More

    ‘ಶವಸಂಸ್ಕಾರಕ್ಕೆ ಸೌದೆಯನ್ನು ಉಚಿತವಾಗಿ ಕೊಡಲಾಗುವುದು’: ಹೀಗೊಂದು ಸಮಾಜ ಸೇವೆ, ನೊಂದವರಿಗೆ ಸಹಾಯ!

    ಬೆಂಗಳೂರು: ಕರೊನಾ ಹಾವಳಿ ಹಾಗೂ ಅದನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದರೆ, ಇನ್ನು ಕೆಲವರು ಖರ್ಚಿಗೂ ಕಾಸಿಲ್ಲದೆ, ಊಟಕ್ಕೂ ದುಡ್ಡಿಲ್ಲದೆ ಪರದಾಡುತ್ತಿರುವುದೂ ಇದೆ. ಇಂಥ ಸಂದರ್ಭದಲ್ಲಿ ದಿನಸಿ ಪದಾರ್ಥಗಳ ಕಿಟ್​, ಹಣ ಹಂಚಿಕೆ ಇತ್ಯಾದಿ ರೀತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಹಲವರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

    ಇದು ಜೀವನಕ್ಕಾಗಿ ಪರದಾಡುತ್ತಿರುವವರಿಗೆ ಸಹಾಯವಾದರೆ ಇನ್ನು ಕೆಲವರು ಜೀವನ್ಮುಕ್ತಿಗೆ ಪರದಾಡುತ್ತಿದ್ದು ಅಂಥವರಿಗೂ ಸಹಾಯ ಮಾಡಲು ಮುಂದಾದವರೂ ಇದ್ದಾರೆ. ಅರ್ಥಾತ್, ಕರೊನಾದಿಂದ ಜೀವ ಕಳೆದುಕೊಂಡವರ ಶವಸಂಸ್ಕಾರಕ್ಕೆ ಸೌದೆ ಸಿಗದವರು, ಸೌದೆಯ ಖರ್ಚು ಭರಿಸಲಾಗದವರಿಗೆ ಉಚಿತವಾಗಿ ಸೌದೆ ಕೊಡುವಂಥ ಸಮಾಜ ಸೇವೆ ಈಗ ಗಮನ ಸೆಳೆದಿದೆ.

    ಇದನ್ನೂ ಓದಿ: ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

    ಬೆಂಗಳೂರಿನ ಮಾಗಡಿ ರಸ್ತೆಯ ಎಂ. ಕೃಷ್ಣಣ್ಣ ಎಂಬವರು ಇಂಥದ್ದೊಂದು ವಿಭಿನ್ನ ಸಮಾಜ ಸೇವೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಂದಷ್ಟು ಸೌದೆಗಳನ್ನು ರಾಶಿ ಹಾಕಿ ಅಲ್ಲೊಂದು ಪೋಸ್ಟರ್ ಕೂಡ ನೇತು ಹಾಕಿದ್ದಾರೆ. ‘ಇಲ್ಲಿ ಶವಸಂಸ್ಕಾರಕ್ಕೆ ಸೌದೆಯನ್ನು ಉಚಿತವಾಗಿ ನೀಡಲಾಗುವುದು, ಟೆಂಪೋ ನೀವೇ ತರಬೇಕು..’ ಎಂಬ ಮಾಹಿತಿ ಇರುವ ಪೋಸ್ಟರ್​ನಲ್ಲಿ ಸಂಪರ್ಕಿಸಬೇಕಾದ ಮೊಬೈಲ್​ ಫೋನ್​ ಸಂಖ್ಯೆಗಳನ್ನೂ ನೀಡಲಾಗಿದೆ. ಒಟ್ಟಿನಲ್ಲಿ ಇದರಿಂದ ಸಂಕಷ್ಟದಲ್ಲಿರುವ ಒಂದಷ್ಟು ಮಂದಿಗೆ ಸಹಾಯ ಆಗುವಂತಿದೆ.

    'ಶವಸಂಸ್ಕಾರಕ್ಕೆ ಸೌದೆಯನ್ನು ಉಚಿತವಾಗಿ ಕೊಡಲಾಗುವುದು': ಹೀಗೊಂದು ಸಮಾಜ ಸೇವೆ, ನೊಂದವರಿಗೆ ಸಹಾಯ!

    ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

    ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts