More

    ಕಳಸಾರೋಹಣ ಕಾರ್ಯಕ್ರಮಕ್ಕೆ ಚಾಲನೆ

    ಸಂಬರಗಿ: ಸಮೀಪದ ತಾಂವಶಿ ಗ್ರಾಮದ ಪರಮಾನಂದ ದೇವಸ್ಥಾನ ಕಳಸಾರೋಹಣ ಕಾರ್ಯಕ್ರಮಕ್ಕೆ ಸಚಿವ ಶ್ರೀಮಂತ ಪಾಟೀಲ ಮಂಗಳವಾರ ಚಾಲನೆ ನೀಡಿದರು. ನದಿ ಇಂಗಳಗಾಂವದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಗಡಿಭಾಗದ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು ಎಂದರು. ರಾವಸಾಬ ಐಹೊಳೆ ಮಾತನಾಡಿದರು. ದಯಾನಂದ ಸ್ವಾಮೀಜಿ, ಅಪ್ಪು ಲಕಡಣ್ಣವರ, ರಾಜು ಪಾಟೀಲ, ರಾಮಗೊಂಡ ಮಿರ್ಜಿ ಇದ್ದರು.

    ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನ

    ಕಾಗವಾಡ: ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ರಸ್ತೆ, ವಿದ್ಯುತ್, ಕುಡಿಯುವ ನೀರು, ಚರಂಡಿ ಮೂಲ ಸೌಲಭ್ಯಗಳಿಗೆ ಮಹತ್ವ ನೀಡಲಾಗಿದ್ದು, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಜವಳಿ ಹಾಗೂ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

    ಸಮೀಪದ ಶೇಡಬಾಳ ಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2 ಕೋಣೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗಡಿಭಾಗದಲ್ಲಿ ಹಳೆಯ ಶಾಲಾ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಸುಮಾರು 17.50 ಲಕ್ಷ ರೂ. ವೆಚ್ಚದಲ್ಲಿ 165 ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

    ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಜನರ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಶೇಡಬಾಳ ರೈಲ್ವೆ ಸ್ಟೇಶನ್‌ದಲ್ಲಿ ಒಂದು ಶಾಲಾ ಕೊಠಡಿ, ಲೋಕುರ ಗ್ರಾಮದಲ್ಲಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 3 ಕೊಠಡಿ ನಿರ್ಮಾಣ ಕಾಮಗಾರಿ, ಮರಾಠಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು.

    ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹಿರೇಮಠ, ಬಿಇಒ ಎಂ.ಆರ್.ಮುಂಜೆ, ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲಿ, ಭರತೇಶ ಪಾಟೀಲ, ಅಣ್ಣಾ ಪಾಟೀಲ, ಅಣ್ಣಾಸಾಬ ಹಂಡಗೆ, ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ನೇಮಿನಾಥ ಪಾಟೀಲ, ಎಂ.ಎ.ಗಣೆ, ಬಾಳಾಸಾಬ ಪಾಟೀಲ, ಎಂ.ಬಿ.ಪಾಟೀಲ ಇದ್ದರು.
    ಕಾಗವಾಡ ವರದಿ: ಪರಿಸರ ಮಾಲಿನ್ಯ ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಗಿಡ ನೆಡಬೇಕು ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

    ಶೇಡಬಾಳ ಪಟ್ಟಣದ ದಲಿತ ಕೇರಿಯಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನದಲ್ಲಿ ಮಂಗಳವಾರ ವನಮಹೋತ್ಸವ ಅಂಗವಾಗಿ ಗಿಡ ನೆಟ್ಟು ಮಾತನಾಡಿದ ಅವರು, ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದರು.

    ಶೇಡಬಾಳ ಪಪಂ ಪ್ರಭಾರಿ ಅಧ್ಯಕ್ಷೆ ಆಕಾಶಿನಿ ಶ್ರೀನಿವಾಸ ಕಾಂಬಳೆ, ಪಪಂ ಸದಸ್ಯರಾದ ರವಿ ಕಾಂಬಳೆ, ಶಾಂತಿನಾಥ ಉಪಾಧ್ಯೆ, ಅನಿಲ ಸಗರೆ, ಸುನೀಲ ಸೊಟ್ರಾಯಿ, ರತ್ನಪ್ಪ ಮಾಳಪ್ಪಗೋಳ, ಮುದಕಪ್ಪ ನಾಯಿಕ, ಯುವ ಮುಖಂಡ ಭರತೇಶ ಪಾಟೀಲ, ಅಣ್ಣಾ ಪಾಟೀಲ, ಅಣ್ಣಾಸಾಬ ಹಂಡಗೆ, ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ನೇಮಿನಾಥ ಪಾಟೀಲ, ಎಂ.ಎ.ಗಣೆ, ಬಾಳಾಸಾಬ ಪಾಟೀಲ, ಎಂ.ಬಿ.ಪಾಟೀಲ ಇದ್ದರು.

    ಸಂಬರಗಿ: ಸಮೀಪದ ಖಿಳೇಗಾಂವ ಬಸವೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ನಿಮಿತ್ತ ಸೋಮವಾರ ಭೇಟಿ ನೀಡಿದ ಸಚಿವ ಶ್ರೀಮಂತ ಪಾಟೀಲ ಅವರಿಗೆ ಕಾರ್ಯಕರ್ತರು ಬಸವೇಶ್ವರ ಭಾವಚಿತ್ರ ನೀಡಿ, ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts