗೂ ಹಣ ಕೊಡದೇ ಕಳುಹಿಸಬಹುದಿತ್ತು.ಅವರಿಗ್ಯಾಕೆ ಎಲ್ಲಾ ಸರಿಯಾಗುತ್ತಿದೆ, ನಮ್ಮ ಸಿದ್ದರಾಮುಲ್ಲಾ ಖಾನ್ ಗೆ ಏಕೆ ಈ ತೊಂದರೆ.ಹೆತ್ತವರಿಗೆ ಹೆರಿಗೆ ಬೇನೆ ಗ್ಯಾರಂಟಿ ಆದ್ರೆ, ಈ ಸಿದ್ದರಾಮಯ್ಯನಿಗೆ ಏಕೆ? ಈ ಮನುಷ್ಯನಿಗೆ ದುರಹಂಕಾರ, ಓಸಿ ಚೀಟಿ ಬರೆದಂತೆ ಫೈಲನ್ನು ಬರೆಯುತ್ತಾರೆಓಸಿ ಚೀಟಿಗಾದರೂ ಬೆಲೆ ಇರುತ್ತದೆ, ಒಂದು ರೂಪಾಯಿ ಕೊಟ್ರೆ 80 ರೂಪಾಯಿ ಕೊಡ್ತಾರೆಸಿದ್ದರಾಮಯ್ಯ ಬರೆದಂತ ಲೆಟರ್‌ಗೆ ಎಷ್ಟು ದುರಂಕಾರದ ಸಹಿ ಹಾಕುತ್ತಾರೆ ಅಂದ್ರೆ ಆ ಲೆಟರ್ ಕೂಡಾ ನೋಡಬಾರದು ಅಂದೆನಿಸುತ್ತದೆ.ಅಷ್ಟರಮಟ್ಟಿಗೆ ದುರಹಂಕಾರ. ಕೊಡಬೇಕು..ಅಂತಾರ
    ಏನ್ ನಿಮ್ಮಪ್ಪನದ್ದಾ ಆಸ್ತಿ..? ನಾವು ಕೊಟ್ಟಿರೋ ದುಡ್ಡಿಗೆ ಲೆಕ್ಕ ಕೊಡಿನಾವು ಕೊಟ್ಟಿರೋ ಸಾವಿರಾರು ಕೋಟಿ ರೂ. ದುಡ್ಡಿಗೆ ಮೊದಲು ಲೆಕ್ಕಾ ಕೊಡಿ ಆಮೇಲೆ ಮುಂದಿನದ್ದು ಕೊಡ್ತೀವಿ.ಈ ದೇಶದಲ್ಲಿ ತೆರಿಗೆ ಕಟ್ಟುವವರು 99.‌9 ಶೇ. ಜನರು ಹಿಂದುಗಳು.ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಮಸೀದಿಗೆ, ಚರ್ಚಿಗೆ ಯಾಕೆ ಕೊಟ್ರಿ…?ನಾವು ಕೇಳಬೇಕಾ ಬೇಡಾ ನಾಳೆ..? ನಮ್ಮ ತೆರಿಗೆ ಹಣ ನಮಗೆ ಕೊಡಿ.ನಮ್ಮ ದೇವಸ್ಥಾನಗಳು ಹಾಳು ಬಿದ್ದಿವೆ, ಅದಕ್ಕೆ ನೀಡಲು ರಾಜ್ಯ ಸರಕಾರದಲ್ಲಿ ದುಡ್ಡಿಲ್ಲ.ಆದರೆ, ಮಸೀದಿಗೆ ಕೊಡಲು ಸರಕಾರಲ್ಲಿ ದುಡ್ಡಿದೆ.ಮಸೀದಿಗೆ ಹಣ ಕೊಡ್ತೀರಾ, ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ದುಡ್ಡು ಕೊಡ್ತೀರಾ.ನಮ್ಮ ದೇವರು ಏನು ಅಪರಾದ ಮಾಡಿದ್ದಾನೆ..?ನಮ್ಮ ಹಿಂದುಗಳು ಕೊಟ್ಟಿರುವ ಟ್ಯಾಕ್ಸ್ ಹಣವಿದು.ನಾವು ಕೊಟ್ಟಿರೋ ತೆರಿಗೆ ಮೇಲೆ ಸರ್ಕಾರ ನಡೀತಿದೆ.ನಾವು ಹಿಂದುಗಳ ತೆರಿಗೆ ಹಿಂದುಗಳ ಹಕ್ಕು ಅಂತ ಕುಳಿತುಕೊಂಡರೇ ಪರಿಸ್ಥಿತಿ ಏನಾಗುತ್ತೆ? ನಾವು ಸಣ್ಣ ಬುದ್ಧಿ ಮಾಡುವುದಿಲ್ಲ.ಹಿಂದುಗಳ ಸಮಾಜ ಬೇವರ್ಸಿ ಸಮಾಜವೇ ? ಯಾರೂ
    ಹೇಳೋರು ಕೇಳೋರು ಇಲ್ಲದ ಸಮಾಜವಾ ಇದು.ದಯವಿಟ್ಟು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಕಾಂಗ್ರೆಸ್ ಮಾಡಿದ್ದು ಅಪಪ್ರಚಾರ ಮಾತ್ರ..ಪ್ರಚಾರ ಯಾವತ್ತೂ ಕಾಂಗ್ರೆಸ್ ಮಾಡಿಲ್ಲ.ಸ್ವಾತಂತ್ರ ಬಂದ ನಂತರ ಎಲ್ಲಾ ರಸ್ತೆಗಳು, ಸರ್ಕಲ್, ಯೋಜನೆಗಳಲ್ಲಿ ಗಾಂಧಿ ಹೆಸರುಗಳೇ.ಅಪ್ಪ ಗಾಂಧಿ, ಮಗ ಗಾಂಧಿ, ಅಜ್ಜ ಗಾಂಧಿ, ಮೊಮ್ಮಗ ಗಾಂಧಿ ಎಲ್ಲಾ ಗಾಂಧಿ ಹೆಸರುಗಳೇ.ಮೋದಿಯವರು ಎಲ್ಲಿಯಾದರೂ ಒಂದು ಹೆಸರು ಇಟ್ಟುಕೊಂಡಿದ್ದಾರಾ.ನಮಗೆ ಕೆಲಸ ಮಾಡುವುದು ಮಾತ್ರ ಬೇಕು ,ಅವರಿಗೆ ಹೆಸರು ಮಾತ್ರ ಬೇಕು.ಬ್ರಾಂಡ್ ಬ್ರಾಂಡ್ ನೋಡೇ ಓಟು ಹಾಕಬೇಕು.
    ಅಪಪ್ರಚಾರ ಮಾಡುತ್ತಾ ದೇಶವನ್ನು ಲೂಟಿ ಹೊಡೆದ ಕುಟುಂಬವನ್ನೇ ಎಲ್ಲಾ ಕಡೆ ಇಟ್ಟುಕೊಂಡು ತಿರುಗುತ್ತಾರಲ್ಲ ಬಾಟಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಕುಸ್ತಿಗೆ ಬರುವವರ ಎದುರು ಅಮ್ಮನ ಎದೆಹಾಲು ಕುಡಿದವರಿಗೆ ನಮಗೆ ಎಷ್ಟು ಧೈರ್ಯ ಇರಬಾರದು.ಬಾಟಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಗಲಾಟೆ ಮಾಡ್ತಾರೆ ಇವರು ಎಂದು ಪ್ರಶ್ನೆ ಮಾಡಿದ ಸಂಸದ ಹೆಗಡೆ.ಪಂಜಾಬ್ ಬಾರ್ಡರ್‌ನಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡ್ತಿದ್ದಾರೆಇಡೀ ದೇಶದಲ್ಲಿ ಇಲ್ದಿರೋ ಗಲಾಟೆ, ಅನ್ಯಾಯ ಅವರಿಗೇನಾಗಿದೆ.ಅವರು ದೊಡ್ಡ ದೊಡ್ಡ ವಾಹನಗಳನ್ನು ತೆಗೆದುಕೊಂಡು ಬರ್ತಿದ್ದಾರೆ, ರೈತರಲ್ಲಿ ಅಷ್ಟೊಂದು ದುಡ್ಡು ಇದ್ಯಾ..?ಪ್ರತೀ ವರ್ಷ ರೈತರ ಸಾಲ ದೊಡ್ಡದಾಗ್ತಾನೇ ಇದೆ, ದೊಡ್ಡ ಕೆರೆ ತೆಗೆದ್ರಿ ಸಣ್ಣ ಕೆರೆ ತುಂಬಿದ್ರಿ ಆದರೆ, ಪಂಜಾಬ್ ಬಾರ್ಡರ್‌ನಲ್ಲಿ ಪ್ರತಿಭಟನೆಗೆ ಬರುವವರು ದೊಡ್ಡ ದೊಡ್ಡ ವಾಹನಗಳನ್ನು ತೆಗೆದುಕೊಂಡು ಬರ್ತಿದ್ದಾರೆ. ರೈತರ ಹೋರಾಟವಲ್ಲ, ದೇಶ ದ್ರೋಹಿಗಳ ಹೋರಾಟ, ಖಲಿಸ್ತಾನಿಗಳ ಹೋರಾಟ. ಅವರು ಯಾರೂ ಕೂಡಾ ರೈತರಲ್ಲ, ಅದಕ್ಕೆ ಬೇರೆ ದೇಶದವರು ಹಣ ಕೊಡ್ತಿದ್ದಾರೆ.ಮೋದಿಯವರ ಕೆಲಸದಿಂದ ಎಷ್ಟು ದೇಶಗಳು ಅವರನ್ನು ಕೊಂಡಾಡಿದ್ರೂ ಅಷ್ಟೇ ಹೊಟ್ಟೆ ಕಿಚ್ಚು ಪಡುವವರೂ ಇದ್ದಾರೆ.ಇದಕ್ಕೆಲ್ಲಾ ಮುಕ್ತಿ ಬೇಕಂತಾದ್ರೆ ದೇಶದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು ಎಂದು‌ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts