More

    ಮೀನುಗಾರರ ಬೇಡಿಕೆ ಈಡೇರಿಕೆಗೆ ಒತ್ತಾಯ

    ಉಡುಪಿ: ಕರಾವಳಿ ಮೀನುಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಮೀನುಗಾರರ ನಿಯೋಗ ಡಾ.ಜಿ. ಶಂಕರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದೆ. ಮಹಿಳಾ ಮೀನುಗಾರರ ಸಾಲ ಮಂಜೂರಾತಿ ಮಾಡುವಾಗ ಕೈಗೊಂಡ ಮಾನದಂಡವನ್ನೇ ಅನುಸರಿಸಿ ಸಾಲಮನ್ನಾ ಯೋಜನೆ ಕೈಗೊಳ್ಳಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಘೋಷಣೆಯನ್ನು ಸಹಕಾರಿ ಬ್ಯಾಂಕ್‌ಗಳಿಗೂ ವಿಸ್ತರಿಸಬೇಕು. ಕರಾವಳಿ ಮತ್ತು ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟು ಕಟ್ಟುನಿಟ್ಟಾದ ಸಮಗ್ರ ಹೊಸ ನೀತಿ ರಚಿಸಬೇಕು. ಮತ್ಸ್ಯಾಶ್ರಯ ಮನೆಗಳನ್ನು ಮಂಜೂರುಗೊಳಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಹಣ ಬಿಡುಗಡೆಯಾಗದೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪುನರಾರಂಭಿಸಬೇಕು. ಗಂಗಾಮತಸ್ಥ ಮತ್ತು 39 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಒಣ ಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಯಂತೆ ಸೋಲಾರ್ ಡ್ರೈಯರ್ ಖರೀದಿಸಲು ವಿಶೇಷ ಸಹಾಯಧನ ಒದಗಿಸಬೇಕು.
    ಮೀನುಗಾರಿಕಾ ಬೋಟುಗಳು ಸಮುದ್ರಯಾನವಾದ್ದರಿಂದ ರಸ್ತೆ ಕರ ವಿಧಿಸಬಾರದು. ರಾಜ್ಯದ ಎಲ್ಲ ಬಂದರುಗಳ ಬ್ರೇಕ್ ವಾಟರ್ ನಿರ್ಮಾಣ, ಕರರಹಿತ ಡೀಸೆಲ್ ದಿನಕ್ಕೆ 300 ಲೀಟರ್‌ನಿಂದ 500 ಲೀ.ಗೆ ಹೆಚ್ಚಳ, ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕರರಹಿತ ಸೀಮೆಎಣ್ಣೆ ಪ್ರತೀ ಪರ್ಮೀಟ್‌ಗೂ 400 ಲೀ.ನಂತೆ ನೀಡುವುದು. ಪ್ರತೀ ತಿಂಗಳ 5ರೊಳಗೆ ಮೀನುಗಾರರ ಬ್ಯಾಂಕ್ ಖಾತೆಗೆ ಸಬ್ಸಿಡಿ ಜಮೆಯಾಗುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂಬುದು ಮೀನುಗಾರರ ಬೇಡಿಕೆ. ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಅವಘಡದಲ್ಲಿ ನಾಪತ್ತೆಯಾದ ಏಳು ಮೀನುಗಾರರ ಕುಟುಂಬಗಳಿಗೆ ವಿಶೇಷ ಪರಿಹಾರವಾಗಿ ತಲಾ 25 ಲಕ್ಷ ರೂ. ನೀಡಬೇಕು ಮತ್ತು ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಪಟ್ಟ ಸೂಕ್ತ ನಿರ್ದೇಶನ ನೀಡುವಂತೆ ನಿಯೋಗ ಆಗ್ರಹಿಸಲಾಗಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts