More

    ದಾಖಲೆ ಪತ್ರಗಳಿಲ್ಲದ ಟೂರಿಸ್ಟ್ ಜೀಪಿಗೆ ದಂಡ

    ಪುತ್ತೂರು: ಕ್ರಮಬದ್ಧ ದಾಖಲೆ ಪತ್ರಗಳಿಲ್ಲದ ಟೂರಿಸ್ಟ್ ಜೀಪಿಗೆ ಪುತ್ತೂರು ನ್ಯಾಯಾಲಯ 14 ಸಾವಿರ ರೂ. ದಂಡ ವಿಧಿಸಿದೆ. ಇದೇ ವೇಳೆ ಜೀಪಿನ ಮಾಲೀಕ ಬಾಕಿ ಇರಿಸಿಕೊಂಡಿದ್ದ 12,876 ರೂ. ತೆರಿಗೆಯನ್ನು ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಿಸಿಕೊಂಡಿದೆ.

    ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಮ ನಾಯ್ಕ ಅವರು ಅ.15ರಂದು ಉಪ್ಪಿನಂಗಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟೂರಿಸ್ಟ್ ಜೀಪಿನಲ್ಲಿ ಚಾಲಕನ ಚಾಲನಾ ಪರವಾನಗಿ ಹೊರತು ಜೀಪಿನ ಎಫ್.ಸಿ, ಇನ್ಸೂರೆನ್ಸ್, ಹೊಗೆ ತಪಾಸಣೆ ಪ್ರಮಾಣ ಪತ್ರ ಲ್ಯಾಪ್ಸ್ ಆಗಿರುವುದು ಬೆಳಕಿಗೆ ಬಂದಿತ್ತು. ಜೀಪು ಮಾಲೀಕ ಹಿರ್ತಡ್ಕ ನಿವಾಸಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿಗೆ 14 ಸಾವಿರ ರೂ.ದಂಡ ವಿಧಿಸಿದೆ. ಅದೇ ರೀತಿ ಪ್ರಾದೇಶಿಕ ಸಾರಿಗೆ ಇಲಾಖೆ

    ಜೀಪಿನ ಬಾಕಿ ತೆರಿಗೆ ರೂ.12,876 ಅನ್ನು ಜೀಪು ಚಾಲಕನಿಂದ ಕಟ್ಟಿಸಿಕೊಂಡಿದೆ.
    ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದ ಜೀಪಿನ ಎಫ್‌ಸಿ, ಇನ್ಸೂರೆನ್ಸ್, ಹೊಗೆ ತಪಾಸಣೆ ಪ್ರಮಾಣ ಪತ್ರ 2016ರಲ್ಲೇ ಲ್ಯಾಪ್ಸ್ ಆಗಿತ್ತು. ಈ ದಾಖಲೆಗಳು ಇಲ್ಲದೆ 5 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಓಡಾಡುತ್ತಿದ್ದ ಜೀಪು ಈಗ ಪೊಲೀಸರ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts