More

    ಎಲ್ಲೆಲ್ಲಿ ಚಿನ್ನವನ್ನು ಅಡಗಿಸುತ್ತಾರಪ್ಪಾ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದ…

    ಬೆಂಗಳೂರು: ಈ ಸ್ಮಗ್ಲಿಂಗ್​ ಮಾಡುವವರು ಕಳ್ಳಸಾಗಣಿಕೆ ಮಾಡಲು ನವೀನ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಕಳ್ಳ-ಪೊಲೀಸ್​ ಆಟದಲ್ಲಿ ಅವರು ಒಂದು ಹೆಜ್ಜೆ ಮುಂದಿರದಿದ್ದರೆ ಜೈಲು ಖಚಿತ. ಹೀಗಾಗಿ ಆಗಾಗ ಹೊಸ ರೀತಿಯಲ್ಲಿ ಕಳ್ಳರು ಸಿಕ್ಕಿ ಹಾಕಿಕೊಳ್ಳುವ ಸುದ್ದಿ ಕೇಳುತ್ತಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಭೂಪ ನವೀನ ಮಾದರಿಯಲ್ಲಿ ಸ್ಮಗ್ಲಿಂಗ್​ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಗೆ ಈ ಭೂಪ ಸಿಕ್ಕಿಬಿದ್ದಿದ್ದು ಚಿನ್ನವನ್ನು ಒಯ್ಯಲು ಈತ ಮಾಡಿದ್ದ ಪ್ಲಾನ್​ ನೋಡಿದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

    ಈತ, ಅಕ್ರಮವಾಗಿ ಪ್ಯಾಂಟ್​ನಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ. ಬಹರೇನ್ ದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈ ಪ್ರಯಾಣಿಕ ತೀವ್ರ ತಪಾಸಣೆ ವೇಳೆ ಅಕ್ರಮ ಚಿನ್ನ ಸಾಗಾಣಿಕೆ ವಿಚಾರವಾಗಿ ಸಿಕ್ಕಿಬಿದ್ದಿದ್ದಾನೆ.

     

    ಈತ ಭಾರಿ ಉಪಾಯ ಹೂಡಿ ಭಾರತದ ಒಳಕ್ಕೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಈತ ತನ್ನ ಪ್ಯಾಂಟ್​ನಲ್ಲಿ ಮತ್ತೊಂದು ಪ್ಯಾಂಟ್ ಪದರವನ್ನು ಹೊಲಿದುಕೊಂಡು ಅದರ ನಡುವೆ ಚಿನ್ನವನ್ನು ಇಟ್ಟು ಸಾಗಿಸುತ್ತಿದ್ದ. ದಪ್ಪಗಿನ ಮಾಮೂಲಿ ಪ್ಯಾಂಟ್​ ಎಂದು ಕಸ್ಟಮ್ಸ್​ ಅಧಿಕಾರಿಗಳು ಭಾವಿಸುತ್ತಾರೆ ಎಂದುಕೊಂಡು ಧೈರ್ಯವಾಗಿ ಬಂದಿಳಿದಿದ್ದಾನೆ.

    ಆದರೆ ನಮ್ಮ ಚಾಲಾಕಿ ಅಧಿಕಾರಿಗಳಿಗೆ ಅನುಮಾನ ಬಂದಿದ್ದು ಅವರು ಪರಿಶೀಲನೆ ನಡೆಸುವಾಗ ಚಿನ್ನ ಪತ್ತೆಯಾಗಿದೆ. ಸುಮಾರು 13 ಲಕ್ಷ 46 ಸಾವಿರ 960 ರೂ. ಮೌಲ್ಯದ 238 ಗ್ರಾಂ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts