More

    ವಿಶ್ವ ಹಿಂದು ಪರಿಷತ್​ನ ಶರಣ್​ ಪಂಪ್​ವೆಲ್​ ವಿರುದ್ಧ ದಾಖಲಾಯ್ತು ಎಫ್​ಐಆರ್​

    ತುಮಕೂರು: ಕಳೆದ ತಿಂಗಳ 28ನೇ ತಾರೀಕಿನಂದುವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರಿಂದ. ತುಮಕೂರು ನಗರದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶರಣ ಪಂಪವೆಲ್ ಆಗಮಿಸಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಎನ್ನುವ ಆರೋಪದ ಮೇಲೆ ಈಗ ಅವರ ವಿರುದ್ಧ ಎಫ್​ಆರ್​ ದಾಖಲಿಸಲಾಗಿದೆ.

    ಇದೀಗ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿಯಾಗಿರುವ ಶರಣ ಪಂಪವೆಲ್ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸೈಯದ್ ಬುರ್ಹಾನ್ ಉದ್ದೀನ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.

    ಶರಣ್​ ಪಂಪ್​ವೆಲ್​ ತಮ್ಮ ಭಾಷಣದ ಸಂದರ್ಭದಲ್ಲಿ ತುಮಕೂರು ಜಿಲ್ಲೆಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದು ಪ್ರಚೋದನಾಕಾರಿ ಹೇಳಿಕೆ ಎಂದು ಆರೋಪಿಸಿರುವ ಸೈಯದ್​ ಬುರ್ಹಾನ್​ ಉದ್ದೀನ್​, ಪ್ರಕರಣ ದಾಖಲಿಸಿದ್ದಾರೆ. ತಮ್ಮ ಭಾಷಣದಲ್ಲಿ ಶರಣ್​ ಪಂಪ್​ವೆಲ್​, ಗುಜರಾತ್ ಹತ್ಯಾಕಾಂಡವನ್ನ ಹಿಂದೂ ಪರಾಕ್ರಮ ಎಂದು ಹಾಡಿ ಹೊಗಳಿದ್ದರು.

    ಪಂಪವೇಲ್ ಭಾಷಣದಿಂದ ತುಮಕೂರಿನಲ್ಲಿ ಶಾಂತಿಭಂಗ ಆಗುತ್ತಿದೆ ಎಂದು ಆರೋಪಿಸಿರುವ ಸೈಯದ್​ ಬುರ್ಹಾನ್​ ಉದ್ದೀನ್​ ದೂರು ನೀಡಿದ್ದು, ಕಲಂ 157, ಸಿಆರ್ಪಿಸಿ (a)(b) ಅಡಿಯಲ್ಲಿ ಪ್ರಕರಣ ದಾಖಸಲಾಗಿದೆ. ಇದೀಗ ತಿಲಕ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts