More

    ದೂಗೂರು ಜಿಗಳೆಕೆರೆಯಲ್ಲಿ ಅಪಾರ ಮೀನು ಸಾವು

    ಸೊರಬ: ಉಳವಿ-ದೂಗೂರು ಕೆರೆಯಲ್ಲಿ ಕಲುಷಿತಗೊಂಡ ನೀರಿನಿಂದಾಗಿ ಸಾವಿರಾರು ಮೀನುಗಳು ಸಾಯá-ತ್ತಿವೆ.

    ಗ್ರಾಮದ ಜಿಗಳೆಕೆರೆಯ ಮೇಲ್ಭಾಗದಲ್ಲಿ ಶುಂಠಿ ಕಣ ಮಾಡಿದ್ದು ಅಲ್ಲಿ ಶುಂಠಿ ಕ್ಲೀನಿಂಗ್ ಮಾಡಿದ ನೀರು ಕೆರೆಗೆ ಹರಿದು ನೀರು ಕಲುಷಿತಗೊಂಡಿದ್ದರ ಪರಿಣಾಮ ಮೀನುಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಜತೆಗೆ ಕೆರೆ ನೀರು ಕೂಡ ಕಪ್ಪು ಬಣ್ಣಕ್ಕೆ ತಿರುಗಿದೆ. ಶುಂಠಿ ಕ್ಲೀನಿಂಗ್ ನೀರು ಹರಿದು ಮೀನುಗಳು ಸತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದು ಶುಂಠಿ ಕ್ಲೀನಿಂಗ್ ನೀರು ಕೆರೆಗೆ ಹರಿಸದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕಾರಣರಾದವರ ವಿರá-ದ್ಧ ಸೂಕ್ತ ಕ್ರಮ ಜರá-ಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮೀನುಗಾರಿಕೆ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಕೆರೆಯ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕವೇ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷದಿಂದ ಈ ಕೆರೆಯಲ್ಲಿ ಮೀನು ಹಿಡಿದಿಲ್ಲ. ಕೆರೆಯಲ್ಲಿ ಅಂದಾಜು 50 ಕ್ವಿಂಟಾಲ್​ಗಿಂತ ಹೆಚ್ಚಿನ ಮೀನು ಇತ್ತು. ಈಗ ಎಲ್ಲ ಮೀನು ಸಾಯುತ್ತಿರುವುದು ನಷ್ಟಕ್ಕೆ ಕಾರಣವಾಗಿದೆ ಎಂದು ಗ್ರಾಮ ಸಮಿತಿ ಅಧ್ಯಕ್ಷ ಪರಮೇಶ್ವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts