More

  ವಿದೇಶಿ ಉತ್ಪನ್ನಗಳಿಗೆ ಪರ್ಯಾಯ ಸ್ವದೇಶಿ ಉತ್ಪನ್ನ ಹುಡುಕಿ: ಮನ್​ ಕಿ ಬಾತ್ ಮೂಲಕ ಮೋದಿ ಕರೆ

  ನವದೆಹಲಿ: ತಮ್ಮ 72ನೆಯ ಎಂದರೆ ವರ್ಷದ ಕೊನೆಯ ಮನ್​ ಕಿ ಬಾತ್​ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆತ್ಮನಿರ್ಭರತೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

  ಪ್ರತಿ ಮನೆಯಲ್ಲೂ ‘ವೋಕಲ್ ಫಾರ್ ಲೋಕಲ್’ ಮಂತ್ರ ಅನುರಣಿಸುತ್ತಿದ್ದು, ಉತ್ಪಾದಕರು ಮತ್ತು ಕೈಗಾರಿಕಾ ನಾಯಕರು ಕೂಡ ಅದಕ್ಕೆ ಒತ್ತು ನೀಡಬೇಕು. ಈಗಾಗಲೇ ಯಾವ ವಿದೇಶಿ ಉತ್ಪನ್ನ ಜಾಸ್ತಿ ಬಳಕೆ ಆಗುತ್ತಿದೆ ಹಾಗೂ ಆ ಮೂಲಕ ಅದು ನಮ್ಮ ಅವಿಭಾಜ್ಯ ಅಂಗದಂತಾಗಿದೆ ಎಂಬುದನ್ನು ಅಧ್ಯಯನ ಮಾಡಿ ಅದಕ್ಕೆ ಪರ್ಯಾಯವಾದ ಸ್ವದೇಶಿ ಉತ್ಪನ್ನವನ್ನು ಕಂಡು ಹಿಡಿಯುವಂತಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.

  ಇನ್ನು ಕರೊನಾ ವೈರಸ್​ನಿಂದಾಗಿ ದೇಶ ಹೊಸ ಸಾಮರ್ಥ್ಯವನ್ನು ಕಂಡುಕೊಂಡಿದೆ. ಕರೊನಾದಿಂದಾಗಿ ಜಗತ್ತಿನಾದ್ಯಂತ ಸರಬರಾಜು ಸರಪಣಿ ವ್ಯತ್ಯಯಗೊಂಡಿದ್ದರೂ ನಾವು ಪ್ರತಿ ಸಮಸ್ಯೆಯಿಂದಲೂ ಹೊಸ ಪಾಠ ಕಲಿತುಕೊಂಡಿದ್ದೇವೆ. ಇದನ್ನೇ ನಾವು ಆತ್ಮನಿರ್ಭರತೆ ಎಂದು ಕರೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಈ ವರ್ಷ ದೇಶದ ಜನರ ಮನೋಭಾವನೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಅದನ್ನು ನಮ್ಮ ಆರ್ಥಿಕ ಪರಿಣತರು ಕೂಡ ಅವರದೇ ಮಾನದಂಡದಲ್ಲಿ ವಿಶ್ಲೇಷಣೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಗ್ರಾಹಕರೂ ಸ್ವದೇಶಿ ನಿರ್ಮಿತ ಆಟಿಕೆಗಳಿಗೆ ಬೇಡಿಕೆ ಇಡುತ್ತಿರುವುದು ಅವರ ಯೋಚನಾಲಹರಿಯಲ್ಲಿ ಆಗಿರುವ ದೊಡ್ಡ ಬದಲಾವಣೆ. ಇದು ಈ ವರ್ಷದೊಳಗೆ ಜನರ ಮನಸ್ಥಿತಿಯಲ್ಲಿ ಆಗಿರುವ ದೊಡ್ಡ ಪರಿವರ್ತನೆ. ಇದನ್ನು ಸುಲಭದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)

  ದಯವಿಟ್ಟು ಸಿಕ್ಕಿಹಾಕೋಬೇಡಿ, ನಿಮ್ಮ ಹೆಸ್ರು ಗೊತ್ತಾದ್ರೆ ಮುಂದಾಗೋದ್ನ ಯಾರೂ ತಡೆಯೋಕಾಗಲ್ಲ; ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್​ ವಾರ್ನಿಂಗ್

  Web Exclusive| ಕಾಳ್ಗಿಚ್ಚಿನಿಂದ ಬಂಡೀಪುರ ರಕ್ಷಿಸಲು ಬರಲಿದೆ ವಾಯುಪಡೆ!

  ಚಾಲಕನಿಲ್ಲದೇ ಓಡುವ ಟ್ರೇನಿದು; ಐತಿಹಾಸಿಕ ರೈಲಿಗೆ ಕ್ಷಣಗಣನೆ- ನಾಳೆ ಪ್ರಧಾನಿ ಮೋದಿ ಚಾಲನೆ

  ಬೆಂಗಳೂರಿನಲ್ಲಿ ಬೈಕ್‌ ಸವಾರರ ಜಾಲಿರೈಡ್‌ಗೆ ಐದು ಕಾರುಗಳು ‘ಬಲಿ’! ಸರಣಿ ಅಪಘಾತದಿಂದ ಆತಂಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts