More

    16 ವರ್ಷ ಹಳೇ ಫೋನು 52 ಲಕ್ಷ ರೂ. ಗೆ ಮಾರಾಟವಾಯ್ತು!

    ಬೆಂಗಳೂರು: ಈಗೆಲ್ಲ ಒಂದು ಮೊಬೈಲ್​ ಫೋನ್​ ಹೆಚ್ಚೆಂದರೆ 6 ವರ್ಷ ಬಾಳಿಕೆ ಬರಬಹುದು. ಪ್ರತೀ ವರ್ಷವೂ ಮೊಬೈಲ್​ ಬದಲಾಯಿಸುವ ಕಾಲ ಇದಾಗಿದ್ದು ಇಲ್ಲೊಂದು 16 ವರ್ಷ ಹಳೆಯ ಫೋನು ಬರೋಬ್ಬರಿ 52.4 ಲಕ್ಷ ರೂ.ಗೆ ಮಾರಾಟವಾಗಿದೆ. ಅಂದಹಾಗೆ ಈ ಫೋನು ಆ್ಯಪಲ್​ ಕಂಪನಿಯದ್ದಾಗಿದ್ದು ಈ ಫೋನಿನ ಕವರ್​ ಕೂಡ ಬಿಚ್ಚಲಾಗಿಲ್ಲ. ಇದೇ ಕಾರಣಕ್ಕಾಗಿ ಈ ಫೋನಿಗೆ ಅಷ್ಟೊಂದು ಬೆಲೆ ಬಂದಿದೆ ಎನ್ನಲಾಗಿದೆ.

    ನಾವಿರುವ ಆಧುನಿಕ ಯುಗಕ್ಕೆ ಕಾರಣವಾದ ಪ್ರಮುಖ ಆವಿಷ್ಕಾರಗಳಲ್ಲಿ ಫೋನ್​ ಕೂಡ ಒಂದು. ಮೊದಲಿಗೆ ಸ್ಮಾರ್ಟ್​ಫೊನ್​ನ ಪರಿಕಲ್ಪನೆಯನ್ನು ತಂದಿದ್ದೇ ಸ್ಟೀವ್​ ಜಾಬ್ಸ್​. ಮೊದಲ iPhone 4ಜಿಬಿ ರ್ಯಾಮ್​, 8 ಸ್ಟೋರೇಜ್​, ಟಚ್‌ಸ್ಕ್ರೀನ್, 2-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ವೆಬ್ ಬ್ರೌಸರ್ ಅನ್ನು ಒಳಗೊಂಡಿತ್ತು. ಐಕಾನ್ ಬಾಕ್ಸ್ ಪರದೆಯ ಮೇಲೆ 12 ಐಕಾನ್‌ಗಳೊಂದಿಗೆ ಐಫೋನ್‌ನ ಜೀವಿತಾವಧಿಯ ಚಿತ್ರವನ್ನು ಒಳಗೊಂಡಿತ್ತು. ಇದು ಶೀಘ್ರವಾಗಿ ಆಪಲ್‌ನ ಅತ್ಯಂತ ಯಶಸ್ವಿ ಉತ್ಪನ್ನವಾಯಿತು. ಹೀಗೆ ಆ್ಯಪಲ್​ ಕಂಪನಿ ಸ್ಮಾರ್ಟ್‌ಫೋನ್ ಉದ್ಯಮವನ್ನು ಶಾಶ್ವತವಾಗಿ ಬದಲಾಯಿಸಿತು.

    ಫ್ಯಾಕ್ಟರಿಯಿಂದ ಹೊರಬಂದಾಗ ಪ್ರತಿಯೊಂದು ಫೋನಿನ ಬಾಕ್ಸ್​ ಮೇಲೂ ಒಂದು ಸೀಲ್​ ಇರುತ್ತದೆ. ಅದೇ ಸೀಲ್​ನೊಂದಿಗೆ ಇರುವ ಮೊದಲ ಮಾದರಿಯ ಐಫೋನ್ಅನ್ನು ವಿಶೇಷ ಸ್ವತ್ತು ಎಂದು ಪರಿಗಣಿಸಲಾಗಿದೆ. ಐಕಾನಿಕ್ ಫ್ಯಾಕ್ಟರಿ ಮೊಹರು, ಮೊದಲ ಎಡಿಷನ್​ನ ಐಫೋನ್ಅನ್ನು ಅತ್ಯುತ್ತಮ ಸ್ಥಿತಿಯಲ್ಲಿರುವ ಈ ಫೋನ್‌ನ ಮೂಲ ಮಾಲೀಕರು ಕರೆನ್ ಗ್ರೀನ್. ಹೀಗೆ ಸುಮಾರು 16 ವರ್ಷ ಹಳೆಯ ಫೋನ್ ಬರೋಬ್ಬರಿ 63,653 ಡಾಲರ್​ ಅಥವಾ 52.4 ಲಕ್ಷ ರೂ. ಬೆಲೆಗೆ ಮಾರಾಟವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts