More

    ಸಾಧಾರಣ 110 ರನ್ ಚೇಸಿಂಗ್ ಮಾಡಲಾಗದೆ ಸೋತ ಮಯಾಂಕ್ ಪಡೆ: ಸಿದ್ಧಾರ್ಥ್ ದಾಳಿಗೆ ತತ್ತರ

    ಅಹಮದಾಬಾದ್: ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯದ ಅಂತಿಮ ದಿನದವರೆಗೂ ಬಿಗಿ ಹಿಡಿತ ಸಾಧಿಸಿದ ಪ್ರವಾಸಿ ಕರ್ನಾಟಕ ತಂಡ ಸುಲಭ ಗುರಿಯ ಚೇಸಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ (42ಕ್ಕೆ 7) ಮಾರಕ ದಾಳಿಗೆ ತತ್ತರಿಸಿ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಎದುರು 6 ರನ್‌ಗಳಿಂದ ಆಘಾತಕಾರಿ ಸೋಲು ಕಂಡಿದೆ. ಇದರೊಂದಿಗೆ ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 7 ವಿಕೆಟ್‌ಗೆ 171 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಗುಜರಾತ್, ಉಮಾಂಗ್ (57 ರನ್, 100 ಎಸೆತ, 5 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನೆರವಿನಿಂದ ಮತ್ತೆ 48 ರನ್ ಸೇರಿಸಿ 80.2 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟ್ ಆಯಿತು. 110 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ, ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿ ಸುಲಭ ಗೆಲುವಿನತ್ತ ಸಾಗಿದ್ದರೂ, ನಂತರ ನಾಟಕೀಯ ಕುಸಿತ ಕಂಡು 26.2 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು.

    ಗುಜರಾತ್: 374 ಹಾಗೂ 219 (ಉಮಾಂಗ್ 57, ಚಿಂತನ್ 23, ವಿ.ಕೌಶಿಕ್ 16ಕ್ಕೆ 3, ರೋಹಿತ್ ಕುಮಾರ್ 61ಕ್ಕೆ 3). ಕರ್ನಾಟಕ: 374 ಹಾಗೂ 26.2 ಓವರ್‌ಗಳಲ್ಲಿ 103 (ಮಯಾಂಕ್ 19,ಪಡಿಕ್ಕಲ್ 31, ಶುಭಾಂಗ್ 27, ಮನೀಷ್ 0,ಕೌಶಿಕ್ 4*, ಪ್ರಸಿದ್ಧ 7, ಸಿದ್ಧಾರ್ಥ್ 42ಕ್ಕೆ 7, ವಾೇಲಾ 38ಕ್ಕೆ 3). ಪಂದ್ಯಶ್ರೇಷ್ಠ: ಸಿದ್ಧಾರ್ಥ್ ದೇಸಾಯಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts