More

    ಸೀತೆಯಾದ ಆಲಿಯಾ; RRR ಚಿತ್ರದ ಫಸ್ಟ್​ಲುಕ್ ಬಿಡುಗಡೆ

    ‘ಆರ್​ಆರ್​ಆರ್’ ಚಿತ್ರದಲ್ಲಿ ಜೂ. ಎನ್​ಟಿಆರ್ ಮತ್ತು ರಾಮ್​ಚರಣ್​ ತೇಜ ಹೇಗೆ ಕಾಣುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಈಗಾಗಲೇ ಅವರಿಬ್ಬರ ಫಸ್ಟ್​ಲುಕ್ ಬಿಡುಗಡೆ ಮಾಡಲಾಗಿತ್ತು. ಆದರೆ, ನಾಯಕಿ ಆಲಿಯಾ ಭಟ್ ಹೇಗೆ ಕಾಣುತ್ತಾರೆ ಎಂದು ಚಿತ್ರತಂಡ ಸಸ್ಪೆನ್ಸ್ ಕಾಯ್ದುಕೊಂಡೇ ಬಂದಿತ್ತು. ಸೋಮವಾರ ಆ ರಹಸ್ಯವನ್ನು ಬಯಲು ಮಾಡಿರುವ ನಿರ್ದೇಶಕ ರಾಜಮೌಳಿ, ಆಲಿಯಾ ಭಟ್ ಜನ್ಮದಿನದ ಪ್ರಯುಕ್ತ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

    ‘ಆರ್​ಆರ್​ಆರ್’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಆಗಮಿಸಿರುವ ಆಲಿಯಾ, ಈ ಚಿತ್ರದಲ್ಲಿ ಸೀತೆಯಾಗಿದ್ದಾರೆ. ಬಿಡುಗಡೆ ಆಗಿರುವ ಲುಕ್​ನಲ್ಲಿ ನಾಜೂಕು ಸ್ವಭಾವದ ಹುಡುಗಿಯಾಗಿ, ಸಭ್ಯ ಸಂಪ್ರದಾಯಸ್ಥ ಕುಟುಂಬದ ಮಗಳಾಗಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, 1920ರ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯ ಬಗ್ಗೆ ಈಗಾಗಲೇ ನಿರ್ದೇಶಕ ರಾಜಮೌಳಿ ಎರಡು ಕಿರು ಟೀಸರ್​ಗಳಲ್ಲಿ ತೋರಿಸಿದ್ದಾರೆ. ಪೂರ್ತಿ ಸಿನಿಮಾ ನೋಡಬೇಕೆಂದರೆ ಅಕ್ಟೋಬರ್ 13ರವರೆಗೂ ಕಾಯಲೇಬೇಕು. ಸದ್ಯ ಕೊನೆಯ ಹಂತದ ಶೂಟಿಂಗ್​ನಲ್ಲಿ ನಿರ್ದೇಶಕ ರಾಜಮೌಳಿ ನಿರತರಾಗಿದ್ದು, ಇನ್ನೇನು ಕೆಲವು ದಿನಗಳಲ್ಲೇ ಚಿತ್ರೀಕರಣ ಮುಗಿಸಲಿದ್ದಾರೆ. ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. –ಏಜೆನ್ಸೀಸ್

    ಮತ್ತೆ ಲಾಕ್​ಡೌನ್​ ಆಗಬಾರದು ಎಂದರೆ ನಿಯಮ ಕಡ್ಡಾಯ ಪಾಲಿಸಿ; ಸದ್ಯಕ್ಕೆ ಒಂದು ವಾರ ಕಾದು ನೋಡುತ್ತೇವೆ ಎಂದರು ಸಿಎಂ

    ಜೊಮ್ಯಾಟೋ ವಿವಾದದ ಹಿತೇಶಾಗೆ ಎಫ್​ಐಆರ್​ ಶಾಕ್​​! ಚಪ್ಪಲಿ ಎಸೆದು ಪೇಚಿಗೆ ಸಿಲುಕಿದ ಇನ್​ಫ್ಲೂಯೆನ್ಸರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts