More

    ಮದುವೆ ಕಾರ್ಯಕ್ರಮದಲ್ಲಿ ಹಾಡಿನ ವಿಚಾರಕ್ಕೆ ಶುರುವಾದ ಜಗಳ ಗುಂಡು ಹಾರಿ ಅಂತ್ಯ!

    ಬಿಹಾರ: ಬಿಹಾರದ ಅರ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದ ವಿವಾಹದ ಕಾರ್ಯಕ್ರಮದಲ್ಲಿ ನಡೆದ ನೃತ್ಯ ಕಾರ್ಯಕ್ರಮದ ವೇಳೆ ಹಾಡನ್ನು ಆಯ್ಕೆ ಮಾಡುವ ವಿಚಾರದಲ್ಲಿ ರೈಲ್ವೆ ಇಲಾಖೆ ಉದ್ಯೋಗಿಯೊಬ್ಬರನ್ನು ದುಷ್ಕರ್ಮಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ.

    ಮೃತರನ್ನು ಅಭಿಷೇಕ್ ಕುಮಾರ್ ಸಿಂಗ್ ಅಲಿಯಾಸ್ ಭಾಸ್ಕರ್ (23) ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮೃತರ ಕಣ್ಣಿನ ಎಡಭಾಗದಲ್ಲಿ ಗುಂಡಿನ ದಾಳಿಗೆ ಸಂಬಂಧಿಸಿದ ಗುರುತುಗಳು ಪತ್ತೆಯಾಗಿವೆ.

    ಆಗಿದ್ದೇನು?
    ವಿವಾಹ ಸಂಭ್ರಮಾಚರಣೆ ವೇಳೆ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮೀಪದ ಹಳ್ಳಿಯ ಕೆಲವು ಕಿಡಿಗೇಡಿಗಳು ಸ್ಥಳಕ್ಕೆ ಪ್ರವೇಶಿಸಿ ಅವರಿಗೆ ಬೇಕಾದ ಹಾಡುಗಳನ್ನು ನುಡಿಸುವಂತೆ ಒತ್ತಾಯಿಸಿದ್ದರು. ಮೃತ 23 ವರ್ಷದ ಜೂನಿಯರ್ ಇಂಜಿನಿಯರ್ ಮತ್ತು ಅವರ ಕುಟುಂಬ ಸದಸ್ಯರು ದುಷ್ಕರ್ಮಿಗಳನ್ನು ಸ್ಥಳದಿಂದ ಹೊರ ಹೋಗುವಂತೆ ಕೇಳಿದಾಗ, ಹೊಡೆದಾಟ ನಡೆದಿದೆ. ಈ ನಡುವೆ ದುಷ್ಕರ್ಮಿಗಳು ಬಂದೂಕು ತೆಗೆದುಕೊಂಡು ಅಭಿಷೇಕ್‌ಗೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಅಭಿಷೇಕ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಸಿಂಗ್ ಅವರ ದೇಹವನ್ನು ಅರ್ರಾದ ಸದರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts