More

    ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ; ಆರು ವರ್ಷಗಳಿಂದಲೂ ಪ್ರಥಮ ಸ್ಥಾನ!

    ನವದೆಹಲಿ: ಇಂದು ಅಂತಾರಾಷ್ಟ್ರೀಯ ಸಂತೋಷ ದಿನ. ಇದೇ ಸಂದರ್ಭದಲ್ಲಿ ‘ವರ್ಲ್ಡ್​ ಹ್ಯಾಪಿನೆಸ್​ ರಿಪೋರ್ಟ್​’ ಪ್ರಕಟಗೊಂಡಿದ್ದು, ಜಗತ್ತಿನ ಅತ್ಯಂತ ಸಂತೋಷಭರಿತ ದೇಶ ಯಾವುದು ಎಂಬುದು ಕೂಡ ಘೋಷಣೆಯಾಗಿದೆ. ವಿಶೇಷವೆಂದರೆ ಈ ವಿಷಯದಲ್ಲಿ ಒಂದು ದೇಶ ಆರು ವರ್ಷಗಳಿಂದಲೂ ಮೊದಲ ಸ್ಥಾನವನ್ನು ಕಾದುಕೊಂಡಿದೆ.

    ಇದನ್ನೂ ಓದಿ: ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

    ಯುನೈಟೆಡ್​ ನೇಷನ್ಸ್​ ಸಸ್ಟೈನೇಬಲ್​ ಡೆವೆಲಪ್​ಮೆಂಟ್​ ಸಲ್ಯೂಷನ್ಸ್​ ನೆಟ್​ವರ್ಕ್ ಪ್ರಕಟಿಸಿರುವ ವರ್ಲ್ಡ್​ ಹ್ಯಾಪಿನೆಸ್​ ರಿಪೋರ್ಟ್​ ಪ್ರಕಾರ, ಫಿನ್ಲೆಂಡ್​ ಜಗತ್ತಿನ ಅತ್ಯಂತ ಸಂತೋಷಭರಿತ ದೇಶ. ವಿಶೇಷವೆಂದರೆ ಸತತ ಆರನೇ ವರ್ಷವೂ ಈ ದೇಶ ಇದರಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎರಡು ಮತ್ತು ಮೂರನೇ ಸ್ಥಾನ ಕ್ರಮವಾಗಿ ಡೆನ್ಮಾರ್ಕ್ ಮತ್ತು ಐಲೆಂಡ್​ ಪಡೆದುಕೊಂಡಿದೆ.

    ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸುತ್ತಾನೆಂದು ಜೀವವನ್ನೇ ತೆಗೆದ ದಾಯಾದಿಗಳು!

    ದೇಶದ ಆದಾಯ, ಜನರ ಆರೋಗ್ಯ, ಜನರ ಸ್ಪಂದನೆ, ಜನರು ಜೀವನದ ಕುರಿತ ನಿರ್ಣಯ ತೆಗೆದುಕೊಳ್ಳುವಲ್ಲಿನ ಸ್ವಾತಂತ್ರ್ಯ, ಜನತೆಯ ಔದಾರ್ಯ ಮತ್ತು ಭ್ರಷ್ಟಾಚಾರರಹಿತ ವಾತಾವರಣ ಮುಂತಾದವುಗಳ ಪ್ರಮುಖವಾಗಿ ಪರಿಗಣಿಸಿ ಈ ಸ್ಥಾನವನ್ನು ನೀಡಲಾಗಿದೆ ಎಂದು ವರದಿಯು ಹೇಳಿದೆ. ಲೆಬನಾನ್ ಮತ್ತು ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿವೆ. –ಏಜೆನ್ಸೀಸ್

    ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts