More

    ನಿರಾಳವಾಗಿದ್ದ ನಾಗಾಲ್ಯಾಂಡ್​ಗೆ ಕಾಲಿಟ್ಟ ಮಹಾಮಾರಿ ಕರೊನಾ; ಕೋಲ್ಕತ್ತದಿಂದ ದಿಮಾಪುರ್​ಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು

    ದಿಮಾಪುರ್​: ಕೋಲ್ಕತ್ತದಿಂದ ನಾಗಾಲ್ಯಾಂಡ್​ನ ದಿಮಾಪುರ್​ಗೆ ಮಾ.24ರಂದು ಆಗಮಿಸಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದು ನಾಗಾಲ್ಯಾಂಡ್​ನಲ್ಲಿ ಮೊದಲ ಕರೊನಾ ಪ್ರಕರಣವಾಗಿದೆ.

    ಕರೊನಾ ಸೋಂಕಿತನನ್ನು ಸದ್ಯ ಆಸ್ಸಾಂನ ಗುವಾಹಟಿ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ನಾಗಾಲ್ಯಾಂಡ್​ನ ಬಹುದೊಡ್ಡ ಪಟ್ಟಣವಾದ ದಿಮಾಪುರ್​ದಲ್ಲಿ ಮೊಲದ ಕರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ವಾರಿಪಟ್ಟಿ ಮತ್ತು ಘೋರಪಟ್ಟಿ ಪ್ರದೇಶಗಳು ಸಂಪೂರ್ಣ ಸೀಲ್​ಡೌನ್​ ಆಗಿವೆ. ಹಾಗೇ ಸೋಂಕಿತ ಆಸ್ಸಾಂ ಆಸ್ಪತ್ರೆಗೆ ತೆರಳುವುದಕ್ಕಿಂತ ಮೊದಲು ಅಡ್ಮಿಟ್​ ಆಗಿದ್ದ ದಿಮಾಪುರ್​ದ ಝಿಯೋನ್​ ಆಸ್ಪತ್ರೆಯನ್ನೂ ಬಂದ್ ಮಾಡಲಾಗಿದೆ. ಇದರ ವೈದ್ಯರು, ನರ್ಸ್​​ಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಕರೊನಾ ಸೋಂಕಿತನ ಕುಟುಂಬದ ಸದಸ್ಯರನ್ನು ಈಗಾಗಲೇ ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ನಾಗಾಲ್ಯಾಂಡ್​ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

    ಹಾಗೇ ಈ ವ್ಯಕ್ತಿ ಮಾರ್ಚ್​ 24ರಂದು ವಿಮಾನದ ಮೂಲಕ ಕಲ್ಕತ್ತಾದಿಂದ ದಿಮಾಪುರ್​ಗೆ ಬಂದು ಹೋಂ ಕ್ವಾರಂಟೈನ್​ನಲ್ಲಿ ಇದ್ದ. ಇದೀಗ ಆತ ಬಂದಿದ್ದ ವಿಮಾನದಲ್ಲಿದ್ದವರನ್ನು, ಬಂದ ಬಳಿಕ ಈತನ ಸಂಪರ್ಕಕ್ಕೆ ಹೋದವರನ್ನು ಟ್ರೇಸ್​ ಮಾಡುವ ಕಾರ್ಯ ಪ್ರಾರಂಭವಾಗಿದೆ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts