More

    ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ-ನಿರ್ದೇಶಕರ ವಿರುದ್ಧ ಎಫ್​ಐಆರ್; ವಿದ್ಯಾರ್ಥಿಗಳಿಂದ ಪಡೆದ ಶುಲ್ಕ ಸ್ವಂತಕ್ಕೆ ಬಳಸಿದ ಆರೋಪ

    ಬೆಂಗಳೂರು: ವಿದ್ಯಾರ್ಥಿಗಳ ಮೆಡಿಕಲ್ ಸೀಟ್ ಶುಲ್ಕವನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಪಾವತಿಸದೆ ಮೋಸ ಮಾಡಿದ ಆರೋಪದ ಮೇಲೆ ಸಂಘದ ಮಾಜಿ ಅಧ್ಯಕ್ಷ, ನಿರ್ದೇಶಕರ ವಿರುದ್ಧ ವಿಶ್ವೇಶ್ವರಪುರ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್​ಐಆರ್ ದಾಖಲಾಗಿವೆ.

    ರಾಜ್ಯ ಒಕ್ಕಲಿಗರ ಸಂಘದ ಸಿಇಒ ಡಾ.ಸಿದ್ದರಾಮಯ್ಯ ಈ ಬಗ್ಗೆ ಎರಡು ದೂರು ನೀಡಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎಲ್. ನರೇಂದ್ರಬಾಬು ವಿರುದ್ಧ 10 ಲಕ್ಷ ರೂ. ವಂಚನೆ ಆರೋಪ ಪ್ರಕರಣ ಹಾಗೂ ಮಾಜಿ ನಿರ್ದೇಶಕರಾದ ಬ್ಯಾರವಳ್ಳಿ ನಾಗರಾಜು, ಎಂ.ಎಲ್. ಸತೀಶ್ ಮತ್ತು ಮಾಜಿ ಅಧ್ಯಕ್ಷ ಡಿ.ಎನ್. ಬೆಟ್ಟೆಗೌಡ ವಿರುದ್ಧ 26.50 ಲಕ್ಷ ರೂ. ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸವಾಲು ಹಾಕಿ ಈಜಲು ಹೋದವ ವಾಪಸ್​ ಬರಲೇ ಇಲ್ಲ; ಗೆಳೆಯರೊಂದಿಗೆ ಪೈಪೋಟಿಗಿಳಿದು ಪ್ರಾಣ ಕಳೆದುಕೊಂಡ ಯುವಕ

    2016-17ನೇ ಸಾಲಿನಲ್ಲಿ ಸಂಜನಾ ಹರೀಶ್ ಎಂಬಾಕೆಗೆ ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್‌ನಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ಹೇಳಿದ್ದ ನರೇಂದ್ರ ಬಾಬು, ವಿದ್ಯಾರ್ಥಿನಿಯಿಂದ 50 ಲಕ್ಷ ರೂ. ಪಡೆದಿದ್ದಾರೆ. ಈ ಪೈಕಿ 40 ಲಕ್ಷ ರೂ. ಸಂಘಕ್ಕೆ ಪಾವತಿಸಿ ಉಳಿದ 10 ಲಕ್ಷ ರೂ. ಸ್ವಂತಕ್ಕೆ ಬಳಸಿಕೊಂಡಿದ್ದರು. ಪ್ರಶ್ನಿಸಿದಾಗ 10 ಲಕ್ಷ ರೂ. ಮೌಲ್ಯದ ಚೆಕ್ ಕೊಟ್ಟಿದ್ದು, ಚೆಕ್ ಬೌನ್ಸ್ ಆಗಿದೆ. ಇಲ್ಲಿಯವರೆಗೂ ಹಣ ಪಾವತಿ ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಇದನ್ನೂ ಓದಿ: ಮಾರಣಾಂತಿಕವಾದ ಆಟ; ನಾಲೆ​ಗೆ ಬಿದ್ದ ನಾಲ್ವರಲ್ಲಿ ಇಬ್ಬರು ಮಕ್ಕಳ ಸಾವು..

    ಮತ್ತೊಂದು ಪ್ರಕರಣದಲ್ಲಿ ಬ್ಯಾರವಳ್ಳಿ ನಾಗರಾಜು, ಸತೀಶ್ ಮತ್ತು ಬೆಟ್ಟೆಗೌಡ ಸೇರಿಕೊಂಡು 2016-17ನೇ ಸಾಲಿನಲ್ಲಿ ಕಿಮ್ಸ್‌ನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಯಿಂದ 26.50 ಲಕ್ಷ ರೂ. ಪಡೆದಿದ್ದಾರೆ. ಆದರೆ, ಸಂಘಕ್ಕೆ ಪಾವತಿ ಮಾಡದೆ ವಂಚನೆ ಮಾಡಿದ್ದಾರೆ. ಆನಂತರ ಚೆಕ್ ಕೊಟ್ಟು ಬೌನ್ಸ್ ಮಾಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆಯೂ ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

    ಬಿಬಿಎಂಪಿ ಬೇಜವಾಬ್ದಾರಿಗೆ ಬಾಲಕ ಬಲಿ; ಪಾಲಿಕೆ ಉದ್ಯಾನದ ಹೊಂಡಕ್ಕೆ ಬಿದ್ದು 9 ವರ್ಷದ ಹುಡುಗ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts