More

    ಜನ ಧನ ಹೆಸರಲ್ಲಿ ಯಾರಾದರೂ ಕರೆ ಮಾಡಿದರೆ ಜೋಕೆ; ವಂಚಕರ ಮಾತಿಗೆ ಮರುಳಾಗಬೇಡಿ…

    ಬೆಂಗಳೂರು: ಪ್ರಧಾನಮಂತ್ರಿ ಜನ ಧನ ಯೋಜನೆಯಡಿ ಸಾಲ ಕೊಡಿಸುತ್ತೇವೆ ಅಥವಾ ಸಾಲ ಪಡೆಯಲು ನೀವು ಅರ್ಹರಾಗಿದ್ದೀರಿ ಎಂದು ಅನಾಮಿಕ ನಂಬರ್‌ನಿಂದ ಸಂದೇಶ ಬಂದರೆ ಎಚ್ಚರಿಕೆ! ಸಾಲ ಮಂಜೂರು ಮಾಡಿಸುವುದಾಗಿ ನಂಬಿಸುವ ಸೈಬರ್ ವಂಚಕರು, ಲಕ್ಷಾಂತರ ರೂ. ಸುಲಿಗೆ ವಂಚಿಸುತ್ತಾರೆ. ಇದೇ ರೀತಿಯಲ್ಲಿ ಬೆಂಗಳೂರಿನಲ್ಲಿನ ಮಹಿಳೆಯೊಬ್ಬರು ವಂಚನೆಗೆ ಒಳಗಾಗಿ 1.52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

    ಆಗಿದ್ದೇನು?: ಶ್ರೀನಗರ ನಿವಾಸಿ ಸುಶೀಲಾ ಎಂಬುವರು ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅನಾಮಿಕರು, ಆಧಾರ್ ಕಾರ್ಡ್‌ಗೆ ಸಬ್ಸಿಡಿ ಸಾಲ ಪಡೆಯಬಹುದು ಎಂಬ ಸಂದೇಶ ಕಳುಹಿಸಿದ್ದರು.ಈ ವೇಳೆ ಸುಶೀಲಾ ಅವರು, ಸಂದೇಶದಲ್ಲಿನ ಫೋನ್​ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಹೌದು, ನೀವು ಪ್ರಧಾನಮಂತ್ರಿ ಜನ ಧನ್ ಯೋಜನೆಯಡಿ ಸಾಲ ಪಡೆಯಲು ಅರ್ಹರಾಗಿದ್ದೀರಿ. ಇದಕ್ಕೆ ಕೆಲವು ಸೇವಾ ಶುಲ್ಕ ಪಾವತಿಸಬೇಕು ಎಂದು ಅನಾಮಿಕ ವ್ಯಕ್ತಿ ಹೇಳಿದ್ದ.

    ಆತನ ಮಾತನ್ನು ನಂಬಿದ ಸುಶೀಲಾ, ತನ್ನ ಪುತ್ರಿಯ ಖಾತೆಯಿಂದ ಹಂತಹಂತವಾಗಿ 1.52 ಲಕ್ಷ ರೂ. ವರ್ಗಾಯಿಸಿದ್ದಳು. ಹಣ ಸಂದಾಯದ ನಂತರ ಅನಾಮಿಕ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ವಂಚನೆಯಾಗಿರುವುದು ಗೊತ್ತಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಾರಿಗೆ ಮುಷ್ಕರ ಮತ್ತಷ್ಟು ತೀವ್ರ: ನಾಳೆಯಿಂದ ಉಪವಾಸ ಸತ್ಯಾಗ್ರಹ

    ವಿಷ್ಣುವರ್ಧನ್ ಬಗ್ಗೆ ಕೀಳುಮಟ್ಟದ ಹೇಳಿಕೆ; ತೆಲುಗು ನಟನ ವಿರುದ್ಧ ಸಿಡಿದೆದ್ದ ಚಂದನವನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts