More

    ಫಿಫಾ ವಿಶ್ವಕಪ್‌ನಲ್ಲಿ ಕನ್ನಡತಿಯ ವೈದ್ಯಕೀಯ ಸೇವೆ

    ಶಿವಮೊಗ್ಗ: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಕನ್ನಡತಿಯೊಬ್ಬಳು ಸೇವೆ ಸಲ್ಲಿಸುತ್ತಿದ್ದು ದೇಶದ ಗಮನ ಸೆಳೆದಿದ್ದಾರೆ.
    ಕತಾರ್‌ನ ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜಾ ಅವರು ಶುಶ್ರೂಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ಗೋಪಾಳ ನಿವಾಸಿ, ಖಾಸಗಿ ನಗರ ಸಾರಿಗೆ ಬಸ್‌ನ ಮಾಲೀಕ ಪೌಲ್ ಗೋವಿಸ್ ಅವರ ಸೊಸೆ ರೋಶಲ್ ಡಿಸೋಜಾ ಪ್ರಸ್ತುತ ಕಳೆದೊಂದು ವಾರದಿಂದ ವಿಶ್ವದ ನಾನಾ ದೇಶಗಳ ಫುಟ್‌ಬಾಲ್ ಅಭಿಮಾನಿಗಳ ಆರೋಗ್ಯದ ಕಾಳಜಿ ವಹಿಸುವ ತಂಡದಲ್ಲಿದ್ದಾರೆ.
    ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ರೋಶಲ್ ಡಿಸೋಜಾ ಅವರು ಶಿವಮೊಗ್ಗದ ಪೌಲ್ ಗೋವಿಸ್ ಅವರ ಪುತ್ರ ಎಲ್ವಿಸ್ ಗೋವಿಸ್ ಅವರನ್ನು 2017ರಲ್ಲಿ ಮದುವೆಯಾಗಿದ್ದರು. ಎಲ್ವಿಸ್ ಅವರು ಕತಾರ್‌ನಲ್ಲಿ 9 ವರ್ಷದಿಂದ ಕಂಪನಿಯೊಂದರ ಮಾರ್ಕೆಟಿಂಗ್ ಇಂಜಿನಿಯರ್ ಆಗಿದ್ದಾರೆ, ಅವರ ಪತ್ನಿ ರೋಶಲ್ ಕತಾರ್‌ನ ನ್ಯಾಷನಲ್ ಅಹಮದ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ನಿಯೋಜಿಸಿರುವ ವೈದ್ಯಕೀಯ ತಂಡದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕತಾರ್‌ನಲ್ಲಿ ವಿಶ್ವಕಪ್ ಫುಟ್‌ಬಾಲ್‌ನ ಅಲೆ ಎದ್ದಿದೆ. ಜತೆಗೆ ಪ್ರತಿ ಕ್ಷಣ ಸಂಭ್ರಮದಿಂದ ತುಂಬಿದೆ. ಕನ್ನಡಿಯಾಗಿ ಸಹೋದ್ಯೋಗಿಗಳೊಂದಿಗೆ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts