More

    ಯುರೋಪ್​ನ ಸ್ಯಾನ್ ಮರಿನೋ ಈಗ ಒಲಿಂಪಿಕ್ಸ್ ಪದಕ ಗೆದ್ದ ಅತಿ ಸಣ್ಣ ದೇಶ!

    ಟೋಕಿಯೊ: ಕೇವಲ 34 ಸಾವಿರ ಜನಸಂಖ್ಯೆ ಹೊಂದಿರುವ ಯುರೋಪ್ ದೇಶ ಸ್ಯಾನ್ ಮರಿನೋ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ವಿಶ್ವದ ಅತಿ ಸಣ್ಣ (ಜನಸಂಖ್ಯೆಯಲ್ಲಿ) ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    33 ವರ್ಷದ ಟ್ರ್ಯಾಪ್ ಶೂಟರ್ ಅಲೆಸಾಂಡ್ರಾ ಪೆರಿಲ್ ಕಂಚಿನ ಪದಕ ಜಯಿಸುವ ಮೂಲಕ ಸ್ಯಾನ್ ಮರಿನೋ ತನ್ನ 61 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಪದಕ ಒಲಿಸಿಕೊಂಡಿತು. ಪೆರಿಲ್‌ಗೆ ಇದು 2ನೇ ಒಲಿಂಪಿಕ್ಸ್ ಸ್ಪರ್ಧೆಯಾಗಿತ್ತು.

    ಇದನ್ನೂ ಓದಿ:  ಒಲಿಂಪಿಕ್ಸ್‌ನಲ್ಲಿ ಕನ್ನಡಿಗ ಫವಾದ್ ಮಿರ್ಜಾ ಕುದುರೆ ಫಿಟ್ನೆಸ್ ಪರೀಕ್ಷೆ ಪಾಸ್, ಸ್ಪರ್ಧೆಗೆ ಸಜ್ಜು

    1960ರಲ್ಲಿ ಒಲಿಂಪಿಕ್ಸ್ ಪದಾರ್ಪಣೆ ಮಾಡಿದ್ದ ಸ್ಯಾನ್ ಮರಿನೋ, ಬೇಸಗೆ ಅಥವಾ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಜಯಿಸಿದ ಮೊದಲ ಪದಕ ಇದಾಗಿದೆ. ಈ ಬಾರಿ ಸ್ಯಾನ್ ಮರಿನೋ 4 ಕ್ರೀಡಾಪಟುಗಳ ತಂಡದೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದೆ. ಸ್ಯಾನ್ ಮರಿನೋ ದ್ವೀಪರಾಷ್ಟ್ರ ಇಟಲಿ ದೇಶದ ಪಕ್ಕದಲ್ಲಿದೆ. 63 ಸಾವಿರ ಜನಸಂಖ್ಯೆಯ ಬರ್ಮುಡಾ ದೇಶ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅತಿ ಸಣ್ಣ ದೇಶವಾಗಿದೆ.

    ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts