More

    ಚಾಲಕನಿಲ್ಲದೇ ಓಡುವ ಟ್ರೇನಿದು; ಐತಿಹಾಸಿಕ ರೈಲಿಗೆ ಕ್ಷಣಗಣನೆ- ನಾಳೆ ಪ್ರಧಾನಿ ಮೋದಿ ಚಾಲನೆ

    ನವದೆಹಲಿ: ಈ ರೈಲಿಗೆ ಚಾಲಕನೇ ಬೇಡ. ಕೇವಲ ಮಷಿನ್‌ಗಳ ಸಹಾಯದಿಂದ ಇದು ಚಲಿಸಬಲ್ಲುದು. ಇಂಥದ್ದೊಂದು ಚಾಲಕರಹಿತ ಟ್ರೇನ್‌ ನಾಳೆ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಬಿಡುಗಡೆ ಮಾಡಲಾಗಿದ್ದಾರೆ.

    ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್‌ನಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಇದಾಗಿದೆ. ಈ ರೈಲಿನ ಜತೆಗೆ ಪ್ರಧಾನಿ ಮೋದಿಯವರು, ಏರ್‌ಪೋರ್ಟ್‌ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡನ್ನೂ ಬಿಡುಗಡೆ ಮಾಡಲಿದ್ದಾರೆ.

    ಸಾಮಾನ್ಯವಾಗಿ ಚಾಲಕರಿಂದ ಆಗಬಹುದಾದ ಅನಾಹುತಗಳನ್ನು ಕೂಡ ಈ ರೈಲು ತಪ್ಪಿಸಲಿದೆ. ಮೆಟ್ರೋದಲ್ಲಿರುವ ಎ.ಸಿಯಿಂದಾಗಿ ಕರೊನಾ ವೈರಸ್‌ ಹರಡುವಿಕೆ ಹೆಚ್ಚಾಗುತ್ತದೆ ಎಂಬ ಆತಂಕವನ್ನೂ ಈ ರೈಲು ನಿವಾರಿಸಲಿದೆ. ಏಕೆಂದರೆ ಇದರಲ್ಲಿ ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನು ಅಳವಡಿಸಲಾಗಿದೆ.

    ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಆಗಿದ್ದು, ಕೋಲ್ಕತಾ ಮೆಟ್ರೋ ನಂತರ ದೇಶದ ಎರಡನೇ ಅತಿ ಹಳೆಯ ಮೆಟ್ರೋ ಆಗಿದೆ. ದೆಹಲಿ ಮೆಟ್ರೋ ಚಾಲಕರಹಿತ ರೈಲುಗಳು ಡಿಎಂಆರ್ ಸಿಯ ಮೂರನೇ ಹಂತದ ಭಾಗವಾಗಿ ತಯಾರಿಸಲಾದ ಮೆಜೆಂಟಾ ಲೈನ್ ಮತ್ತು ಪಿಂಕ್ ಲೈನ್ ನಲ್ಲಿ ಕಾರ್ಯನಿರ್ವಹಿಸಲಿವೆ.

    2017ರ ಸೆಪ್ಟೆಂಬರ್ ನಲ್ಲಿ ದೆಹಲಿ ಮೆಟ್ರೋ ಪಿಂಕ್ ಲೈನ್‌ನಲ್ಲಿ 20 ಕಿ.ಮೀ ಉದ್ದದ ಹೊಸ ‘ಚಾಲಕರಹಿತ ರೈಲು’ಗಳ ಪೂರ್ಣ ಸಿಗ್ನಲ್ ಪ್ರಯೋಗಗಳನ್ನು ಆರಂಭಿಸಿತ್ತು.

    ಬೆಂಗಳೂರಿನಲ್ಲಿ ಬೈಕ್‌ ಸವಾರರ ಜಾಲಿರೈಡ್‌ಗೆ ಐದು ಕಾರುಗಳು ‘ಬಲಿ’! ಸರಣಿ ಅಪಘಾತದಿಂದ ಆತಂಕ

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ಕಣ್ಣೆದುರೇ ಕುಟುಂಬಸ್ಥರ ಮೇಲೆ ಥರ್ಡ್‌ ಡಿಗ್ರಿ ಪ್ರಯೋಗಿಸಿದ ಪೊಲೀಸರು: ಬೆದರಿ ಯುವತಿಯ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts